ಸುಜುಕಿ ಸಣ್ಣ ಎಸ್‌ಯುವಿ ಅನಾವರಣ; ಭಾರತಕ್ಕೆ ಬರುತ್ತಾ?

By Nagaraja

ಮಾರುತಿ ಸುಜುಕಿ ಅಂಗಸಂಸ್ಥೆಯಾಗಿರುವ ಜಪಾನ್ ಮೂಲದ ಸುಜುಕಿ ವಾಹನ ತಯಾರಕ ಸಂಸ್ಥೆಯು ಎಲ್ಲ ಹೊಸತನಗಳಿಂದ ಕೂಡಿರುವ ವಿಟಾರಾ ಕಾಂಪಾಕ್ಟ್ ಎಸ್‌ಯುವಿ ಕಾರನ್ನು ಅನಾವರಣಗೊಳಿಸಿದೆ. ಈ ಸಣ್ಣ ಎಸ್‌ಯುವಿ ಯಾವಾಗ ಭಾರತ ಪ್ರವೇಶಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.

2014 ಪ್ಯಾರಿಸ್ ಮೋಟಾರು ಶೋಗಿಂತಲೂ ಮುಂಚಿತವಾಗಿ ಇದನ್ನು ಅನಾವರಣಗೊಳಿಸಿರುವುದು ಗಮನಾರ್ಹವೆನಿಸಿದೆ. ಇದು iv-4 ತಲಹದಿಯಲ್ಲಿ ನಿರ್ಮಿಸಲಾಗಿದೆ.

Suzuki Vitara

ಹಾಗಿದ್ದರೂ ಕಾರಿನ ವಿಶಿಷ್ಟತೆಗಳ ಬಗ್ಗೆ ಸುಜುಕಿ ಯಾವುದೇ ಮಾಹಿತಿಗಳನ್ನು ಬಹಿರಂಗಪಡಿಸಿಲ್ಲ. ಆದರೂ ಅಧಿಕೃತ ಚಿತ್ರವನ್ನು ಪಡೆಯುವುದರಲ್ಲಿ ನಾವು ಯಶಸ್ವಿಯಾಗಿರುತ್ತೇವೆ. ಇದರಂತೆ ಕೆಲವು ಮಹತ್ವಪೂರ್ಣ ಮಾಹಿತಿ ಗಿಟ್ಟಿಸಿಕೊಳ್ಳುವಲ್ಲಿ ಸಾಧ್ಯವಾಗಿದೆ.

ಮುಂಭಾಗದಲ್ಲಿ ದೊಡ್ಡ ಗ್ರಿಲ್ ಪಡೆದುಕೊಳ್ಳಲಿದ್ದು, ಡಬಲ್ ಬ್ಯಾರೆಲ್ ಹೆಡ್ ಲ್ಯಾಂಪ್ ಇರಲಿದೆ. ಇದರೊಂದಿಗೆ ಡೇಟೈಮ್ ರನ್ನಿಂಗ್ ಲೈಟ್ಸ್ ಮತ್ತು ಫಾಗ್ ಲ್ಯಾಂಪ್‌ಗಳು ಇನ್ನಷ್ಟು ಆಕರ್ಷವೆನಿಸುತ್ತಿದೆ.

ಅದೇ ರೀತಿ ಹೊಸ ವಿಟಾರಾದಲ್ಲಿ ಆಲ್ ಗ್ರಿಲ್ ಇಂಟೆಲಿಜೆಂಟ್ ಐಚ್ಛಿ ಆಲ್ ವೀಲ್ ಡ್ರೈವ್ ಆಯ್ಕೆಯಿರಲಿದೆ. ಇದು ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್‌ಗಳಲ್ಲಿ ಲಭ್ಯವಾಗಲಿದೆ. ಅಂತೆಯೇ ಯುರೋಪ್ ಮಾರುಕಟ್ಟೆಯಲ್ಲಿ ಹೋಂಡ್ ವೆಜೆಲ್, ನಿಸ್ಸಾನ್ ಕ್ವಾಶ್‌ಕೈ ಮತ್ತು ಡೇಸಿಯಾ ಡಸ್ಟರ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ. ಒಟ್ಟಿನಲ್ಲಿ ಭಾರತ ಪ್ರವೇಶ ಸಂಬಂಧಿಸಿದಂತೆ ಇನ್ನಷ್ಟೇ ಸ್ಪಷ್ಟನೆ ಬರಬೇಕಾಗಿದೆ.

<iframe width="600" height="450" src="//www.youtube.com/embed/KlKz8OoIw3U?rel=0&showinfo=0&autoplay=0" frameborder="0" allowfullscreen></iframe>

More from DriveSpark

Article Published On: Saturday, August 30, 2014, 11:03 [IST]
English summary
The compact SUV by Suzuki is being dubbed as Vitara. The Japanese manufacturer confirms its new vehicle will be unveiled to all at 2014 Paris Motor Show. The date has been set for 2nd October, 2014 and will provide more details then.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+