ಗುಡ್ ನ್ಯೂಸ್; ಟೊಯೊಟಾ ಕಾಯುವಿಕೆ ಅವಧಿ ಇಳಿಕೆ
ಇತ್ತೀಚೆಗಿನ ಕಾರ್ಮಿಕ ಮುಷ್ಕರದಿಂದ ತತ್ತರಿಸಿ ಹೋಗಿದ್ದ ಟೊಯೊಟಾ ಕಿರ್ಲೊಸ್ಕರ್ ಇಂಡಿಯಾ ಇದೀಗ ಸಹಜ ಸ್ಥಿತಿಗೆ ಮರಳುತ್ತಿದೆ. ಹಾಗಿದ್ದರೂ ವೇತನ ಸಂಬಂಧಿಸಿದ ವಿವಾದವು ಇನ್ನು ಸಂಪೂರ್ಣವಾಗಿಯೂ ಬಗೆಹರಿಯದಿದ್ದರೂ ಕೈಗಾರಿಕಾ ವಿವಾದಗಳ ನ್ಯಾಯಮಂಡಳಿಯ ತೀರ್ಪಿಗೆ ಇತ್ತಂಡಗಳು ತಲೆ ಬಾಗಿದ್ದವು.
ಕರ್ನಾಟಕ ಸರಕಾರ ಸಲಹೆ ಮಾಡಿರುವಂತೆಯೇ ನಾವು ತಿಂಗಳಿಗೆ 3,100 ರು. ವೇತನ ಏರಿಕೆಯ ಪ್ರಸ್ತಾಪ ಮುಂದಿಟ್ಟಿದ್ದೆವು. ಇದಕ್ಕೆ ಕಾರ್ಮಿಕರು ಒಪ್ಪಿಗೆ ಸೂಚಿಸಿದ್ದಲ್ಲಿ ವಿವಾದವು ಸೌಹಾರ್ದಯುತವಾಗಿ ಬಗೆಹರಿಯಲಿದೆ ಎಂದು ಸಂಸ್ಥೆಯ ಉಪ ಮುಖ್ಯಸ್ಥ ಹಾಗೂ ನಿರ್ದೇಶಕರಾಗಿರುವ ಶೇಖರ್ ವಿಶ್ವನಾಥನ್ ತಿಳಿಸಿದ್ದಾರೆ.

ಬೆಂಗಳೂರಿನ ಹೊರವಲಯದಲ್ಲಿರುವ ಬಿಡದಿಯ ಎರಡು ಘಟಕಗಳಲ್ಲಿ ನಡೆದ ಕಾರ್ಮಿಕ ಸಂಘಟನೆಗಳ ಮುಷ್ಕರದಿಂದಾಗಿ ಮಾರ್ಚ್ ಹಾಗೂ ಎಪ್ರಿಲ್ ತಿಂಗಳ ಉತ್ಪಾದನೆಯಲ್ಲಿ ಗಣನೀಯವಾದ ಇಳಿಕೆ ಕಂಡುಬಂದಿತ್ತು. ಅಲ್ಲದೆ ದೈನಂದಿನ ಯುನಿಟ್‌ಗಳ ಉತ್ಪಾದನೆಯು 350ರಿಂದ 300ಕ್ಕೆ ಕುಸಿದಿತ್ತು.
ಇದೀಗ ಎಲ್ಲ 4,200ರಷ್ಟು ಕಾರ್ಮಿಕರು ಕೆಲಸ ಪುನರಾರಂಭಿಸಿರುವುದರಿಂದ ದೈನಂದಿನ ಉತ್ಪನ್ನಗಳ ಸಂಖ್ಯೆ 700ಕ್ಕೆ ಏರಿಕೆಯಾಗಿದ್ದು, ಇದರಿಂದ ಕಾಯುವಿಕೆ ಅವಧಿ ಗಣನೀಯವಾಗಿ ಕುಸಿತ ಕಂಡಿದೆ. ವರದಿಗಳ ಪ್ರಕಾರ ವೇಟಿಂಗ್ ಪಿರೀಡ್‌ನಲ್ಲಿ ಮೂರು ವಾರಗಳಷ್ಟು ಇಳಿಕೆಯಾಗಿದ್ದು, ಸಂಸ್ಥೆಗೆ ಶುಭದಾಯಕವಾಗಿ ಪರಿಣಮಿಸಿದೆ.


Click it and Unblock the Notifications








