ಟಾಟಾ ನ್ಯಾನೋ ಆಟೋಮ್ಯಾಟಿಕ್ ಸದ್ಯದಲ್ಲೇ ಲಾಂಚ್
ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ಸದ್ಯದಲ್ಲೇ ತನ್ನ ಜನಪ್ರಿಯ ನ್ಯಾನೋದ ಆಟೋಮ್ಯಾಟಿಕ್ ವರ್ಷನ್ ಲಾಂಚ್ ಮಾಡಲಿದೆ. ಜನಸಾಮಾನ್ಯರ ಕಾರು ಎಂದೇ ಬಿಂಬಿತವಾಗಿರುವ ನ್ಯಾನೋ, ದೇಶದ ವಾಹನ ಇತಿಹಾಸದಲ್ಲೇ ಅತ್ಯಂತ ಕಡಿಮೆ ದರದಲ್ಲಿ ಲಭ್ಯವಾಗಲಿರುವ ಆಟೋಮ್ಯಾಟಿಕ್ ಕಾರು ಎನಿಸಿಕೊಳ್ಳಲಿದೆ.
ವರದಿಗಳ ಪ್ರಕಾರ ನ್ಯಾನೋ ಟ್ವಿಸ್ಟ್ ವೆರಿಯಂಟ್‌ನಲ್ಲಿ ಆಟೋಮ್ಯಾಟಿಕ್ ವರ್ಷನ್ ಪರಿಚಯವಾಗಲಿದೆ. ಇದಕ್ಕೂ ಮೊದಲು ನ್ಯಾನೋ ಆಟೋಮ್ಯಾಟಿಕ್ ವೆರಿಯಂಟ್ ಬಗ್ಗೆ ಸಂಸ್ಥೆಯು ಪರಿಶೀಲನೆ ನಡೆಸಲಿದೆ.

ಇನ್ನು ಹಬ್ಬದ ಆವೃತ್ತಿಗೂ ಮೊದಲೇ ನ್ಯಾನೋ ಟ್ವಿಸ್ಟ್ ಆಗಮನವಾಗುವ ನಿರೀಕ್ಷೆಯಿದೆ. ಇತ್ತೀಚೆಗಷ್ಟೇ ಲಾಂಚ್ ಆಗಿದ್ದ ಟ್ವಿಸ್ಟ್ ಪವರ್ ಸ್ಟೀರಿಂಗ್ ಪಡೆದಿತ್ತು.
ಫಾರ್ಮುಲಾ ಒನ್ ರೇಸ್ ಕಾರುಗಳಿಗೆ ಟ್ರಾನ್ಸ್‌ಮಿಷನ್ ವಿತರಿಸುತ್ತಿರುವ ಇಟಲಿಯ ಮಗ್ನೆಟಿ ಮರೆಲ್ಲಿ ನೆರವಿನೊಂದಿಗೆ ಟಾಟಾ ಸಂಸ್ಥೆಯು ತನ್ನ ಎಫ್-ಟ್ರಾನಿಕ್ ರೇಂಜ್ ವಾಹನಗಳನ್ನು ಅಭಿವೃದ್ಧಿಪಡಿಸಲಿದೆ. ಈ ಆಟೋಮ್ಯಾಟಿಕ್ ಕಾರುಗಳು ನಯವಾದ ನಿರ್ವಹಣೆಗೆ ನೆರವಾಗಲಿದೆ.
ಟಾಟಾದ ಹೊಸ ಎಎಂಟಿ ವರ್ಷನ್ ಹೆಚ್ಚು ವೈಶಿಷ್ಟ್ಯಗಳನ್ನು ಪಡೆದುಕೊಂಡಿರಲಿದ್ದು, ಐದು ಬಾಗಿಲುಗಳನ್ನು ಪಡೆದುಕೊಳ್ಳಲಿದೆ. ಇದು ಟಾಟಾದಿಂದ ಕಂಡುಬಂದಿರುವ ಸ್ವಾಗತಾರ್ಹ ನಡೆಯಾಗಿದೆ.


Click it and Unblock the Notifications