ಸ್ಕೋಡಾ ಯೆಟಿ ಬಿಡುಗಡೆ ಇನ್ನು ಹತ್ತಿರ

By Nagaraja

ಸ್ಕೋಡಾದಿಂದ ಮಗದೊಂದು ಅತ್ಯಾಕರ್ಷಕ ಕಾರು ಬಿಡುಗಡೆಗೆ ಮುಹೂರ್ತ ನಿಗದಿಯಾಗಿದೆ. ಹೌದು, ಎಲ್ಲ ಹೊಸತನದಿಂದ ಕೂಡಿರುವ ಸ್ಕೋಡಾ ಯೆಟಿ ಮುಂಬರುವ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ.

ಕಳೆದ 2014 ದೆಹಲಿ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿದ್ದ ಸ್ಕೋಡಾ ಯೆಟಿ ಹಿಂದಿನ ಜನಾಂಗದ ಯೆಟಿ ಸ್ಥಾನವನ್ನು ತುಂಬಲಿದ್ದು, ಅತಿ ಹೆಚ್ಚು ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿದೆ.


ಯುರೋಪ್ ಮಾದರಿಯ ಯೆಟಿ ಭಾರತದಲ್ಲಿ ಬಿಡುಗಡೆ ಮಾಡಲು ಸ್ಕೋಡಾ ನಿರ್ಧರಿಸಿದೆ. ಅಂದರೆ ಹಿಂದಿನ ಮಾದರಿಗಿಂತಲೂ ಹೆಚ್ಚು ಪ್ರೀಮಿಯಂ ಸೌಲಭ್ಯಗಳನ್ನು ಗಿಟ್ಟಿಸಿಕೊಳ್ಳಲಿದೆ.

ಹಾಗಿದ್ದರೂ 2014 ಯೆಟಿ ಡೀಸೆಲ್ ಮಾದರಿಯಲ್ಲಿ ಮಾತ್ರ ಲಭ್ಯವಾಗಲಿದೆ. ಇದು 2.0 ಲೀಟರ್ ಎಂಜಿನ್ ಪಡೆದುಕೊಳ್ಳಲಿದ್ದು, 108 ಅಶ್ವಶಕ್ತಿ (250 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಪಡೆದುಕೊಳ್ಳಲಿದೆ.

Skoda India

ಅದೇ ಹೊತ್ತಿಗೆ 2.0 ಲೀಟರ್ ಎಂಜಿನ್‌ನಲ್ಲೇ ಪವರ್‌ಫುಲ್ ವರ್ಷನ್ ಸಹ ಸ್ಕೋಡಾ ಪ್ರದಾನ ಮಾಡಲಿದೆ. ಇದು 138 ಅಶ್ವಶಕ್ತಿ (320 ಎನ್‌ಎಂ ಟಾರ್ಕ್) ಉತ್ಪಾದಿಸಲು ಸಕ್ಷಮವಾಗಲಿದೆ. ಅಂತೆಯೇ 6 ಸ್ಪೀಡ್ ಗೇರ್ ಬಾಕ್ಸ್ ಪಡೆಯಲಿದೆ.

ಒಟ್ಟಿನಲ್ಲಿ ಯುರೋಪ್ ಮಾದರಿ ಭಾರತಕ್ಕೆ ಆಗಮನವಾಗಲಿರುವುದರಿಂದ ದರ ಸಹ ಸ್ವಲ್ಪ ದುಬಾರಿಯಾಗಿರಲಿದೆ. ಇದು ಮಹೀಂದ್ರ ಎಕ್ಸ್‌ಯುವಿ500 ಹಾಗೂ ರನೊ ಕೊಲಿಯೋಸ್‌‌ನಷ್ಟು ದುಬಾರಿಯಾಗುವ ಸಾಧ್ಯತೆಯಿದೆ. ಆದರೆ ಆಕಾರದ ವಿಚಾರದಲ್ಲಿ ಫೋರ್ಡ್ ಇಕೊಸ್ಪೋರ್ಟ್, ನಿಸ್ಸಾನ್ ಟೆರನೊ ಹಾಗೂ ರನೊ ಡಸ್ಟರ್ ಮಾದರಿಗಳಿಗೆ ಪೈಪೋಟಿ ಒಡ್ಡುವ ನಿರೀಕ್ಷೆಯಿದೆ.

More from DriveSpark

Article Published On: Wednesday, August 13, 2014, 15:35 [IST]
English summary
Every manufacturer has realised the potential of Indian market and are getting international as well as India specific products. Skoda India has not launched any product in India recently. They had showcased its 2014 Yeti at the 2014 Auto Expo, which was held in Delhi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+