ಕಾನೂನು ಸುವ್ಯವಸ್ಥೆ ಕಾಪಾಡಲು ಟಾಟಾ ಸುಮೋ ರೆಡಿ

By Nagaraja

ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ವಿವಿಧ ಪೊಲೀಸ್ ಹಾಗೂ ಕಾನೂನೂ ಜಾರಿ ಇಲಾಖೆಗಳಿಂದ 1542ರಷ್ಟು ಸುಮೋ ಗೋಲ್ಡ್ ವಾಹನಗಳಿಗಾಗಿ ಆದೇಶ ಲಭಿಸಿರುವುದಾಗಿ ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ಸ್ಪಷ್ಟಪಡಿಸಿದೆ.

ದೇಶದ ಅತಿದೊಡ್ಡ ಉಪಯುಕ್ತ ವಾಹನ ಮಾರಾಟ ಸಂಸ್ಥೆಗಳಲ್ಲಿ ಒಂದಾಗಿರುವ ಟಾಟಾದ ಅತಿ ಜನಪ್ರಿಯ ಮಾದರಿಗಳಲ್ಲಿ ಸುಮೋ ಗೋಲ್ಡ್ ಒಂದಾಗಿದೆ. ಇದು ಅತ್ಯಂತ ಶಕ್ತಿಶಾಲಿ ಎಂಟ್ರಿ ಲೆವೆಲ್ ಕ್ರೀಡಾ ಬಳಕೆಯ ವಾಹನ ಕೂಡಾ ಹೌದು.

tata Sumo Gold

ಅನುಕೂಲತೆ, ಆರಾಮದಾಯಕ ಹಾಗೂ ನಿರ್ವಹಣೆಯ ವಿಚಾರದಲ್ಲಿ ಸುಮೋ ಗೋಲ್ಡ್ ಇತರ ಸ್ಪರ್ಧಿಗಳನ್ನು ಮೀರಿ ನಿಂತಿದೆ. 3000 ಆವರ್ತನಕ್ಕೆ 85ರಷ್ಟು ಅಶ್ವಶಕ್ತಿ ಉತ್ಪಾದಿಸಲು ಸಾಮರ್ಥ್ಯ ಹೊಂದಿರುವ ಸುಮೋ ಪ್ರತಿ ಲೀಟರ್‌ಗೆ 15 ಕೀ.ಮೀ.ಗಳಷ್ಟು ಮೈಲೇಜ್ ನೀಡುತ್ತದೆ.

ಇದು ಬೆಸ್ಟ್ ಇನ್ ಕ್ಲಾಸ್ 182 ಎಂಎಂ ಗ್ರೌಂಡ್ ಕ್ಲಿಯರನ್ಸ್ ಸಹ ಪಡೆದುಕೊಂಡಿದೆ. ಅಂತೆಯೇ ಹೆಚ್ಚಿನ ಸ್ಥಳಾವಕಾಶವು ಇದರಲ್ಲಿದೆ.

ವಿಶೇಷವೆಂದರೆ ವೈಯಕ್ತಿಕ ಮಾತ್ರವಲ್ಲದೆ ವಾಣಿಜ್ಯ ಬಳಕೆಯಲ್ಲೂ ಸುಮೋ ಹೆಚ್ಚು ಜನಪ್ರಿಯತೆ ಕಾಪಾಡಿಕೊಂಡಿದೆ. ಇದೀಗ ಪೊಲೀಸ್ ಇಲಾಖೆಯಿಂದ ಆದೇಶ ಲಭಿಸಿರುವುದು ಸುಮೋ ಘನತೆಯನ್ನು ಹೆಚ್ಚಿಸಿರುವುದಾಗಿ ಸಂಸ್ಥೆ ತಿಳಿಸಿದೆ.

ಅಂದ ಹಾಗೆ ದೇಶದ ರಕ್ಷಣಾ ವಿಭಾಗಕ್ಕೆ ಇದು ಮೊದಲ ಬಾರಿಯೇನಲ್ಲ ಟಾಟಾ ಸೇವೆ ಸಲ್ಲಿಸುತ್ತಿರುವುದು. 1958ನೇ ಇಸವಿಯಿಂದಲೇ ಆರಂಭವಾಗಿರುವ ಈ ಪ್ರಕ್ರಿಯೆಯಲ್ಲಿ ಇದುವರೆಗೆ ಒಂದು ಲಕ್ಷಕ್ಕೂ ಹೆಚ್ಚು ವಾಹನಗಳನ್ನು ಭಾರತೀಯ ಸೇನೆ ಹಾಗೂ ಅರೆಸೇನಾ ಪಡೆಗಳಿಗೆ ಹಸ್ತಾಂತರಿಸಲಾಗಿದೆ.

ಕಾರ್ ಕೇರ್ ಸೆಟ್ - ಪಡೆಯಿರಿ ಶೇ.10ರಷ್ಟು ರಿಯಾಯಿತಿ - ಸೀಮಿತ ಆಫರ್ ಮಾತ್ರ

Article Published On: Wednesday, December 3, 2014, 12:58 [IST]
English summary
Tata Motors Receives Order From Police For 1542 Sumo Gold Vehicles
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+