ಸ್ಕೋಡಾ ವಿಷನ್ ಸಿ ಕಾನ್ಸೆಪ್ಟ್ ಹೇಗಿದೆ ನೋಡಿ
ಸ್ಕೋಡಾ ಎಂಬುದು ಫೋಕ್ಸ್‌ವ್ಯಾಗನ್ ಸಂಸ್ಥೆಯ ಬಜೆಟ್ ಕಾರು ಬ್ರಾಂಡ್ ಆಗಿರಬಹುದು. ಹಾಗಿದ್ದರೂ ಈ ವಾಹನ ತಯಾರಕ ಸಂಸ್ಥೆಯು ಆಕರ್ಷಕ ಕಾರು ಉತ್ಪಾದಿಸುವ ಪ್ರಯತ್ನದಿಂದ ಹಿಂದೆ ಸರಿದಿಲ್ಲ. ಇದರ ಫಲವಾಗಿಯೇ ಸ್ಕೋಡಾ ಸಂಸ್ಥೆಯು ನೂತನ ವಿಷನ್ ಸಿ ಕಾನ್ಸೆಪ್ಟ್ ಕಾರು ತಯಾರಿಸಿದೆ.
ವಿಷನ್ ಸಿ ಎಂಬುದು ನಾಲ್ಕು ಬಾಗಿಲುಗಳ ಕೂಪೆ ಕಾನ್ಸೆಪ್ಟ್ ಕಾರಾಗಿರಲಿದೆ. ಪ್ರಸ್ತುತ ಕಾರು ಮಾರ್ಚ್ 4ರಿಂದ ಆರಂಭವಾಗಲಿರುವ ಜಿನೆವಾ ಮೋಟಾರು ಶೋದಲ್ಲಿ ಪ್ರದರ್ಶನ ಕಾಣಲಿದೆ.

ಒಕ್ಟಾವಿಯಾ ಸೆಡಾನ್ ರೀತಿಯಲ್ಲೇ ಕಾಣಿಸುತ್ತಿರುವ ವಿಷನ್ ಸಿ ಕಾನ್ಸೆಪ್ಟ್ ಕಾರು ಅತ್ಯಾಧುನಿಕ ತಂತ್ರಾಂಶವನ್ನು ಒಳಗೊಂಡಿರಲಿದೆ. ಇದರ ಮೊನಾಚಾದ ಹೆಡ್ ಲೈಟ್ ಹಾಗೂ ದೊಡ್ಡದಾದ ಚಕ್ರಗಳು ಆಕರ್ಷಣೆಯಾಗಿರಲಿದೆ.
ಹಾಗಿದ್ದರೂ ನೂತನ ವಿಷನ್ ಸಿ ಕಾನ್ಸೆಪ್ಟ್ ಕಾರಿನ ಬಗ್ಗೆ ಸಂಸ್ಥೆ ಹೆಚ್ಚಿನ ಮಾಹಿತಿಗಳನ್ನು ಹೊರಗೆಡವಿಲ್ಲ. ಬಲ್ಲ ಮೂಲಗಳ ಪ್ರಕಾರ ಇದು ಬಿಎಂಡಬ್ಲ್ಯು 6 ಸಿರೀಸ್ ಗ್ರಾನ್ ಕೂಪೆ ಆವೃತ್ತಿಗಳಿಗೆ ಎದುರಾಳಿಯಾಗಿರಲಿದೆ.


Click it and Unblock the Notifications








