ಟಾಟಾ ಮೋಟಾರ್ಸ್‌ನಿಂದ ಮಹಿಳೆಯರಿಗೆ ಕಾರು ಸಾಲ
ಇನ್ನು ಮುಂದೆ ಕಾರು ಖರೀದಿಸಲು ಬಯಸುವ ಮಹಿಳೆಯರ ಕನಸು ಇನ್ನಷ್ಟು ಸುಲಭವಾಗಲಿದೆ. ಯಾಕೆಂದರೆ ಭಾರತೀಯ ಮಹಿಳಾ ಬ್ಯಾಂಕ್ (ಬಿಎಂಬಿ) ಜತೆ ಒಪ್ಪಂದ ಮಾಡಿಕೊಂಡಿರುವ ದೇಶದ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಮಹಿಳೆಯರಿಗೆ ಕಾರು ಸಾಲ ನೀಡಲಿದೆ.
ಇಡೀ ಜಗತ್ತೇ ವಿಶ್ವ ಅಂತರಾಷ್ಟ್ರೀಯ ಮಹಿಳಾ ದಿನ ಆಚರಿಸುವ ಈ ಸುಸಂದರ್ಭದಲ್ಲಿ ಟಾಟಾ ಇಂತಹದೊಂದು ಸಿಹಿ ಸುದ್ದಿ ಬಿತ್ತರಿಸಿದೆ. ಅರ್ಹ ಟಾಟಾ ಮೋಟಾರ್ಸ್ ಗ್ರಾಹಕರಿಗೆ ಶೇಕಡಾ 10.5 ಬಡ್ಡಿದರದಲ್ಲಿ ಹಣಕಾಸು ನೆರವು ದೊರಕಲಿದೆ.

ಪ್ರಸ್ತುತ ಸೇವೆಯು ಟಾಟಾದ ಮಹಿಳಾ ಗ್ರಾಹಕರಿಗೆ ದೇಶದಲ್ಲಿ ಸ್ಥಿತಗೊಂಡಿರುವ ಎಲ್ಲ ಭಾರತೀಯ ಮಹಿಳಾ ಬ್ಯಾಂಕ್ ಬ್ರಾಂಚ್‌ಗಳಲ್ಲಿ ದೊರಕಲಿದೆ. ಅದೇ ರೀತಿ ಕಾರು ಸಾಲ ಅವಧಿಯನ್ನು ಗರಿಷ್ಠ ಏಳು ವರ್ಷಗಳ ವರೆಗೆ ವಿಸ್ತರಿಸಬಹುದಾಗಿದೆ.
ಇನ್ನು ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಹಾಗೆಯೇ ಗ್ರಾಮೀಣ ಪ್ರದೇಶಗಳಲ್ಲಿ ಇದುವರೆಗೆ ಬ್ಯಾಂಕ್ ಖಾತೆ ತೆರೆಯದಿರುವ ಮಹಿಳೆಯರಿಗೂ ಈ ವಿಶೇಷ ಕಾರು ಹಣಕಾಸು ಸೇವೆಯನ್ನು ಟಾಟಾ ಒದಗಿಸಲಿದೆ.


Click it and Unblock the Notifications








