ರೆನೊದಿಂದ ಉಚಿತ ಸರ್ವೀಸ್ ಕ್ಯಾಂಪ್
ಫ್ರಾನ್ಸ್ ಮೂಲದ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯಾಗಿರುವ ರೆನೊ, ಭಾರತದಲ್ಲಿ ಜನಪ್ರಿಯ ಮಾದರಿಗಳನ್ನು ಮಾರಾಟ ಮಾಡುತ್ತಿದೆ. ಇವುಗಳಲ್ಲಿ ರೆನೊ ಸ್ಕಾಲಾ, ಪಲ್ಸ್, ಡಸ್ಟರ್, ಫ್ಲೂಯೆನ್ಸ್ ಮತ್ತು ಕೋಲಿಯಸ್ ಪ್ರಮುಖವಾಗಿದೆ.
ಇದೀಗ ಮಾರಾಟದ ಬಳಿಕವೂ ಗ್ರಾಹಕರಿಗೆ ಗರಿಷ್ಠ ಸೇವೆ ನೀಡುವಲ್ಲಿ ಬದ್ಧವಾಗಿರುವ ರೆನೊ ಸಂಸ್ಥೆಯು, 2014 ನೆವಂಬರ್ ತಿಂಗಳಲ್ಲಿ ದೇಶದ್ಯಾಂತ 40ರಷ್ಟು ಉಚಿತ ಸರ್ವೀಸ್ ಕ್ಯಾಂಪ್ ತೆರೆಯುವ ಮೂಲಕ ಗಮನ ಸೆಳೆದಿದೆ.

ಈ ಮೂಲಕ 2014ನೇ ಸಾಲಿನಲ್ಲಿ ಒಟ್ಟಾರೆ 400ರಷ್ಟು ಉಚಿತ ಸರ್ವೀಸ್ ಕ್ಯಾಂಪ್‌ಗಳನ್ನು ಹಮ್ಮಿಕೊಂಡಿದೆ. ಇದು ರೆನೊ ಮಾಲಿಕರಿಗೆ ಉಚಿತವಾಗಿ ತಮ್ಮ ವಾಹನ ಪರಿಶೀಲಿಸುವ ಅವಕಾಶ ಮಾಡಿಕೊಟ್ಟಿದೆ.
ಈಗಾಗಲೇ 20,000ಗಿಂತಲೂ ರೆನೊ ಹೆಚ್ಚು ಗ್ರಾಹಕರು ಇದರ ಪ್ರಯೋಜನ ಪಡೆದಿರುವುದಾಗಿ ಸಂಸ್ಥೆ ಸ್ಪಷ್ಟಪಡಿಸಿದೆ.
ಡಸ್ಟರ್ ಮುಖಾಂತರ ಹೆಚ್ಚು ಜನಪ್ರಿಯತೆಗೆ ಕಾರಣವಾಗಿರುವ ರೆನೊ, ಹೊಸ ವರ್ಷದಲ್ಲಿ ಇನ್ನಷ್ಟು ಹೊಸ ಹೊಸ ಮಾದರಿಗಳನ್ನು ಪರಿಚಯಸುವ ಇರಾದೆಯಲ್ಲಿದೆ.


Click it and Unblock the Notifications








