ಚೆನ್ನೈ, ಕೊಚ್ಚಿಗೂ ಬರುತ್ತಂತೆ ಐಕಾನಿಕ್ ರೋಲ್ಸ್ ರಾಯ್ಸ್
ಜಗತ್ತಿನ ಅತಿ ಪ್ರತಿಷ್ಠಿತ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ರೋಲ್ಸ್ ರಾಯ್ಸ್ ಕಾರುಗಳು ಈಗಲೂ ಬೇಡಿಕೆ ಕಾಯ್ದುಕೊಂಡಿದೆ. ಹಾಗಿರುವಾಗ ಬೆಳೆದು ಬರುತ್ತಿರುವ ಭಾರತ ಮಾರುಕಟ್ಟೆಯಲ್ಲೂ ತನ್ನ ಮಾರಾಟ ವೃದ್ಧಿಯನ್ನು ಗುರಿಯಿರಿಸಿಕೊಂಡಿರುವ ಸಂಸ್ಥೆಯು ನೆರೆಯ ಚೆನ್ನೈ ಹಾಗೂ ಕೇರಳದ ಕೊಚ್ಚಿಯಲ್ಲಿ ಎರಡು ಹೊಸ ಡೀಲರ್‌ಶಿಪ್‌ಗಳನ್ನು ತೆರೆದುಕೊಳ್ಳುವ ಇರಾದೆ ಹೊಂದಿದೆ.
ಪ್ರಸ್ತುತ ದಕ್ಷಿಣ ಭಾರತದಲ್ಲಿ ಏಕಮಾತ್ರ ಶೋ ರೂಂ ಹೈದಾರಾಬಾದ್‌ನಲ್ಲಿ ಹೊಂದಿರುವ ಬ್ರಿಟನ್‌ನ ಈ ಪ್ರೀಮಿಯಂ ವಾಹನ ತಯಾರಕ ಸಂಸ್ಥೆಯು ತನ್ನ ಮಾರಾಟ ಜಾಲವನ್ನು ಇನ್ನಷ್ಟು ವಿಸ್ತರಿಸುವ ಯೋಜನೆ ಹೊಂದಿದೆ.

ಭಾರತ ವಾಹನ ಮಾರುಕಟ್ಟೆ ನಿಧಾನವಾಗಿ ಪ್ರಗತಿ ಸಾಧಿಸುತ್ತಿರುವುದನ್ನು ಗಮನಿಸಿರುವ ರೋಲ್ಸ್ ರಾಯ್ಸ್ 2015ರ ವೇಳೆಯಾಗುವಾಗ ಈ ಎರಡು ವಿತರಕರ ಜಾಲವನ್ನು ತೆರೆದುಕೊಳ್ಳುವ ಗುರಿ ಹೊಂದಿದೆ.
ಪ್ರಸ್ತುತ ರೋಲ್ಸ್ ರಾಯ್ಸ್ ಘೋಸ್ಟ್, ಫಾಟಂ, ಫಾಟಂ ಕೂಪೆ ಮತ್ತು ಡ್ರಾಪ್‌ಹೆಡ್ ಕೂಪೆ ಮಾದರಿಗಳನ್ನು ರೋಲ್ಸ್ ರಾಯ್ಸ್ ಭಾರತದಲ್ಲಿ ಮಾರಾಟ ಮಾಡುತ್ತಿದೆ. ಇದು 2.5 ಕೋಟಿ ರು.ಗಳಿಂದ ಆರಂಭವಾಗಿ ಹೈ ಎಂಡ್ ಮಾದರಿ 4.01 ಕೋಟಿ ರು.ಗಳಷ್ಟು (ಎಕ್ಸ್ ಶೋ ರೂಂ ದೆಹಲಿ) ದುಬಾರಿಯಾಗಿದೆ.
ಇನ್ನು ಪ್ರಸಕ್ತ ಸಾಲಿನ ವರ್ಷಾಂತ್ಯದಲ್ಲಿ ಘೋಸ್ಟ್ ಸಿರೀಸ್ 2 ಮಾದರಿಯನ್ನು ಪರಿಚಯಿಸುವ ಇರಾದೆಯನ್ನು ಸಂಸ್ಥೆ ಹೊಂದಿದೆ. ಇದೇ ಸಂದರ್ಭದಲ್ಲಿ ರೋಲ್ಸ್ ರಾಯ್ಸ್ ಎಸ್‌ಯುವಿ ಮಾದರಿ ಅಭಿವೃದ್ಧಿಪಡಿಸುತ್ತಿರುವ ಬಗ್ಗೆಯೂ ಮಾಹಿತಿಯಿದ್ದು, ಇದು ಹೈಬ್ರಿಡ್ ತಂತ್ರಗಾರಿಕೆಯನ್ನು ಪಡೆಯಲಿದೆ.


Click it and Unblock the Notifications








