ಎಂಜಿನ್ ಪ್ರಾಬ್ಲಂ; ಆಲ್ಟೀಸ್ ಮಾದರಿಗೂ ತಟ್ಟಿದ ರಿಕಾಲ್ ಬಿಸಿ

By Nagaraja

ದೇಶದ ವಾಹನ ಮಾರುಕಟ್ಟೆಯಲ್ಲಿ ಪದೇ ಪದೇ ರಿಕಾಲ್ ವರದಿಗಳನ್ನು ಕೇಳುತ್ತಲೇ ಬಂದಿದೆ. ಇದೀಗ ಎಂಜಿನ್ ಸಮಸ್ಯೆಯ ಹಿನ್ನೆಲೆಯಲ್ಲಿ ಜನಪ್ರಿಯ ಆಲ್ಟೀಸ್ ಮಾದರಿಯನ್ನು ಹಿಂಪಡೆಯಲು ಜಪಾನ್ ಮೂಲದ ಪ್ರಖ್ಯಾತ ಟೊಯೊಟಾ ಸಂಸ್ಥೆಯು ನಿರ್ಧರಿಸಿದೆ.

ಆಲ್ಟೀಸ್ ಸೆಡಾನ್ ಡೀಸೆಲ್ ಮಾದರಿಗಳಲ್ಲಿ ಸಮಸ್ಯೆ ಕಂಡುಬಂದಿರುವುದಾಗಿ ತಿಳಿದು ಬಂದಿದೆ. ಸಂಸ್ಥೆಯ ಪ್ರಕಾರ ಪೆಟ್ರೋಲ್ ಮಾದರಿಗಳಿಗೆ ಯಾವುದೇ ತೊಂದರೆಗಳಿಲ್ಲ.

ಎಂಜಿನ್ ಆಯಿಲ್ ಪ್ರವೇಶಿಸುವ ಏರ್ ಇಂಟೇಕ್ ವ್ಯವಸ್ಥೆಯಲ್ಲಿ ತೊಂದರೆಯಿದೆ ಎಂಬುದನ್ನು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.

toyota corolla altis

ಸರಿ ಸುಮಾರು 5,834 ಡೀಸೆಲ್ ಕರೊಲ್ಲಾ ಆಲ್ಟೀಸ್ ಮಾದರಿಗಳನ್ನು ವಾಪಾಸ್ ಕರೆಯಲಾಗುವುದು. ಪ್ರಸ್ತುತ ತೊಂದರೆಯಿಂದಾಗಿ ಎಂಜಿನ್ ಆಯಿಲ್ ಲೀಕ್ ಆಗುವ ಭೀತಿಯಿದೆ. ಆದರೆ ಇದುವರೆಗೆ ಅಂತಹ ಯಾವುದೇ ಘಟನೆಗಳು ವರದಿಯಾಗಿಲ್ಲ.

ಅಂದರೆ ಸಂಪೂರ್ಣ ಮುಂಜಾಗ್ರತಾ ಕ್ರಮದ ಅಂಗವಾಗಿ ರಿಕಾಲ್ ನೀಡಲಾಗಿದೆ. ನಿಮ್ಮ ಗಾಡಿಯಲ್ಲಿ ಯಾವುದೇ ರೀತಿಯ ಸಮಸ್ಯೆ ಕಂಡುಬಂದಲ್ಲಿ ಸಂಪೂರ್ಣ ಉಚಿತವಾಗಿ ಸರಿಪಡಿಸಿಕೊಡಲಾಗುವುದು.

ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್‌ಗಳಲ್ಲಿ ಲಭ್ಯವಿರುವ ಟೊಯೊಟಾ ಕರೊಲ್ಲಾ ಆಲ್ಟೀಸ್ ಮ್ಯಾನುವಲ್ ಜೊತೆಗೆ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳಲ್ಲೂ ಲಭ್ಯವಿರುತ್ತದೆ. ಇದರ ದೆಹಲಿ ಎಕ್ಸ್ ಶೋ ರೂಂ ಬೆಲೆ 12.40 ಲಕ್ಷ ರು.ಗಳಿಂದ 17.07 ಲಕ್ಷ ರು.ಗಳ ವರೆಗಿದೆ.

2010 ಜೂನ್ ತಿಂಗಳಿಂದ 2011ನೇ ಮೇ ತಿಂಗಳ ಅವಧಿಯ ವರೆಗೆ ನಿರ್ಮಾಣವಾಗಿರುವ 5,834 ವಾಹನಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳಲಾಗುತ್ತಿದೆ.

More from DriveSpark

Article Published On: Monday, December 1, 2014, 9:28 [IST]
English summary
Toyota is now issuing a recall of their Corolla Altis sedan. The issue lies in the Japanese automobiles diesel models, while the petrol model are not affected. The manufacturer claims there is an issue with engine oil entering into the air intake system.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+