ಜೆಸ್ಟ್ ಮಾರಾಟ ಇಳಿಕೆಯೇ ಬೋಲ್ಟ್ ಬಿಡುಗಡೆ ವಿಳಂಬಕ್ಕೆ ಕಾರಣ?
ಹೌದು, ಇಂತಹದೊಂದು ಪ್ರಶ್ನೆ ಸಹಜವಾಗಿಯೇ ಮೂಡಿ ಬರುತ್ತಿದೆ. ದೇಶದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ವರ್ಷಾರಂಭದಲ್ಲಿ ನಡೆದ ದೆಹಲಿ ಆಟೋ ಎಕ್ಸ್ ಪೋದಲ್ಲಿ ಎರಡು ಹೊಸ ಮಾದರಿಗಳನ್ನು ಪರಿಚಯಿಸಿತ್ತು.
ಅದುವೇ ಜೆಸ್ಟ್ ಕಾಂಪಾಕ್ಟ್ ಸೆಡಾನ್ ಮತ್ತು ಬೋಲ್ಟ್ ಹ್ಯಾಚ್‌ಬ್ಯಾಕ್. ಇವೆರಡು ಹೊಸ ತಳಹದಿಯಲ್ಲಿ ನಿರ್ಮಾಣದ ಕಾರುಗಳಾಗಿದ್ದು, ಟಾಟಾ ಪಾಲಿಗೆ ಭಾರಿ ನಿರೀಕ್ಷೆಯನ್ನೇ ಮೂಡಿಸಿತ್ತು.

ಈ ಪೈಕಿ ಜೆಸ್ಟ್ ಈಗಾಗಲೇ ಮಾರುಕಟ್ಟೆ ತಲುಪಿದ್ದು, ನಿರೀಕ್ಷೆ ಮಾಡಿದಷ್ಟು ಗ್ರಾಹಕ ವಲಯವನ್ನು ತಲುಪುವಲ್ಲಿ ವಿಫಲವಾಗಿದೆಯೆಂಬ ಮಾತು ಕೇಳಿ ಬರುತ್ತಿದೆ. ಇದೇ ಕಾರಣಕ್ಕಾಗಿ ಬೋಲ್ಟ್ ಬಿಡುಗಡೆ ವಿಳಂಬವಾಗುತ್ತಿದೆ.
ಪ್ರತಿ ತಿಂಗಳು 2,500ರಷ್ಟು ಮಾರಾಟ ಕಂಡುಕೊಳ್ಳುವುದು ಬೋಲ್ಟ್ ಗುರಿಯಾಗಿರಲಿದೆ. ಇನ್ನೊಂದೆಡೆ ಭಾರತೀಯ ವಾಹನ ಒಕ್ಕೂಟದ (ಸಿಯಾಮ್) ಮಾಹಿತಿ ಸೆಪ್ಟೆಂಬರ್ ತಿಂಗಳಲ್ಲಿ 3,331 ಯುನಿಟ್‌ಗಳಷ್ಟು ಜೆಸ್ಟ್ ಮಾರಾಟ ಕಂಡುಕೊಂಡಿತ್ತು.
ವಿಷಯ ಏನೇ ಆದರೂ ಟಾಟಾದ ಅತ್ಯುತ್ತಮ ಕಾರುಗಳಲ್ಲಿ ಜೆಸ್ಟ್ ಒಂದಾಗಿದೆ. ಬೋಲ್ಟ್ ಬಿಡುಗಡೆ ಮೂಲಕ ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ತಲುಪುವುದು ಸಂಸ್ಥೆಯ ಗುರಿಯಾಗಿರಲಿದೆ.


Click it and Unblock the Notifications