ಬರಲಿದೆ ಸಕ್ಕರೆ ನಿಯಂತ್ರಿತ 'ಜೈವಿಕ ಬ್ಯಾಟರಿ'
ತಂತ್ರಜ್ಞಾನದಲ್ಲಿ ವಾಹನೋದ್ಯಮ ಕ್ಷೇತ್ರವು ಮಗದೊಂದು ಹೆಜ್ಜೆ ಮುಂದಕ್ಕಿರಿಸಿದ್ದು, ವಿಜ್ಞಾನಿಗಳ ತಂಡವೊಂದು ಸಕ್ಕರೆ ನಿಯಂತ್ರಿತ 'ಜೈವಿಕ ಬ್ಯಾಟರಿ' ಯಶಸ್ವಿ ಪ್ರಯೋಗ ನಡೆಸುವಲ್ಲಿ ಯಶಸ್ವಿಯಾಗಿದೆ. ಇಲ್ಲಿ ಸಕ್ಕರೆ ದ್ರವ್ಯಗಳಲ್ಲಿ ಶೇಖರಿಸಡಲಾದ ರಾಸಾಯನಿಕ ಶಕ್ತಿಯನ್ನು ವಿದ್ಯುತ್ ಆಗಿ ಪರಿವರ್ತಿಸಲಾಗುತ್ತದೆ.
ವರ್ಜಿನಿಯಾ ಟೆಕ್‌ನ ಸೆಲ್ ಫ್ರಿ ಬಯೋಇನ್ನೋವೇಷನ್ಸ್‌ನ ವಿಜ್ಞಾನಿಗಳ ತಂಡವು ಇಂತಹದೊಂದು ವಿನೂತನ ಪ್ರಯೋಗ ನಡೆಸಿದ್ದು, ಜೈವಿಕ ಬ್ಯಾಟರಿ ಸಕ್ಕರೆ ಸಂಕೀರ್ಣ ಉತ್ಕರ್ಷಣ ಪ್ರಯೋಗ ಮಾಡುವಲ್ಲಿ ಯಶಸ್ವಿಯಾಗಿದೆ. ಇಲ್ಲಿ ಗಮನಾರ್ಹ ಸಂಗತಿಯೆಂದರೆ ಸಾಮಾನ್ಯ ಲಿಥಿಯಂ ಇಯಾನ್ ಬ್ಯಾಟರಿಗಿಂತಲೂ ಹತ್ತು ಪಟ್ಟು ಹೆಚ್ಚು ಚೈತನ್ಯ ಉತ್ಪಾದಿಸುವಲ್ಲಿ ಸಕ್ಕರೆ ಜೈವಿಕ ಬ್ಯಾಟರಿ ಯಶ ಕಂಡಿದೆ.

ಸೆಲ್ ಫ್ರಿ ಬಯೋಇನ್ನೋವೇಷನ್ಸ್ ಪ್ರಕಾರ ಸಕ್ಕರೆ ನಿಯಂತ್ರಿತ ಬಯೋಬ್ಯಾಟರಿಗಳು 15 ಪಟ್ಟು ಹೆಚ್ಚು ಶೇಖರಣೆ ಶಕ್ತಿ ಅಂತೆಯೇ ಇದಕ್ಕೆ ಸಮಾನವಾದ ಲಿಥಿಯಂ ಇಯಾನ್ ಬ್ಯಾಟರಿಗಿಂತಲೂ 15 ಪಟ್ಟು ಹೆಚ್ಚು ಬಾಳ್ವಿಕೆ ಬರಲಿದೆ ಎಂದಿದೆ.
ಇವೆಲ್ಲಕ್ಕಿಂತಲೂ ಮಿಗಿಲಾಗಿ ಹೆಚ್ಚು ಶಕ್ತಿಶಾಲಿ ಹಾಗೂ ದಕ್ಷತೆಯ ಹೊರತಾಗಿ ಇಂತಹ ಸಕ್ಕರೆ ಜೈವಿಕ ಬ್ಯಾಟರಿಯನ್ನು ನಿರ್ಮಿಸುವುದು ಅತ್ಯಂತ ಅಗ್ಗವಾಗಿದ್ದು, ಪುನ: ತುಂಬಬಹುದಾದ, ಪರಿಸರ ಸ್ನೇಹಿ ಮತ್ತು ಬೆಂಕಿಗೆ ಬೇಗನೇ ಹೊತ್ತಿಕೊಳ್ಳಲಾರದು.
ಸಕ್ಕರೆ ಜೈವಿಕ ಬ್ಯಾಟರಿಗಳು ಒಂದು ವಿಧದ ಎನ್ಜಿಮ್ಯಾಟಿಕ್ ಫ್ಯೂಯಲ್ ಸೆಲ್ (ಇಎಫ್‌ಸಿ) ಆಗಿದ್ದು, ಇದರ ಎಲೆಕ್ಟ್ರೊಬಯೋಕೆಮಿಕಲ್ ಡಿವೈಸ್, ಪಿಷ್ಟ ಮತ್ತು ಗ್ಲೈಕೋಜನ್‌ನಿಂದ ರಾಸಾಯನಿಕ ಶಕ್ತಿಯನ್ನು ವಿದ್ಯುತ್ ಆಗಿ ಪರಿವರ್ತಿಸುತ್ತದೆ.


Click it and Unblock the Notifications