2015 ಫ್ಯಾಬಿಯಾ ಅನಾವರಣ; ಭಾರತ ಪ್ರವೇಶ ಯಾವಾಗ?
ಜೆಕ್ ಗಣರಾಜ್ಯದ ಜನಪ್ರಿಯ ವಾಹನ ತಯಾರಕ ಸಂಸ್ಥೆಯಾಗಿರುವ ಸ್ಕೋಡಾ, ಬಿಡುಗಡೆಗೂ ಮುಂಚಿವಾಗಿ ಅತಿ ನೂನತ 2015 ಫ್ಯಾಬಿಯಾ ಅನಾವರಣಗೊಳಿಸಿದೆ.
ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ ಪ್ಯಾರಿಸ್ ಮೋಟಾರು ಶೋದಲ್ಲಿ 2015 ಸ್ಕೋಡಾ ಫ್ಯಾಬಿಯಾ ಜಾಗತಿಕ ಬಿಡುಗಡೆ ಕಾಣಲಿದೆ. ಸಂಪೂರ್ಣವಾಗಿ ಪರಿಷ್ಕೃತಗೊಂಡಿರುವ ಹೊಸ ಮಾದರಿಯು ಹೆಚ್ಚು ಪ್ರಭಾವಿ ಎನಿಸಿಕೊಂಡಿದೆ.

ಜೆಕ್ ಗಣರಾಜ್ಯದ ಮ್ಲಾಡಾ ಬೊಲೆಸ್ಲಾವ್ ಘಟಕದಲ್ಲಿಯೇ 2015 ಫ್ಯಾಬಿಯಾ ಹ್ಯಾಚ್‌ಬ್ಯಾಕ್ ನಿರ್ಮಾಣವಾಗಲಿದೆ. ಈ ಪರಿಷ್ಕೃತ ಆವೃತ್ತಿಯು ಪೆಟ್ರೋಲ್ ಜೊತೆಗೆ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ.
ಸ್ಕೋಡಾದ ಹೊಸ ತಲೆಮಾರಿನ ಡಿಸೈನ್ ತಂತ್ರಗಾರಿಕೆಯನ್ನು 2015 ಫ್ಯಾಬಿಯಾದಲ್ಲಿ ಆಳವಡಿಸಲಾಗಿದೆ. ಇದು ಹಿಂದಿನ ಆವೃತ್ತಿಗಿಂತಲೂ ಹೆಚ್ಚು ಕ್ರೀಡಾತ್ಮಕ ಹಾಗೂ ಪರಿಣಾಮಕಾರಿ ನೋಟ ಕಾಯ್ದುಕೊಂಡಿದೆ.

ಹಾಗಿದ್ದರೂ 2015 ಸ್ಕೋಡಾ ಫ್ಯಾಬಿಯಾ ಸದ್ಯಕ್ಕಂತೂ ಭಾರತ ಪ್ರವೇಶ ಸಾಧ್ಯತೆ ಕಡಿಮೆಯಾಗಿದೆ. ಆದರೂ ನಿಕಟ ಭವಿಷ್ಯದಲ್ಲೇ ಇಂತಹದೊಂದು ಘೋಷಣೆಯನ್ನು ನಿರೀಕ್ಷೆಯಿದೆ. ಇದು ಪ್ರಮುಖವಾಗಿಯೂ ಫಿಯೆಟ್ ಪುಂಟೊ ಇವೊ, ಫೋಕ್ಸ್‌ವ್ಯಾಗನ್ ಪೊಲೊ, ಹ್ಯುಂಡೈ ಐ20 ಮತ್ತು ಮಾರುತಿ ಸುಜುಕಿ ಸ್ವಿಫ್ಟ್ ಮಾದರಿಗಳಿಗೆ ಪ್ರತಿಸ್ಪರ್ಧಿಯೆನಿಸಲಿದೆ. ಇದು ದೇಶದಲ್ಲಿ 5ರಿಂದ 9 ಲಕ್ಷ ರು.ಗಳ ದರಗಳಲ್ಲಿ ಲಭ್ಯವಾಗುವ ಸಾಧ್ಯತೆಯಿದೆ.
2015 ಸ್ಕೋಡಾ ಫ್ಯಾಬಿಯಾ ಎಂಜಿನ್ ಆಯ್ಕೆಗಳು ಇಂತಿದೆ:
ಪೆಟ್ರೋಲ್
1.2 ಲೀಟರ್ ಟಿಎಸ್‌ಐ ಟರ್ಬೊ ಪವರ್ ಎಂಜಿನ್ (108 ಅಶ್ವಶಕ್ತಿ),
1.0 ಲೀಟರ್ ನೈಸರ್ಗಿಕವಾಗಿ ಚೋಷಿತ ಎಂಜಿನ್ (59 ಅಶ್ವಶಕ್ತಿ),
ಡೀಸೆಲ್
1.4 ಲೀಟರ್ ತ್ರಿ ಸಿಲಿಂಡರ್ ಎಂಜಿನ್ (103 ಅಶ್ವಶಕ್ತಿ),
1.4 ಲೀಟರ್ ತ್ರಿ ಸಿಲಿಂಡರ್ ಎಂಜಿನ್ (73 ಅಶ್ವಶಕ್ತಿ),
1.4 ಲೀಟರ್ ಫೋರ್ ಸಿಲಿಂಡರ್ ಎಂಜಿನ್


Click it and Unblock the Notifications








