ಟೊಯೊಟಾ ಐಗೊ ಭಾರತಕ್ಕೆ ಬರುವ ಸಾಧ್ಯತೆ ಎಷ್ಟು?

By Nagaraja

ದೈಹಟ್ಸು ಅಧೀನತೆಯನ್ನು ಹೊಂದಿರುವ ಜಪಾನ್ ಮೂಲದ ಟೊಯೊಟಾ ಸಂಸ್ಥೆಯು ಭಾರತದಲ್ಲಿ ಸಣ್ಣ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯ ಬಗ್ಗೆ ಕಳೆದ ದಿನವೇ ನಾವು ವರದಿ ಮಾಡಿರುತ್ತೇವೆ.

ಸಮಕಾಲೀನ ಮಾರುಕಟ್ಟೆ ಪರಿಸ್ಥಿತಿಯಲ್ಲಿ ಭಾರತೀಯ ಸಣ್ಣ ಕಾರು ವಿಭಾಗದಲ್ಲಿ ಮಾರುತಿ ಸುಜುಕಿ ಕಾರುಗಳು ಅಧಿಪತ್ಯ ಸ್ಥಾಪಿಸಿದೆ. ಮಾರುತಿಯ ಆಲ್ಟೊ ಕೆ10 ಮತ್ತು ಹ್ಯುಂಡೈ ಇಯಾನ್‌ಗಳಂತಹ ಮಾದರಿಗಳು ಉತ್ತಮ ಮಾರಾಟವನ್ನು ಕಾಯ್ದುಕೊಂಡಿದೆ.


ಈ ನಡುವೆ ಟೊಯೊಟಾದ ಜನಪ್ರಿಯ ಐಗೊ (Aygo) ಭಾರತ ಮಾರುಕಟ್ಟೆ ಪ್ರವೇಶಿಸುವ ಕುರಿತಾಗಿ ವರದಿಗಳು ಬರತೊಡಗಿದೆ. ನಿಮ್ಮ ಮಾಹಿತಿಗಾಗಿ, ಟೊಯೊಟಾ ಸಂಸ್ಥೆಯು ಐಗೊ ಮಾದರಿಯನ್ನು ಯುರೋಪ್ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ.

ಸಹಜವಾಗಿಯೇ ಯುರೋಪ್ ವರ್ಷನ್ ಐಗೊ ಮಾದರಿಯು ಹೆಚ್ಚಿನ ವೈಶಿಷ್ಟ್ಯಗಳನ್ನು ಪಡೆದುಕೊಂಡಿರುತ್ತದೆ. ಸದ್ಯ ಬಂದಿರುವ ಮಾಹಿತಿ ಪ್ರಕಾರ ಇದೇ ತಳಹದಿಯನ್ನು ಬಳಸಿಕೊಂಡು ಭಾರತೀಯ ಮಾರುಕಟ್ಟೆಗೆ ತಕ್ಕಂತೆ ಗ್ರಾಹಕರಿಗೆ ಕೈಗೆಟುಕುವ ದರಗಳಲ್ಲಿ ಟೊಯೊಟಾ-ದೈಹಟ್ಸು ಸಣ್ಣ ಮಾದರಿಗಳನ್ನು ಅಭಿವೃದ್ಧಿಪಡಿಸಲಿದೆ.

Toyota Aygo

ಅಂದ ಹಾಗೆ ಟೊಯೊಟಾ ಐಗೊ 1.0 ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 95 ಎನ್‌ಎಂ ಪೀಕ್ ಟಾರ್ಕ್ಯೂನಲ್ಲಿ 68 ಬಿಎಚ್‌ಪಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಫ್ರಂಟ್ ವೀಲ್ ಹ್ಯಾಚ್‌ಬ್ಯಾಕ್ ಕಾರು 5 ಸ್ಪೀಡ್ ಗೇರ್ ಬಾಕ್ಸ್ ಜೊತೆಗೆ ಎಎಂಟಿ ಆಯ್ಕೆಯನ್ನು ಹೊಂದಿರುತ್ತದೆ.

ಇದೇ ಮೊದಲ ಬಾರಿಗೆ ಆಲ್ಟೊ ಕೆ10 ಎಎಂಟಿ ಮಾದರಿಯನ್ನು ಮಾರುತಿ ಬಿಡುಗಡೆಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಟೊಯೊಟಾ ಸಣ್ಣ ಕಾರು ಸಹ ಎಎಂಟಿ ವರ್ಷನ್ ಪಡೆದುಕೊಳ್ಳಲಿದೆಯೇ ಎಂಬುದು ಬಹಳ ಕುತೂಹಲವೆನಿಸಿದೆ. ಇವೆಲ್ಲದಕ್ಕೂ ಮಿಗಿಲಾಗಿ ಸ್ಪರ್ಧಾತ್ಮಕ ಬೆಲೆ ಕಾಯ್ದುಕೊಳ್ಳುವುದು ಅಷ್ಟೇ ಮುಖ್ಯವೆನಿಸುತ್ತದೆ.

More from DriveSpark

Article Published On: Wednesday, November 12, 2014, 14:22 [IST]
English summary
Japanese automobile manufacturer Toyota was recently in news, as it wants to compete in the mass segment. It was reported that they would be aided by Daihatsu to develop an all new small car for the Indian customers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+