ಆಲ್ಟೊ ಪ್ರತಿಸ್ಪರ್ಧಿ; ಚೀನಾ ಸಂಸ್ಥೆ ಜತೆ ಟಾಟಾ ಒಪ್ಪಂದ?

By Nagaraja

ತನ್ನ ಉತ್ಪನ್ನಗಳ ಗುಣಮಟ್ಟತೆಯನ್ನು ಇನ್ನಷ್ಟು ಹೆಚ್ಚಿಸುವ ಇರಾದೆ ಹೊಂದಿರುವ ದೇಶದ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಚೀನಾ ವಾಹನ ತಯಾರಕ ಸಂಸ್ಥಯೊಂದಿಗೆ ಮಾತುಕತೆ ನಡೆಸುತ್ತಿದೆ. ಚೀನಾದ ಚೆರಿ ಆಟೋಮೊಬೈಲ್ ಜತೆ ಚರ್ಚೆ ನಡೆಸಿರುವ ಟಾಟಾ, ಕಾರು ಫ್ಯಾಟ್‌ಫಾರ್ಮ್ ಹಂಚಿಕೊಳ್ಳುವ ಮೂಲಕ ಆಯಾ ದೇಶಗಳಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ನೆರವಾಗುವ ಬಗ್ಗೆ ಮಾತುಕತೆ ನಡೆಸಿದೆ.

ಇನ್ನೊಂದು ವರದಿಯ ಪ್ರಕಾರ ಚೀನಾ ಮೂಲದ ಚೆರಿ ಸಂಸ್ಥೆಯು ತನ್ನ ಕ್ಯೂಕ್ಯೂ, ಎ1, ಎಂ1 ಮೈಕ್ರೋ ಸೆಡಾನ್ ಮತ್ತು ಎ3 ಕಾಂಪಾಕ್ಟ್ ಕಾರು ತಲಹದಿಯನ್ನು ಟಾಟಾಗೆ ಮಾರುವ ಉದ್ದೇಶವನ್ನು ಹೊಂದಿದೆ. ಪ್ರಮುಖವಾಗಿಯೂ ಚೆರಿ ಕ್ಯೂಕ್ಯೂ ಫ್ಯಾಟ್‌ಫಾರ್ಮ ತಮ್ಮದಾಗಿಸುವ ಇರಾದೆಯನ್ನು ಟಾಟಾ ಹೊಂದಿದ್ದು, ಇದು ಮಾರುತಿ ಆಲ್ಟೊ ಪ್ರತಿಸ್ಪರ್ಧಿಯಾಗಿರಲಿದೆ. ಇದಕ್ಕಾಗಿ ನೂತನ ಫ್ಯಾಟ್‌ಫಾರ್ಮ್ ನಿರ್ಮಿಸುವುದಕ್ಕಿಂತಲೂ ಈಗಾಗಲೇ ಚಾಲ್ತಿಯಲ್ಲಿರುವ ತಲಹದಿ ಖರೀದಿಸುವುದು ಹೆಚ್ಚು ಸುಲಭವಾಗಲಿದೆ.

QQ

ಚೀನಾದ ಚೆರಿ ವಾಹನ ತಯಾರಕ ಸಂಸ್ಥೆಯ ಪೈಕಿ ಅತಿ ಹೆಚ್ಚು ಮಾರಾಟವಾದ ಕಾರುಗಳಲ್ಲಿ ಒಂದಾಗಿರುವ ಕ್ಯೂಕ್ಯೂ, ಭಾರತಕ್ಕೂ ಪ್ರವೇಶಿಸುವ ಯೋಜನೆ ಹೊಂದಿದೆ. ಆದರೆ ನಿಕಟ ಭವಿಷ್ಯದಲ್ಲಿ ಇದು ಕಷ್ಟಕರವಾಗಿದ್ದರಿಂದ ಟಾಟಾ ನೆರವನ್ನು ಪಡೆಯುವ ಸಾಧ್ಯತೆಯಿದೆ.

ಇಲ್ಲಿ ಗಮನಾರ್ಹ ಅಂಶವೆಂದರೆ ಟಾಟಾ ಮೋಟಾರ್ಸ್ ಅಧೀನತೆಯಲ್ಲಿರುವ ಜಾಗ್ವಾರ್ ಲ್ಯಾಂಡ್ ರೋವರ್, ಚೀನಾ ಮೂಲದ ಈ ಸಂಸ್ಥೆ ಜತೆ ಪಾಲುದಾರಿಕೆ ಹೊಂದಿದ್ದು, ಸ್ಥಳೀಯ ಮಾರುಕಟ್ಟೆಗೆ ತಮ್ಮ ಉತ್ಪನ್ನ ಬಿಡುಗಡೆ ಮಾಡಲು ನೆರವಾಗುತ್ತಿದೆ.

Article Published On: Monday, March 10, 2014, 15:43 [IST]
English summary
Tata Motors is said to be holding discussions with Chinese automaker Chery Automobiles over sharing of platforms and helping each other with introducing their products in their respective countries.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+