ಬೆಂಗಳೂರಿನಲ್ಲಿ ತಲೆಯೆತ್ತಿದ ಟ್ರಯಂಪ್ ಶೋ ರೂಂ

By Nagaraja

ಜಗತ್ತಿನ ಪ್ರಖ್ಯಾತ ಬೈಕ್ ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಟ್ರಯಂಪ್ ಮೋಟಾರುಸೈಕಲ್ಸ್ ಇತ್ತೀಚೆಗಷ್ಟೇ ಭಾರತಕ್ಕೆ ಕಾಲಿಟ್ಟಿತ್ತು. ಬ್ರಿಟನ್ ಮೂಲದ ಈ ಐಕಾನಿಕ್ ಸಂಸ್ಥೆಯು ಇದೀಗ ದೇಶದಲ್ಲಿ ತನ್ನ ಮೊದಲ ಶೋ ರೂಂ ಅನ್ನು ನಮ್ಮ ಬೆಂಗಳೂರಿನಲ್ಲಿ ತೆರೆದುಕೊಂಡಿದೆ.

10 ಮಾದರಿಗಳನ್ನು ಲಾಂಚ್ ಮಾಡಿದ್ದ ಟ್ರಯಂಪ್ ಭಾರತಕ್ಕೆ ಭರ್ಜರಿ ಎಂಟ್ರಿ ಕೊಟ್ಟಿತ್ತು. ಬೆಂಗಳೂರಿನ ಸೈಂಟ್ ಮಾರ್ಕ್ಸ್ ರೋಡ್‌ನಲ್ಲಿ ಸ್ಥಿತಗೊಂಡಿರುವ ಕೀರ್ತಿ ಮೋಟಾರ್ಸ್ ಟ್ರಯಂಪ್ ಮೋಟಾರುಸೈಕಲ್ಸ್ ನೇತೃತ್ವ ವಹಿಸಲಿದೆ.

Triumph Motorcycles

ದೇಶದ ಬೈಕ್ ಉತ್ಸಾಹಿಗಳಿಗೆ ಟ್ರಯಂಪ್ ಬೈಕ್‌ಗಳು ನೂತನ ಅನುಭವ ನೀಡಲಿದೆ ಎಂದು ಟ್ರಯಂಪ್ ಮೋಟಾರ್ ಸೈಕಲ್ಸ್ ಪ್ರತಿಕಾಗೋಷ್ಠಿಯಲ್ಲಿ ತಿಳಿಸಿದೆ. ನಿಮಗೆಲ್ಲರಿಗೂ ತಿಳಿದಿರುವಂತೆಯೇ ಟ್ರಯಂಪ್ ಬೈಕ್‌ಗಳು 5.57 ಲಕ್ಷ ರು.ಗಳಿಂದ (ಎಕ್ಸ್ ಶೋ ರೂಂ) ಟಾಪ್ ಎಂಡ್ 20 ಲಕ್ಷ ರು.ಗಳಷ್ಟು (ಎಕ್ಸ್ ಶೋ ರೂಂ) ದುಬಾರಿಯಾಗಿದೆ.

ಭಾರತದಲ್ಲಿ ಲಭ್ಯವಿರುವ ಟ್ರಯಂಪ್ ಬೈಕ್‌ಗಳು: ಬೊನೆವಿಲ್ಲೆ ಟಿ100, ಸ್ಪೀಡ್ ಟ್ರಿಪಲ್, ಸ್ಟ್ರೀಟ್ ಟ್ರಿಪಲ್, ಟೈಗರ್ 800 ಎಕ್ಸ್‌ಸಿ, ಟೈಗರ್ ಎಕ್ಸ್‌ಪ್ಲೋರರ್, ಥಂಡರ್ ಬರ್ಡ್ ಸ್ಟ್ರೋಮ್ ಮತ್ತು ಡೇಟೋನಾ 675ಆರ್.

More from DriveSpark

Article Published On: Thursday, January 23, 2014, 14:40 [IST]
English summary
About two months after launching their range of 10 models in India, Triumph Motorcycles has opened its first showroom in the country in Bangalore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+