2017ರ ವೇಳೆಗೆ ಸುಜುಕಿ ಗುಜರಾತ್ ಘಟಕ ಸಿದ್ಧ
ಮಾರುತಿ ಸುಜುಕಿ ಅಂಗಸಂಸ್ಥೆಯಾಗಿರುವ ಸುಜುಕಿಯ ಮಹತ್ತರ ಯೋಜನೆಗಳಲ್ಲಿ ಒಂದಾಗಿರುವ ಗುಜರಾತ್ ಘಟಕವು 2017ರ ವೇಳೆಗೆ ನನಸಾಗಲಿದೆ. ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಜಪಾನ್ ಮೂಲದ ಸುಜುಕಿ ಸಂಸ್ಥೆಯು 2017ರ ವೇಳೆ ಹೊಸ ಘಟಕ ಸಿದ್ಧವಾಗಲಿದೆ ಎಂದಿದೆ. ಅಲ್ಲದೆ ಮೂಲಸೌಲಭ್ಯ ಹಾಗೂ ವಿದ್ಯುತ್ ಲಭ್ಯತೆಯನ್ನು ಗಮನಿಸಿ ಗುಜರಾತ್ ರಾಜ್ಯವನ್ನು ಆಯ್ಕೆ ಮಾಡಿಕೊಂಡಿರುತ್ತೇವೆ ಎಂದಿದ್ದಾರೆ.
ಭಾರತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೂರು ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ ಗುಜರಾತ್, ವಾಹನ ತಯಾರಿಕ ಸಂಸ್ಥೆಗಳ ಪಾಲಿಗೆ ಸ್ವರ್ಗವೆನಿಸಿದೆ. ರಾಜ್ಯದ ವಾಹನ ಸ್ನೇಹಿ ನಿಲುವುಗಳ ಪ್ರಮುಖ ಸಂಸ್ಥೆಗಳನ್ನು ಅತ್ತ ವಾಲುವಂತೆ ಮಾಡಿದೆ.

ಈ ಬಗ್ಗೆ ಅಭಿಪ್ರಾಯಪಟ್ಟಿರುವ ಸುಜುಕಿ ಮೋಟಾರು ಕಾರ್ಪೋರೇಷನ್ ಮುಖ್ಯಸ್ಥ ಮತ್ತು ಸಿಇಒ ಆಗಿರುವ ಒಸಮು ಸುಜುಕಿ, ಗುಜರಾತ್‌ನಲ್ಲಿ ಉತ್ತಮ ಮೂಲಸೌಕರ್ಯ ಹಾಗೂ ವಿದ್ಯುತ್‌ನ ಹರಿವಿದೆ ಎಂದಿದ್ದಾರೆ.
ನರೇಂದ್ರ ಮೋದಿ ಬಗ್ಗೆ ಹೊಗಳಿಕೆ ಮಾತಗಳನ್ನಾಡಿರುವ ಅವರು, ಮೋದಿ ಒಳ್ಳೆಯ ಸ್ನೇಹಿತನಾಗಿದ್ದು, ಗುಜರಾತ್‌ನಲ್ಲಿ ಮೂಲಸೌಕರ್ಯ ಹಾಗೂ ವಿದ್ಯುತ್ ಸಮಸ್ಯೆ ನಿರ್ಹಹಣೆಯತ್ತ ಗಮನ ಕೇಂದ್ರಿಕರಿಸಿದ್ದರು. ಇದೇ ಕಾರಣದಿಂದಾಗಿ ಸುಜುಕಿ ಸಂಸ್ಥೆಯು ಗುಜರಾತ್‌ನಲ್ಲಿ ಘಟಕ ಆರಂಭಿಸುತ್ತಿದೆ ಎಂದಿದ್ದಾರೆ.
ಸುಜುಕಿಯ ಹೊಸ ಘಟಕ ಪ್ರಾರಂಭವಾದ ಬಳಿಕ ಉತ್ಪಾದನಾ ಸಾಮರ್ಥ್ಯವು 1.5 ದಶಲಕ್ಷಗಳಿಂದ 3 ದಶಲಕ್ಷಗಳಿಗೆ ಏರಿಕೆಯಾಗಲಿದೆ. ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಿರುವ ಮಾರುತಿ, ಗುಜರಾತ್‌ನಲ್ಲಿ ಸುಜುಕಿ ಘಟಕ ತೆರೆಯುವುದಕ್ಕೆ ಸಂಬಂಧಿಸಿದಂತೆ ತನ್ನ ಹೂಡಿಕೆದಾರರನ್ನು ಒಳೈಸುವ ಪ್ರಯತ್ನದಲ್ಲಿ ತೊಡಗಿದೆ.


Click it and Unblock the Notifications