ಟೊಯೊಟಾ ಐ-ರೋಡ್ ಕಾನ್ಸೆಪ್ಟ್ ಯುರೋಪ್ ಪ್ರವೇಶ
ಭವಿಷ್ಯದ ಸಂಚಾರ ವಾಹನ ಸೃಷ್ಟಿಸುವುದರಲ್ಲಿ ಸದಾ ಬದ್ಧತೆಯನ್ನು ಪ್ರದರ್ಶಿಸಿರುವ ಜಪಾನ್ ಮೂಲದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ಟೊಯೊಟಾ, ಫ್ರಾನ್ಸ್‌ನಲ್ಲಿ ನಡೆಯುತ್ತಿರುವ 2014 ಪ್ಯಾರಿಸ್ ಮೋಟಾರು ಶೋದಲ್ಲಿ ಹೊಸತಾದ 'ಐ-ರೋಡ್' ಕಾನ್ಸೆಪ್ಟ್ ಕಾರನ್ನು ಅನಾವರಣಗೊಳಿಸಿದೆ.
ವಿಶೇಷವೆಂದರೆ ರಸ್ತೆ ಕಾನೂನು ನಿಯಮಗಳನ್ನು ಅನುಸರಿಸುವಲ್ಲಿ ಟೊಯೊಟಾದ ಈ ಹೊಸ ಎರಡು ಸೀಟುಗಳ ಹಾಗೂ ಮೂರು ಚಕ್ರಗಳ ಐ-ರೋಡ್ ಯಶಸ್ವಿಯಾಗಿದೆ. ಇದು ಪರಿಸರ ಸ್ನೇಹಿ ಜೊತೆಗೆ ನಗರ ಪ್ರದೇಶದಲ್ಲಿ ಕಿಕ್ಕಿರಿದು ತುಂಬಿಕೊಂಡಿರುವ ಟ್ರಾಫಿಕ್ ಸಮಸ್ಯೆಯಿಂದ ಪಾರಾಗಲು ಸಹಕಾರಿಯಾಗಲಿದೆ.

ವೈಯಕ್ತಿಕ ಸಂಚಾರ ವಾಹನ (ಪಿಎವಿ) ಅಡಿಯಲ್ಲಿ ಟೊಯೊಟಾ ಐ-ರೋಡ್ ಕಾಣಿಸಿಕೊಳ್ಳಲಿದೆ. ಇದು ರಸ್ತೆ ಸಾರಿಗೆಗೆ ಹೆಚ್ಚು ಹೊಂದಿಕೊಳ್ಳುಲಿದ್ದು, ಆರಾಮದಾಯಕ ಚಾಲನೆ ಪ್ರದಾನ ಮಾಡಲಿದೆ.

ಝೀರೋ ಎಮಿಷನ್ ಮತ್ತು ಕಡಿಮೆ ಚಾಲನಾ ವೆಚ್ಚಗಳು ಟೊಯೊಟಾ ಐ ರೋಡ್‌ನ ವಿಶಿಷ್ಟತೆಯಾಗಿದೆ. ಇನ್ನು ಇದು ಸಾಂಪ್ರದಾಯಕ ಮೋಟಾರುಸೈಕಲ್‌ಗಳಿಗೆ ಸಮಾನವಾದ ಆಯಾಮಗಳನ್ನು ಪಡೆದುಕೊಂಡಿದೆ.

ಎಲ್ಲ ತರಹದ ಹವಾಮಾನ ರಕ್ಷಣೆಯ ವಿನ್ಯಾಸ ಹೊಂದಿರುವ ಈ ಗ್ರಾಹಕ ಸ್ನೇಹಿ ಟ್ರೈಸೈಕಲ್ ವಾಹನ, ನಿಖರ ಗೋಚರತೆಯನ್ನು ಪ್ರದಾನ ಮಾಡಲಿದೆ.

2,345 ಎಂಎಂ ಉದ್ದ, 1455 ಎಂಎಂ ಎತ್ತರ, 870 ಎಂಎಂ ಅಗಲ ಮತ್ತು 1695 ಎಂಎಂ ವೀಲ್ ಬೇಸ್ ಹೊಂದಿರುವ ಟೊಯೊಟಾ ಐ ರೋಡ್‌ನಲ್ಲಿ ಬಾಗುವಿಕೆಯ ತಂತ್ರಜ್ಞಾನವನ್ನು ಆಳವಡಿಸಲಾಗಿದೆ.

ಸಂಪೂರ್ಣ ವಿದ್ಯುತ್ ಚಾಲಿತವಾಗಿರುವ ಟೊಯೊಟಾ ಐ-ರೋಡ್ 1.9 ಕೆಡಬ್ಲ್ಯು ಎಲೆಕ್ಟ್ರಿಕ್ ಮೋಟಾರ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು 50 ಕೀ.ಮೀ. ಸಂಚಾರ ವ್ಯಾಪ್ತಿ ಹಾಗೂ ಗರಿಷ್ಠ ಗಂಟೆಗೆ 30 ಕೀ.ಮೀ. ವೇಗವನ್ನು ಪಡೆಯಲಿದ್ದು, ನಗರ ಪ್ರದೇಶದ ಚಾಲನೆಗೆ ಸೂಕ್ತವೆನಿಸಲಿದೆ.


Click it and Unblock the Notifications








