ಜೆಸ್ಟ್ ಬೆನ್ನಲ್ಲೇ ಬೋಲ್ಟ್ ಬಿಡುಗಡೆಗೆ ಸಿದ್ಧ

By Nagaraja

ಕೆಲವು ದಿನಗಳ ಹಿಂದೆಯಷ್ಟೇ ಜೆಸ್ಟ್ ಕಾಂಪಾಕ್ಟ್ ಸೆಡಾನ್ ಕಾರನ್ನು ದೇಶಿಯ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗಿತ್ತು. ಇದರ ಬೆನ್ನಲ್ಲೇ ಟಾಟಾದಿಂದ ಮಗದೊಂದು ಆಕರ್ಷಕ ಕಾರು ಬಿಡುಗಡೆಗೆ ಸನ್ನದ್ಧಗೊಳಿಸುತ್ತಿದೆ.

ಅದು ಯಾವುದೆಂಬುದನ್ನು ಬಲ್ಲೀರಾ? ಹೌದು, ಈ ಹಿಂದೆ ನಡೆದ 2014 ದೆಹಲಿ ಆಟೋ ಎಕ್ಸ್ ಪೋದಲ್ಲಿ ಜೆಸ್ಟ್ ಜೊತೆಗೆಯೇ ಕಾಣಿಸಿಕೊಂಡಿದ್ದ ಬೋಲ್ಟ್ ಸದ್ಯದಲ್ಲೇ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಈಬಗ್ಗೆ ಬೋಲ್ಟ್ ವಿಶೇಷ ವೆಬ್‌ಸೈಟ್‌ನಿಂದ ಮಾಹಿತಿ ಗಿಟ್ಟಿಸಿಕೊಳ್ಳಬಹುದಾಗಿದೆ (ಇಲ್ಲಿಗೆ ಭೇಟಿ ಕೊಡಿರಿ).

Tata Motors

ನಿಕಟ ಭವಿಷ್ಯದಲ್ಲಿ ಬಿಡುಗಡೆಯಾಗಲಿರುವ ಬೋಲ್ಟ್ ಮಾದರಿಯಲ್ಲೂ ಹೊಸ ವಿನ್ಯಾಸ ತಂತ್ರಜ್ಞಾನವನ್ನು ಆಳವಡಿಸಲಾಗಿದೆ. ಇದು ಸ್ಮರ್ಧಾತ್ಮಕ ದರಗಳಲ್ಲಿ ಬಿಡುಗಡೆಯಾಗುವುದು ನಿಚ್ಚಳವೆನಿಸಿದೆ.

ಟಾಟಾದ ಡಿಸೈನ್ ನೆಕ್ಸ್ಟ್, ಡ್ರೈವ್ ನೆಕ್ಸ್ಟ್ ಮತ್ತು ಕನೆಕ್ಟ್ ನೆಕ್ಸ್ಟ್ ತಂತ್ರಗಾರಿಕೆಯನ್ನು ಇದರಲ್ಲೂ ಕಾಯ್ದುಕೊಳ್ಳಲಾಗುವುದು. ಹಾಗೆಯೇ 1.2 ರೆವೋಟ್ರಾನ್ ಪೆಟ್ರೋಲ್ ಎಂಜಿನ್ ಗ್ರಾಹಕರಿಗೆ ಹೊಸ ಅನುಭವವಾಗಲಿದೆ. ಇದು 84 ಅಶ್ವಶಕ್ತಿ (140 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ.

ಅದೇ ಹೊತ್ತಿಗೆ 1.3 ಲೀಟರ್ ಕ್ವಾಡ್ವಾಜೆಟ್ ಡೀಸೆಲ್ ಎಂಜಿನ್ ಸಹ ವಿಭಿನ್ನತೆಗೆ ಕಾರಣವಾಗಲಿದೆ. ಇದು 74 ಅಶ್ವಶಕ್ತಿ (190 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಸುಧಾರಿತ ಸ್ಟೀರಿಂಗ್ ವೀಲ್ ಬೋಲ್ಟ್ ಉತ್ತಮ ಚಾಲನಾ ಅನುಭವಕ್ಕೆ ಕಾರಣವಾಗಲಿದೆ. ಇದಲ್ಲದೆ ಕ್ಲೈಮೇಟ್ ಕಂಟ್ರೋಲ್, ಟಚ್ ಸ್ಕ್ರೀನ್ ಮಾಹಿತಿ ಮನರಂಜನಾ ವ್ಯವಸ್ಥೆ, ಸುಧಾರಿತ ಸ್ಪೀಕರ್, ವಾಯ್ಸ್ ಕಂಟ್ರೋಲ್ ಮತ್ತು ಸ್ಮಾರ್ಟ್‌ಫೋನ್ ಇಂಟೆಗ್ರೇಷನ್ ಇರಲಿದೆ.

More from DriveSpark

Article Published On: Monday, August 18, 2014, 14:44 [IST]
English summary
Tata Motors has recently launched its compact sedan in India the Zest. Earlier this year the Indian manufacturer had showcased two new products at 2014 Auto Expo, which was held at New Delhi. They had revealed a compact sedan and a hatchback to be launched in 2014.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+