ಭಾರತಕ್ಕೆ ಫೋಕ್ಸ್‌ವ್ಯಾಗನ್‌ನಿಂದ ಕಾಂಪಾಕ್ಟ್ ಸೆಡಾನ್ ಕೊಡುಗೆ
ಜರ್ಮನಿಯ ಮುಂಚೂಣಿಯ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಫೋಕ್ಸ್‌ವ್ಯಾಗನ್, ವಿಶೇಷವಾಗಿಯೂ ಭಾರತಕ್ಕಾಗಿ ನೂತನ ಕಾಂಪಾಕ್ಟ್ ಸೆಡಾನ್ ಕಾರನ್ನು ಅಭಿವೃದ್ಧಿಪಡಿಸುತ್ತಿದೆ. ಹೆಸರಲ್ಲೇ ಸೂಚಿಸಿರುವಂತೆಯೇ ಇದು ನಾಲ್ಕು ಮೀಟರ್ ಪರಿಧಿಯೊಳಗಿರಲಿದ್ದು, ತೆರಿಗೆ ವಿನಾಯಿತಿ ಪಡೆದುಕೊಳ್ಳಲು ನೆರವಾಗಲಿದೆ.
ಆಂತರಿಕವಾಗಿ ಪೊಲೊ ಸ್ಟಫ್ (Polo Stuffe) ಎಂದು ಗುರುತಿಸಿಕೊಂಡಿರುವ ನೂತನ ಕಾಂಪಾಕ್ಟ್ ಸೆಡಾನ್ ಕಾರು ಪೊಲೊ ಪಿಕ್ಯೂ25 ಫ್ಲ್ಯಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಲಿದೆ.

ಈ ಸಂಬಂಧ ಸಂತೋಷದ ಸುದ್ದಿ ಬಿತ್ತರಿಸಿರುವ ಫೋಕ್ಸ್‌ವ್ಯಾಗನ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಕೊಡುಮುಡಿ, ಪೊಲೊ ಸ್ಟಫ್ 2016-17ನೇ ಸಾಲಿನಲ್ಲಿ ಭಾರತ ಮಾರುಕಟ್ಟೆ ಪ್ರವೇಶಿಸಲಿದೆ ಎಂದಿದ್ದಾರೆ.
ಸಹಜವಾಗಿಯೇ ನೂತನ ಪೊಲೊ ಸ್ಟಫ್, ಜನಪ್ರಿಯ ಪೊಲೊ ಹಾಗೂ ವೆಂಟೊ ಮಾದರಿಗಳ ನಡುವೆ ಗುರುತಿಸಿಕೊಳ್ಳಲಿದೆ. ಇಲ್ಲಿ ಫೋಕ್ಸ್‌ವ್ಯಾಗನ್ ಪೊಲೊ ವಿನ್ಯಾಸ ಹೇಗಿರಬಹುದೆಂಬುದು ಕುತೂಹಲಕಾರಿ ಸಂಗತಿಯಾಗಿದೆ.
ಕೇವಲ ಕಾಂಪಾಕ್ಟ್ ಎಸ್‌ಯುವಿ ಮಾತ್ರವಲ್ಲ. ಮುಂದಿನ ಒಂದೆರಡು ವರ್ಷಗಳಲ್ಲಿ ಫೋಕ್ಸ್‌ವ್ಯಾಗನ್ ತನ್ನ ಚೊಚ್ಚಲ ಎಸ್‌ಯುವಿ ಟೈಗನ್ ಪರಿಚಯಿಸುವ ಯೋಜನೆಯನ್ನು ಹೊಂದಿದೆ.
ಅಂದ ಹಾಗೆ ಫೋಕ್ಸ್‌ವ್ಯಾಗನ್ ಆರಂಭದಲ್ಲಿ ಜಾಗತಿಕವಾಗಿ ಪ್ರದರ್ಶನ ಕಂಡಿರುವ ಪೊಲೊ ಫೇಸ್‌ಲಿಫ್ಟ್ ಪರಿಚಯಿಸುವ ಸಾಧ್ಯತೆಯಿದೆ. 2014 ಪೊಲೊದ ಬಳಿಕ ಜುಲೈನಲ್ಲಿ ವೆಂಟೊ ಗಮನಾರ್ಹ ಬದಲಾವಣೆಗೆಳೊಂದಿಗೆ ಆಗಮನವಾಗಲಿದೆ. ಈ ಎಲ್ಲದರ ಮೂಲಕ 2016-17ರ ವೇಳೆಯಾಗುವ ಏಳು ಅತ್ಯಾಕರ್ಷಕ ಮಾದರಿಗಳನ್ನು ಪರಿಚಯಿಸುವ ಯೋಜನೆಯನ್ನು ಫೋಕ್ಸ್‌ವ್ಯಾಗನ್ ಹೊಂದಿದೆ.


Click it and Unblock the Notifications








