ಟಾಟಾ ಟಾಮ್ ಸ್ಮಾರ್ಟ್ ಪೋರ್ಟಬಲ್ ನೇವಿಗೇಷನ್ ಡಿವೈಸ್
ಮುಂಚೂಣಿಯ ಆಟೋಮೋಟಿವ್ ನೇವಿಗೇಷನ್ ಉಪಕರಣ ತಯಾರಕ ಸಂಸ್ಥೆಯಾಗಿರುವ ಟಾಮ್ ಟಾಮ್ (TomTom) ನೂತನ ಸ್ಟಾರ್ಟ್ ಸಿರೀಸ್ ಸ್ಮಾರ್ಟ್ ಪೋರ್ಟಬಲ್ ನೇವಿಗೇಷನ್ (ಪಿಎನ್‌ಡಿ) ಸಿರೀಸ್ ಲಾಂಚ್ ಮಾಡಿದೆ. ಇದು ಸ್ಟಾರ್ಟ್ 20 ಹಾಗೂ ಸ್ಟಾರ್ಟ್ 25 ವೆರಿಯಂಟ್‌ಗಳಲ್ಲಿ ಲಭ್ಯವಾಗಲಿದೆ.
ಮೊದಲನೆಯದಾಗಿ ಸ್ಕ್ರೀನ್ ಗಾತ್ರವು ಇವೆರಡನ್ನು ಪ್ರತ್ಯೇಕಸಲಿದೆ. ಅಂದರೆ ಅನುಕ್ರಮವಾಗಿ 4.3 ಹಾಗೂ 5 ಇಂಚಿನ ಪರದೆ ಪಡೆದುಕೊಂಡಿರಲಿದೆ. ಹಾಗೆಯೇ ಡ್ಯಾಶ್‌ಬೋರ್ಡ್ ಅಥವಾ ವಿಂಡ್ ಸ್ಕ್ರೀನ್‌ಗಳಲ್ಲಿ ಫಿಕ್ಸಡ್ ಹಾಗೂ ಸೆಮಿ ಫಿಕ್ಸಡ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

ಈ ಸ್ಟಾರ್ಟ್ ಸಿರೀಸ್ ದೇಶದ 7300 ನಗರಗಳಲ್ಲಿ ಸೇವೆ ಒದಗಿಸಲಿದೆ. ಇದಕ್ಕೆ ಯಾವುದೇ ರೋಮಿಂಗ್ ತೆರಿಗೆ ತಗಲುವುದಿಲ್ಲ. ಅಲ್ಲದೆ ಆಂತರಿಕ ಸ್ಟೋರೇಜ್ ವ್ಯವಸ್ಥೆ ಕೂಡಾ ಇರುತ್ತದೆ.
ಇವೆಲ್ಲದರ ಜತೆಗೆ ಟಾಮ್ ಟಾಮ್, ತಮ್ಮ ಸ್ಮಾರ್ಟ್ ಸಿರೀಸ್‌ನಲ್ಲಿ ಜೀವಾವಧಿ ಮ್ಯಾಪ್ ಸೇವೆಯನ್ನು ಒದಗಿಸುತ್ತದೆ. ಅಂದರೆ ವರ್ಷಕ್ಕೆ ನಾಲ್ಕು ಬಾರಿ ಮ್ಯಾಪ್ ಅಪ್‌ಡೇಟ್ ಆಗಲಿದೆ.

ಸ್ಮಾರ್ಟ್ ಸಿರೀಸ್ ವಿಶಿಷ್ಟತೆ:
ಧ್ವನಿ ಮಾರ್ಗದರ್ಶನ,
ಇಂಗ್ಲಿಂಷ್, ಹಿಂದಿ ಸೇರಿದಂತೆ 14 ಭಾರತೀಯ ಭಾಷೆಗಳಲ್ಲಿ ಲಭ್ಯ,
ವಿಭಜಿತ ಪರದೆ, ಸುಧಾರಿತ ಲೇನ್ ಮಾರ್ಗದರ್ಶನ,
ಲ್ಯಾಂಡ್‌ಮಾರ್ಕ್ ನೇವಿಗೇಷನ್,
ಡ್ಯುಯಲ್ ಮೌಂಟಿಂಗ್ ಆಪ್ಷನ್
ಟಾಮ್ ಟಾಮ್‌ನಲ್ಲಿರುವ ಮ್ಯಾಪ್ ಶೇರ್ ಕಮ್ಯೂನಿಟಿ ಮಗದೊಂದು ಆಕರ್ಷಕ ವೈಶಿಷ್ಟ್ಯವಾಗಿರಲಿದೆ. ಹಾಗೆಯೇ ಹೆಲ್ಪ್ ಮಿ ಮುಖಾಂತರ ಆಸ್ಪತ್ರೆ, ರೋಡ್ ಸೈಡ್ ಅಸಿಸ್ಟಂಟ್ ಮುಂತಾದ ಅಗತ್ಯ ಮಾಹಿತಿಗಳು ಲಭಿಸಲಿದೆ.

ಅಷ್ಟಕ್ಕೂ ಸ್ಟಾರ್ಟ್ 20 ದರ 9.499 ರು. ಹಾಗೆಯೇ ಸ್ಟಾರ್ಟ್ 10.999 ರು.ಗಳಷ್ಟು ದುಬಾರಿಯೆನಿಸಲಿದೆ. ಇದು ಆನ್‌ಲೈನ್‌ನಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆ. ಸ್ಮಾರ್ಟ್ ಫೋನ್ ಮುಖಾಂತರವೂ ಇನ್ ಕಾರ್ ಫೋನ್ ಮೌಂಟ್ ಎಂಬ ನೇವಿಗೇಷನ್ ಡಿವೈಸ್ ಅನ್ನು ಸಹ ಟಾಮ್ ಟಾಮ್ ಹೊರತಂದಿದೆ.


Click it and Unblock the Notifications








