ಟಾಟಾ ಧಾರವಾಡ ಘಟಕಕ್ಕೆ 'ರಾಷ್ಟ್ರೀಯ ಚೈತನ್ಯ ಸಂರಕ್ಷಣಾ ಪ್ರಶಸ್ತಿ' ಗೌರವ
ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ಲಿಮೆಟೆಡ್‌ನ ಧಾರವಾಡ ಘಟಕವು ಆಟೋಮೊಬೈಲ್ ವಿಭಾಗದಲ್ಲಿ 'ರಾಷ್ಟ್ರೀಯ ಚೈತನ್ಯ ಸಂರಕ್ಷಣಾ ಪ್ರಶಸ್ತಿ 2014'ರಲ್ಲಿ ಎರಡನೇ ಸ್ಥಾನಕ್ಕೆ ಅರ್ಹವಾಗಿದೆ.
ನಿರ್ಧಿಷ್ಟ ಸಂಸ್ಥೆಗಳು ಚೈತನ್ಯದ ಸಂರಕ್ಷಣೆ ಹಾಗೂ ಮಿತ ಬಳಕೆಗೆ ಅನುಸರಿಸಿದ ಕ್ರಮಗಳ ಆಧಾರದಲ್ಲಿ ಪ್ರಶಸ್ತಿಯನ್ನು ನಿರ್ಧರಿಸಲಾಗುತ್ತದೆ. ಕೇಂದ್ರ ವಿದ್ಯುತ್ ಸವಿವಾಲಯದ ನಿಯಂತ್ರಣದಲ್ಲಿರುವ ಶಕ್ತಿ ಸಾಮರ್ಥ್ಯ ಬ್ಯುರೋ ಸಮಿತಿಯು ಪ್ರಶಸ್ತಿ ಪಟ್ಟಿಯನ್ನು ಆರಿಸಿದೆ. ಅಂತೆಯೇ ಪ್ರತಿ ವರ್ಷವು ರಾಷ್ಟ್ರೀಯ ಶಕ್ತಿ ಸಂರಕ್ಷಣಾ ದಿನವಾದ ಡಿಸೆಂಬರ್ 14ರಂದು ಪ್ರಶಸ್ತಿ ವಿತರಿಸಲಾಗುತ್ತದೆ.

2012, ಮಾರ್ತ್ 3ರಂದು ಕಾರ್ಯಾಚರಣೆ ಆರಂಭಿಸಿದ್ದ ಹಸಿರು ಸ್ನೇಹಿ ಧಾರವಾಡ ಘಟಕವು 2012ರಲ್ಲಿ ಉಷ್ಣ ಶಕ್ತಿಯ ನಿರ್ದಿಷ್ಟ ಬಳಕೆಯನ್ನು ಶೇಕಡಾ 49ರಷ್ಟು ಕಡಿತಗೊಳಿಸಿತ್ತಲ್ಲದೆ 2012-13ರಲ್ಲಿ ವಿದ್ಯುತ್ ಬಳಕೆಯನ್ನು ಶೇ. 29ರಷ್ಟು ಕಡಿತಗೊಳಿಸಿತ್ತು.
ಟಾಟಾ ಧಾರವಾಡ ಘಟಕದಲ್ಲಿ ಅತ್ಯಂತ ಮುಂದುವರಿದ ತಂತ್ರಜ್ಞಾನವನ್ನು ಬಳಕೆ ಮಾಡುತ್ತಿದ್ದು, ಆಟೋಮ್ಯಾಟಿಕ್ ಹಾಗೂ ಅಲ್ಟ್ರಾ ಆಧುನಿಕ ನಿರ್ಮಾಣ ತಂತ್ರಗಾರಿಕೆಯನ್ನು ಅನುಸರಿಸಲಾಗುತ್ತಿದೆ.


Click it and Unblock the Notifications








