ಬಜಾಜ್ ಜತೆ ಸ್ಪರ್ಧೆಗೆ ಟಾಟಾ ಮ್ಯಾಜಿಕ್ 'ಐರಿಸ್'
ನಿಮಗೆಲ್ಲರಿಗೂ ತಿಳಿದಿರುವಂತೆಯೇ 'ಕ್ವಾಡ್ರಾಸೈಕಲ್' ಎಂಬ ನೂತನ ವಿಭಾಗದ ನಾಲ್ಕು ಚಕ್ರದ ವಾಹನಗಳು ದೇಶದ ರಸ್ತೆಗೆ ಅಪ್ಪಳಿಸಲು ಸಜ್ಜಾಗಿ ನಿಂತಿದೆ. ಇದರಂತೆ ದೇಶದ ಮೊದಲ ಕ್ವಾಡ್ರಾಸೈಕಲ್ ವಾಹನವನ್ನು ಬಜಾಜ್ ಆಟೋ ಬಿಡುಗಡೆಗೊಳಿಸುವುದು ಬಹುತೇಕ ಖಚಿತವಾಗಿದೆ.
ಆಟೋ ರಿಕ್ಷಾಗಿಂತಲೂ ಹೆಚ್ಚು ಸುರಕ್ಷಿತ ಕ್ವಾಡ್ರಾಸೈಕಲ್
ಈ ಹಿಂದೆಯೂ ಉಲ್ಲೇಖರಿಸಿರುವಂತೆಯೇ ಕ್ವಾಡ್ರಾಸೈಕಲ್ ವಿಭಾಗದಲ್ಲಿ ಗುರುತಿಸಿಕೊಳ್ಳಲಿರುವ ಬಜಾಜ್ ಆರ್‌ಇ60 ಮಾದರಿಗೆ ಪ್ರತಿಸ್ಪರ್ಧಿಯೊಂದು ಸಿದ್ಧವಾಗುತ್ತಿದೆ. ಇದು ಬೇರೆ ಯಾವುದೇ ಸಂಸ್ಥೆಯಲ್ಲ. ದೇಶದ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ನೂತನ ಕ್ವಾಡ್ರಾಸೈಕಲ್ ವಾಹನವೊಂದನ್ನು ಅಭಿವೃದ್ಧಿಗೊಳಿಸುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಫೋಟೊ ಸ್ಲೈಡರ್‌ನತ್ತ ಮುಂದುವರಿಯಿರಿ.

ಪ್ರಮುಖವಾಗಿಯೂ ಕ್ವಾಡ್ರಾಸೈಕಲ್, ದಶಕದಷ್ಟು ಕಾಲ ದೇಶದ ರಸ್ತೆಗಳಲ್ಲಿ ಓಡಾಡಿರುವ ಆಟೋ ರಿಕ್ಷಾಗಳಿಗೆ ಬದಲಿ ವ್ಯವಸ್ಥೆಯಾಗಿರಲಿದೆ. ಇದು ನಗರ ಪ್ರದೇಶದಲ್ಲಿ ಅತ್ಯುತ್ತಮ ಜತೆಗೆ ಸುರಕ್ಷಿತ ಸಂಚಾರಿ ವ್ಯವಸ್ಥೆ ಎನಿಸಿಕೊಳ್ಳಲಿದೆ.

ಇದೀಗ ಬಜಾಜ್‌ಗೆ ಪ್ರತಿಸ್ಪರ್ಧಿಯಾಗಿ ಟಾಟಾ ಮೋಟಾರ್ಸ್ ಐರಿಸ್ ಎಂಬ ನೂತನ ವಾಹನ ಬಿಡುಗಡೆ ಮಾಡಲಿದೆ. ಇವೆಲ್ಲಕ್ಕೂ ಸಾರಿಗೆ ಇಲಾಖೆಯಿಂದ ಹಸಿರು ನಿಶಾನೆ ದೊರಕುವ ಅಗತ್ಯವಿದೆ.

ಸಂಸ್ಥೆಯ ಪ್ರಕಾರ ಟಾಟಾ ಐರಿಸ್ ಸಿಎನ್‌ಜಿ ಕಿಟ್‌ಗಳಲ್ಲಿಯೂ ಆಗಮನವಾಗಲಿದೆ. ಇದು ಗರಿಷ್ಠ ಇಂಧನ ಕ್ಷಮತೆ ನೀಡುವಲ್ಲಿಯೂ ಸಕ್ಷಮವಾಗಲಿದೆ.

ಇನ್ನು ಬಜಾಜ್‌ನಲ್ಲಿ 216 ಸಿಸಿ ಎಂಜಿನ್ ಇದ್ದಲ್ಲಿ ನೂತನ ಐರಿಸ್ 611 ಸಿಸಿ ಎಂಜಿನ್ ಪಡೆದುಕೊಳ್ಳಲಿದೆ. ಅಂತೆಯೇ ಬಜಾಜ್ ಭಾರಕ್ಕೆ (400 ಕೆ.ಜಿ) ಹೋಲಿಸಿದಾಗ ಟಾಟಾ ಐರಿಸ್ 680 ಕೆ.ಜಿ ತೂಕ ಹೊಂದಿರಲಿದೆ.

ಬಜಾಜ್ ಆರ್‌ಇ60 ಮಾದರಿಯಲ್ಲಿ 2+2 ಅಥವಾ 1+3 ಆಸನ ವ್ಯವಸ್ಥೆ ಹೊಂದಿರುತ್ತದೆ. ಆದರೆ ನೂತನ ಐರಿಸ್ 5 ಸೀಟು ಅಥವಾ ಹೆಚ್ಚು ಸ್ಥಳಾವಕಾಶ ಹೊಂದಿರುವ 3 ಸೀಟುಗಳನ್ನು ಹೊಂದಿರಲಿದೆ.

ಅಂತಿಮವಾಗಿ ದರದ ಬಗ್ಗೆ ಮಾತನಾಡುವುದಾದಲ್ಲಿ ಬಜಾಜ್ ಆರ್‌ಇ60 ಸಾಮಾನ್ಯ ಆಟೋ ರಿಕ್ಷಾಗಿಂತಲೂ (1.42 ಲಕ್ಷ ರು. ಎಕ್ಸ್ ಶೋ ರೂಂ) ಸ್ವಲ್ಪ ದುಬಾರಿಯೆನಿಸಲಿದೆ. ಆದರೆ ಐರಿಸ್ ಬೆಲೆ ಎರಡು ಲಕ್ಷ ರು.ಗಳ ಅಸುಪಾಸಿನಲ್ಲಿರುವ ಸಾಧ್ಯತೆಯಿದೆ.


Click it and Unblock the Notifications








