ಮೋದಿ ಸರ್ಕಾರದ ಸಚಿವರ ಜೊತೆ ಸಿಯಾಮ್ ಚರ್ಚೆ
ಕೇಂದ್ರದಲ್ಲಿ ಇದೀಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಹೊಸ ಸರಕಾರ ಅಧಿಕಾರಕ್ಕೇರಿದೆ. ಇದರಂತೆ ಸಹಜವಾಗಿಯೇ ಆಟೋಮೊಬೈಲ್ ಕ್ಷೇತ್ರದಲ್ಲೂ ನಿರೀಕ್ಷೆಗಳು ಬಹಳಷ್ಟಿದೆ.
ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಮೋದಿ, ವಾಹನೋದ್ಯಮದ ಕ್ಷೇತ್ರದಲ್ಲಿ ಭಾರಿ ಹೂಡಿಕೆಗೆ ಪ್ರೋತ್ಸಾಹಿಸಿದ್ದರು. ಅಲ್ಲದೆ ಗುಜರಾತನ್ನು ದೇಶದ ಆಟೋಮೊಬೈಲ್ ಕೇಂದ್ರವಾಗಿ ಮಾರ್ಪಾಡಿಸುವ ಪ್ರಯತ್ನದಲ್ಲಿ ತೊಡಗಿದ್ದರು.

ಇದರಂತೆ ಹೊಸ ನಿರೀಕ್ಷೆಗಳನ್ನು ಹೊತ್ತುಕೊಂಡಿರುವ ಭಾರತೀಯ ವಾಹನೋದ್ಯಮ ಒಕ್ಕೂಟ (ಸಿಯಾಮ್) ಹೊಸ ಸಚಿವ ಸಂಪುಟದ ಸದಸ್ಯರ ಜೊತೆ ಮಾತುಕತೆ ನಡೆಸಿದ್ದಾರೆ. ಸಿಯಾಮ್ ಅಧ್ಯಕ್ಷ ವಿಕ್ರಮ್ ಕಿರ್ಲ್ಕೊಸ್ಕರ್ ನೇತೃತ್ವದಲ್ಲಿ ವಾಣಿಜ್ಯ, ರಸ್ತೆ ಸಾರಿಗೆ, ಪರಿಸರ ಹಾಗೂ ಬೃಹತ್ ಕೈಗಾರಿಕಾ ಸಚಿವರ ಜೊತೆಗೆ ಜೂನ್ 16 ಹಾಗೂ 17ರಂದು ಸಭೆ ನಡೆಸಿದ್ದಾರೆ.
ವಿದೇಶಿ ವಾಣಿಜ್ಯ ನೀತಿ, ವರ್ಧಿತ ರಫ್ತು ಪ್ರೋತ್ಸಾಹ ಮತ್ತು ಆಟೋಮೊಬೈಲ್ ಅಬಕಾರಿ ಸುಂಕ ಕಡಿತಗೊಳಿಸುವುದರ ಬಗ್ಗೆ ವಿಷಯ ಪ್ರಸ್ತಾಪಿಸಲಾಗಿದೆ. ಮುಂಬರುವ ತಿಂಗಳಲ್ಲಿ ನೂತನ ಸರಕಾರದ ಬಜೆಟ್ ಮಂಡನೆಯಾಗಲಿರುವುದರಿಂದ ಸಭೆ ಗಮನಾರ್ಹವೆನಿಸಿದೆ.


Click it and Unblock the Notifications








