ಯುರೋಪ್‌ನಲ್ಲೂ ಮಾರಾಟವಾಗಲಿದೆ ಟಾಟಾ ಬೋಲ್ಟ್, ಜೆಸ್ಟ್
ದೇಶದ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ತನ್ನ ಬಹುನಿರೀಕ್ಷಿತ ಹ್ಯಾಚ್‌ಬ್ಯಾಕ್ ಹಾಗೂ ಕಾಂಪಾಕ್ಟ್ ಸೆಡಾನ್ ಕಾರುಗಳಾಗಿರುವ ಬೋಲ್ಟ್ ಹಾಗೂ ಜೆಸ್ಟ್ ಆವೃತ್ತಿಗಳನ್ನು ಯುರೋಪ್ ದೇಶಗಳಿಗೂ ಪರಿಚಯಿಸಲಿದೆ.
ಇದಕ್ಕೂ ಮುನ್ನುಡಿಯಾಗಿ ಮಾರ್ಚ್ 3ರಿಂದ ಆರಂಭವಾಗಲಿರುವ ಪ್ರಿತಷ್ಠಿತ ಜಿನೆವಾ ಮೋಟಾರು ಶೋದಲ್ಲೂ ಬೋಲ್ಟ್ ಹಾಗೂ ಜೆಸ್ಟ್ ಆವೃತ್ತಿಗಳನ್ನು ಟಾಟಾ ಅನಾವರಣಗೊಳಿಸಲಿದೆ.

ಫೆಬ್ರವರಿ ಮೊದಲ ವಾರದಲ್ಲಿ ನಡೆದ 2014 ಇಂಡಿಯಾ ಆಟೋ ಎಕ್ಸ್ ಪೋದಲ್ಲಿ ಟಾಟಾ ನೂತನ ಜೆಸ್ಟ್ ಹಾಗೂ ಬೋಲ್ಟ್ ಆವೃತ್ತಿಗಳನ್ನು ಪರಿಚಯಿಸಲಾಗಿತ್ತು. ಇದು ಪ್ರಸಕ್ತ ಸಾಲಿನ ದ್ವಿತಿಯಾರ್ಧದಲ್ಲಿ ದೇಶೀಯ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದೆ.
ಅದೇ ರೀತಿ ಸ್ಪೇನ್, ಇಟಲಿ ಹಾಗೂ ಟರ್ಕಿಗಳಂತಹ ಯುರೋಪ್ ರಾಷ್ಟ್ರಗಳಲ್ಲೂ ಎಂಟ್ರಿ ಲೆವೆಲ್ ಕಾರುಗಳಾಗಿ ಜೆಸ್ಟ್ ಹಾಗೂ ಬೋಲ್ಟ್ ಮಾರಾಟ ಮಾಡುವ ಉದ್ದೇಶವನ್ನು ಟಾಟಾ ಹೊಂದಿದೆ. ಅಂದ ಹಾಗೆ ಬೋಲ್ಟ್ ಹಾಗೂ ಜೆಸ್ಟ್ ಕಾರುಗಳನ್ನು ವಿಸ್ಟಾ ಎಕ್ಸ್1 ಫ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ.



Click it and Unblock the Notifications








