ಟಾಟಾ ಜೆಸ್ಟ್, ಬೋಲ್ಟ್ ವೆಬ್‌ಸೈಟ್ ಲೈವ್
ದೇಶದ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ತನ್ನ ಮುಂಬರುವ ಬಹುನಿರೀಕ್ಷಿತ ಕಾರುಗಳಾದ ಟಾಟಾ ಜೆಸ್ಟ್ ಹಾಗೂ ಬೋಲ್ಟ್ ಆವೃತ್ತಿಗಳಿಗಾಗಿ ನೂತನ ವೆಬ್‌ಸೈಟ್ ಲಾಂಚ್ ಮಾಡಿದೆ.
ಟಾಟಾ ಜೆಸ್ಟ್ ಕಾಂಪಾಕ್ಟ್ ಸೆಡಾನ್ ಹಾಗೂ ಟಾಟಾ ಬೋಲ್ಟ್ ಹ್ಯಾಚ್‌ಬ್ಯಾಕ್ ಕಾರು ಕೊಳ್ಳಲು ಬಯಸುವ ಆಸಕ್ತ ಗ್ರಾಹಕರು ಇದೀಗ ನೂತನ ವೆಬ್‌ಸೈಟ್ ಮೂಲಕ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

ಇದಕ್ಕೂ ಮೊದಲು 2014 ಆಟೋ ಎಕ್ಸ್ ಪೋಗಿಂತಲೂ ಮೊದಲು ಭರ್ಜರಿ ಪ್ರದರ್ಶನ ಕಂಡಿದ್ದ ಟಾಟಾ ಜೆಸ್ಟ್ ಹಾಗೂ ಬೋಲ್ಟ್ ಮುಖಾಂತರ ಟಾಟಾ ಸಂಸ್ಥೆಯು ಗತ ಕಾಲದ ವೈಭವ ಮರುಕಳಿಸುವ ಇರಾದೆ ಹೊಂದಿತ್ತು.
ನೂತನ ಕಾರುಗಳು ಹೊಸ ವಿನ್ಯಾಸ, ಗ್ರಿಲ್, ಟೈಲ್ ಲ್ಯಾಂಪ್, ಬಂಪರ್ ಹಾಗೂ ಔಟ್‌ಸೈಡ್ ರಿಯರ್ ವ್ಯೂ ಮಿರರ್ ಪಡೆದುಕೊಂಡಿದೆ. ಇದು ಕಾರಿಗೆ ತಾಜಾ ವಿನ್ಯಾಸವನ್ನು ಕಲ್ಪಿಸಲಿದೆ.


Click it and Unblock the Notifications








