4 ಲಕ್ಷಕ್ಕೆ ಬರುತ್ತಿದೆ ರೆನೊ ಎಂಟ್ರಿ ಲೆವೆಲ್ ಕಾರು
ಸಣ್ಣ ಕಾರುಗಳಿಗೆ ದೇಶದಲ್ಲಿ ಹೆಚ್ಚಿನ ಬೇಡಿಕೆಯಿದೆ. ಇದನ್ನೇ ಗಮನ ಕೇಂದ್ರಿಕರಿಸಿರುವ ದೇಶದ ಮುಂಚೂಣಿಯ ವಾಹನ ತಯಾರಕ ಸಂಸ್ಥೆಗಳು ಎಂಟ್ರಿ ಲೆವೆಲ್ ಕಾರುಗಳನ್ನು ಬಿಡುಗಡೆ ಮಾಡುವುದರತ್ತ ಗಮನ ಹರಿಸಿದೆ. ಇದಕ್ಕೊಂದು ಉದಾಹರಣೆಯೆಂಬಂತೆ ಎಲ್ಲ ಹೊಸತನದಿಂದ ಕೂಡಿದ ದಟ್ಸನ್ ಗೊ ಹ್ಯಾಚ್‌ಬ್ಯಾಕ್ ಕಾರು ಇನ್ನೇನು ಕೆಲವೇ ದಿನಗಳಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ.
ಇದೀಗ ರೆನೊ ಸರದಿ. ವರದಿಗಳ ಪ್ರಕಾರ 2015ನೇ ಸಾಲಿನಲ್ಲಿ ನಾಲ್ಕು ರು.ಗಳ ಅಸುಪಾಸಿನಲ್ಲಿ ರೆನೊ ಎಂಟ್ರಿ ಲೆವೆಲ್ ಕಾರು ಪರಿಚಯವಾಗಲಿದೆ. ಇದು ಮಾರುತಿಯ ಅತ್ಯುತ್ತಮ ಮಾರಾಟ ಕಾರು ಆಲ್ಟೊ ವಿಭಾಗದಲ್ಲೇ ಗುರುತಿಸಿಕೊಳ್ಳಲಿದೆ.

ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಈಗಿರುವ ಶೇಕಡಾ 2.6ರಷ್ಟು ಮಾರುಕಟ್ಟೆ ಶೇರನ್ನು ಶೇಕಡಾ 5ಕ್ಕೆ ಏರಿಸುವುದು ಫ್ರಾನ್ಸ್ ಮೂಲದ ಈ ವಾಹನ ತಯಾರಕ ಸಂಸ್ಥೆಯ ಗುರಿಯಾಗಿದೆ. ಇದರಂತೆ ನಾಲ್ಕು ಲಕ್ಷ ರು.ಗಳ ಬಜೆಟ್ ಕಾರು ಪರಿಚಯಿಸಲು ಹೊರಟಿದೆ.
ಇಲ್ಲಿ ಗಮನಾರ್ಹ ಅಂಶವೆಂದರೆ ರೆನೊ ಜತೆ ಪಾಲುದಾರಿಕೆ ಹೊಂದಿರುವ ನಿಸ್ಸಾನ್ ಸಣ್ಣ ಕಾರು ಬ್ರಾಂಡ್ ಆಗಿರುವ ದಟ್ಸನ್, ಗೊ ಹ್ಯಾಚ್‌ಬ್ಯಾಕ್ ಕಾರನ್ನು ಪರಿಚಯಿಸಲಿದೆ. ಅಂದರೆ ಮುಂದಿನ ವರ್ಷ ಆಗಮನವಾಗಲಿರುವ ರೆನೊ ಎಂಟ್ರಿ ಲೆವೆಲ್ ಕಾರು, ದಟ್ಸನ್ ಗೊ ರಿ ಬ್ಯಾಡ್ಜ್ ಪಡೆದುಕೊಳ್ಳುವ ಸಾಧ್ಯತೆ ಇದೆ.


Click it and Unblock the Notifications








