ಅಚ್ಚರಿ; ದೆಹಲಿ ಎಕ್ಸ್‌ಪೋದಲ್ಲಿ ನ್ಯಾನೋ ಡೀಸೆಲ್ ಪ್ರದರ್ಶನವಿಲ್ಲ?

By Nagaraja

ಅಚ್ಚರಿಗೊಳಿಸುವ ಅದೇ ಸಮಯಕ್ಕೆ ಅಷ್ಟೇ ಬೆರಗಾಗಿಸುವ ಸುದ್ದಿಯೊಂದರಲ್ಲಿ ಮುಂಬರುವ 2014 ದೆಹಲಿ ಆಟೋ ಎಕ್ಸ್ ಪೋದಲ್ಲಿ ನ್ಯಾನೋ ಡೀಸೆಲ್ ಕಾರು ಪ್ರದರ್ಶನ ನಡೆಯುವುದಿಲ್ಲವಂತೆ! ಇದು ವಾಹನ ಪ್ರಿಯರಲ್ಲಿ ತುಂಬಾನೇ ನಿರಾಸೆ ತಂದಿದೆ.

ಸಮಕಾಲೀನ ವಾಹನ ಮಾರುಕಟ್ಟೆ ಪರಿಸ್ಥಿತಿಯಲ್ಲಿ ನ್ಯಾನೋ ಡೀಸೆಲ್ ವೆರಿಯಂಟ್ ಬರಮಾಡಿಕೊಳ್ಳಲು ಗ್ರಾಹಕರು ಅತಿ ಹೆಚ್ಚು ಉತ್ಸಾಹ ತೋರಿದ್ದರು. ಕನಿಷ್ಠ ಪಕ್ಷ ದೆಹಲಿ ವಾಹನ ಪ್ರದರ್ಶನ ಮೇಳದಲ್ಲಿ ಇದು ಅನಾವರಣಗೊಳ್ಳುವ ಬಗ್ಗೆ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿತ್ತು.

Tata Nano

ಆದರೆ ಕಳೆದ ಕೆಲವು ತಿಂಗಳುಗಳಲ್ಲಿ ಡೀಸೆಲ್ ದರದಲ್ಲಿ ಗಣನೀಯ ವರ್ಧನೆ ಕಂಡುಬಂದಿರುವುದು ದೇಶದ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ಯೋಜನೆಯನ್ನು ಹಿಂದಕ್ಕೆ ತಳ್ಳುವಂತಾಗಿದೆ.

ಬಹುತೇಕ ಎಲ್ಲ ತಿಂಗಳಲ್ಲೂ ಡೀಸೆಲ್ ದರದಲ್ಲಿ ವರ್ಧನೆ ಕಂಡುಬರುತ್ತಿದೆ. ಇದು ಕಂಪನಿಯ ಯೋಜನೆಯನ್ನು ಮರು ಪರಿಶೀಲಿಸುವಂತೆ ಪ್ರೇರೇಪಿಸುತ್ತಿದೆ. ಪ್ರಸ್ತುತ ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ದರ 71.50 ರು. ಆಗಿದ್ದರೆ ಡೀಸೆಲ್ ಬೆಲೆ 53.80 ರು.ಗಳಿಷ್ಟಿದೆ. ಈ ಎಲ್ಲ ಊಹಾಪೋಹಗಳಿಗೆ ಕಂಪನಿಯಿಂದಲೇ ಸ್ಪಷ್ಟ ನಿರ್ಧಾರ ಹೊರಬೀಳಬೇಕಾಗಿದೆ.

More from DriveSpark

Article Published On: Thursday, January 2, 2014, 13:01 [IST]
English summary
The Tata Nano diesel version, which has been under development for quite some time now, might not be showcased in the Delhi Auto expo 2014.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+