ಹೊಸ ಆಲ್ಟೊ ಆರ್‌ಎಸ್ ಟರ್ಬೊ ಕಾನ್ಸೆಪ್ಟ್ ಅನಾವರಣ
ಬಹುನಿರೀಕ್ಷಿತ ಟೊಕಿಯೋ ವಾಹನ ಪ್ರದರ್ಶನಗೂ ಮುನ್ನುಡಿಯಾಗಿ ಜಪಾನ್ ಮೂಲದ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯಾಗಿರುವ ಸುಜುಕಿ ಸಂಸ್ಧೆಯು ತಾಜಾ ಆಲ್ಟೊ ಆರ್‌ಎಶ್ ಟರ್ಬೊ ಕಾನ್ಸೆಪ್ಟ್ ಮಾದರಿಯನ್ನು ಪ್ರದರ್ಶಿಸಿದೆ.
ಎಂಟನೇ ತಲೆಮಾರಿನ ಆಲ್ಟೊ ತಳಹದಿಯಲ್ಲಿ ರೂಪುಗೊಂಡಿರುವ ಹೊಸ ಆಲ್ಟೊ ಆರ್‌ಎಸ್ ಟರ್ಬೊ ಪರಿಕಲ್ಪನೆಯು 17 ಇಂಚಿನ ಅಲಾಯ್ ವೀಲ್, ತಾಜಾ ಬಂಪರ್, ಫಾಗ್ ಲೈಟ್ಸ್, ಕೆಂಪು ವರ್ಣದ ಮಿರರ್ ಕ್ಯಾಪ್, ಕಪ್ಪು ಬಣ್ಣ ಆವರಿಸಲ್ಪಟ್ಟ ಹೆಡ್ ಲೈಟ್ ಹಾಗೂ ರೇಡಿಯೇಟರ್ ಗ್ರಿಲ್ ಪಡೆದುಕೊಂಡಿದೆ.

ಹಾಗಿದ್ದರೂ ಕಾರಿನ ನಿರ್ವಹಣೆ ಬಗ್ಗೆ ಹೆಚ್ಚಿನ ಮಾಹಿತಿಗಳು ಹೊರಬಂದಿಲ್ಲ. ಹಾಗಿದ್ದರೂ ಸಿವಿಟಿ ಟ್ರಾನ್ಸ್‌ಮಿಷನ್ ಫೈನ್ ಟ್ಯೂನ್ ಹಾಗೂ ಸಸ್ಪೆಷನ್ ಪರಿಷ್ಕೃತಗೊಳಿಸುವ ನಿರೀಕ್ಷೆಯಿದೆ.
ಅಂದ ಹಾಗೆ ಮುಂದಿನ ತಿಂಗಳು ಅಂದರೆ ಹೊಸ ವರ್ಷದಲ್ಲಿ ನಡೆಯಲಿರುವ ಟೊಕಿಯೋ ಆಟೋ ಶೋದಲ್ಲಿ ಹೊಸ ಸುಜುಕಿ ಆಲ್ಟೊ ಆರ್‌ಎಸ್ ಟರ್ಬೊ ಕಾನ್ಸೆಪ್ಟ್ ಪ್ರದರ್ಶನವಾಗಲಿದೆ. ಇದು ತದಾ ಬಳಿಕ ಕೆಲವೊಂದು ಬದಲಾವಣೆಗಳೊಂದಿಗೆ ಜಪಾನ್ ಮಾರುಕಟ್ಟೆ ತಲುಪುವ ನಿರೀಕ್ಷೆಯಿದೆ. ಹಾಗಿದ್ದರೂ ಜಪಾನ್ ಮಾರುಕಟ್ಟೆ ಹೊರಗಡೆ ತಲುಪುವ ನಿರೀಕ್ಷೆಯಿದೆ.


Click it and Unblock the Notifications








