ವರ್ಷಾಂತ್ಯದಲ್ಲಿ ರೆನೊ ಡಸ್ಟರ್ 4x4 ಬಿಡುಗಡೆ?
ದೇಶದ ವಾಹನ ಪ್ರೇಮಿಗಳು ಬಹಳ ದಿನಗಳಿಂದಲೇ ಡಸ್ಟರ್ ಫೋರ್ ವೀಲ್ ಡ್ರೈವ್ (4WD) ವೆರಿಯಂಟ್‌ಗಾಗಿ ಕಾಯುತ್ತಿದ್ದಾರೆ. ಇದೀಗ ಬಂದಿರುವ ವರದಿ ನಿಜವಾದ್ದಲ್ಲಿ ರೆನೊ ಡಸ್ಟರ್ 4x4 ನಿಕಟ ಭವಿಷ್ಯದಲ್ಲೇ ಭಾರತ ರಸ್ತೆ ಪ್ರವೇಶಿಸಲಿದೆ. ಬಲ್ಲ ಮೂಲಗಳ ಪ್ರಕಾರ, ಡಸ್ಟರ್ 4x4 ಬಿಡುಗಡೆ ದಿನಾಂಕ ನಿಗದಿಯಾಗಿದ್ದು, ವರ್ಷಾಂತ್ಯದಲ್ಲಿ ಬಿಡುಗಡೆಯಾಗಲಿದೆ.
ಈ ಹಿಂದೆ 2012ರಲ್ಲಿ ಲಾಂಚ್ ಆಗಿದ್ದ ಡಸ್ಟರ್, ಫಾನ್ಸ್ ವಾಹನ ತಯಾರಕ ಸಂಸ್ಥೆಯಿಂದ ಭಾರತದಲ್ಲಿ ಅತ್ಯಂತ ಹೆಚ್ಚು ಮಾರಾಟವಾದ ಮಾದರಿಯಾಗಿದೆ. ಒಂದು ಹಂತದಲ್ಲಿ ಅತ್ಯುತ್ತಮ ಮಾರಾಟ ಹೊಂದಿರುವ ಕಾಂಪಾಕ್ಟ್ ಎಸ್‌ಯುವಿ ಎನಿಸಿಕೊಂಡಿರುವ ಡಸ್ಟರ್, ನಿಧಾನವಾಗಿ ಫೋರ್ಡ್ ಇಕೊಸ್ಪೋರ್ಟ್ ಹಾಗೂ ಮಹೀಂದ್ರ ಸ್ಕಾರ್ಪಿಯೊಗೆ ತನ್ನ ಸ್ಥಾನ ಬಿಟ್ಟುಕೊಟ್ಟಿದೆ.

ಹೀಗಾಗಿ ರೆನೊಗೀಗ ಫೋರ್ ವೀಲ್ ಡ್ರೈವ್ ಲಾಂಚ್ ಮಾಡುವ ಸುಸಂದರ್ಭ ಒದಗಿ ಬಂದಿದೆ. ನಿಮ್ಮ ಮಾಹಿತಿಗಾಗಿ, ಚೆನ್ನೈನ ರೆನೊ-ನಿಸ್ಸಾನ್ ಘಟಕದಲ್ಲಿ ಉತ್ಪಾದನೆಯಾಗುತ್ತಿರುವ ಫೋರ್ ವೀಲ್ ರೆನೊ ಡಸ್ಟರ್, ಬ್ರಿಟನ್ ಸೇರಿದಂತೆ ಯುರೋಪ್ ರಾಷ್ಟ್ರಗಳಿಗೆ ರಫ್ತಾಗುತ್ತಿದೆ. ಇದು ಯುರೋಪ್‌ನಲ್ಲಿ ಡ್ಯಾಸಿಯಾ ಬ್ಯಾಡ್ಜ್‌ನಲ್ಲಿ ಮಾರಾಟವಾಗುತ್ತಿದೆ.
ಬ್ರಿಟನ್‌ನಲ್ಲಿ ಫೋರ್ಡ ವೀಲ್ ಡ್ರೈವ್ ಡಸ್ಟರ್, 1.5 ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‌ಗಳಲ್ಲಿ ಲಭ್ಯವಿದೆ. ಅಲ್ಲದೆ 6 ಸ್ಪೀಡ್ ಟ್ರಾನ್ಸ್‌ಮಿಷನ್ ಕೂಡಾ ಲಭ್ಯವಿದೆ. ಹಾಗಿದ್ದರೂ ಭಾರತದಲ್ಲಿ ಮಾರಾಟವಾಗುವ ಫೋರ್ ವೀಲ್ ಡ್ರೈವ್ ವೆರಿಯಂಟ್, 107 ಅಶ್ವಕ್ತಿ (240 ಎನ್‌ಎಂ ಟಾರ್ಕ್) ಉತ್ಪಾದಿಸಲು ಸಾಮರ್ಥ್ಯವುಳ್ಳ ಡೀಸೆಲ್ ಎಂಜಿನ್ ಪಡೆದುಕೊಳ್ಳುವ ಸಾಧ್ಯತೆಯಿದೆ.
ಟು ವೀಲ್ ಡ್ರೈವ್‌ಗೆ ಹೋಲಿಸಿದಾಗ ಫೋರ್ ವೀಲ್ ಡ್ರೈವ್ ಡಸ್ಟರ್, 5ಎಂಎಂ ಹೆಚ್ಚುವರಿ ಗ್ರೌಂಡ್ ಕ್ಲಿಯರನ್ಸ್ (210 ಎಂಎಂ) ಹೊಂದಿರಲಿದೆ. ಇವೆಲ್ಲದರಿಂದ ಸಹಜವಾಗಿಯೇ ದರ ಕೂಡಾ ದುಬಾರಿಯಾಗಲಿದೆ. ಇದು 12 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.


Click it and Unblock the Notifications








