ಭಾರತಕ್ಕೆ ಬರಲಿದೆ ಫೋಕ್ಸ್‌ವ್ಯಾಗನ್ ಬಜೆಟ್ ಕಾರು
ಭಾರತೀಯ ಮಾರುಕಟ್ಟೆಗೆ ಹೊಸ ಬಜೆಟ್ ಕಾರು ಪರಿಚಯಿಸುವುದು ಬಹುತೇಕ ಖಚಿತವಾಗಿದೆ. ಈ ಬಗ್ಗೆ ಅಂತಿಮ ನಿರ್ಧಾರವು ಇನ್ನು ಕೆಲವೇ ದಿನಗಳಲ್ಲಿ ಹೊರಬೀಳುವ ಸಾಧ್ಯತೆಯಿತೆ.
ಪ್ರಸ್ತುತ ದೇಶದ ಮಾರುಕಟ್ಟೆಯಲ್ಲಿ ಐದು ಲಕ್ಷ ರು.ಗಳಿಗೂ ಮೇಲಿನ ದರಗಳ ರೇಂಜ್‌ನಗಳಲ್ಲಿ ವಾಹನಗಳನ್ನು ಮಾರಾಟ ಮಾಡುತ್ತಿರುವ ಫೋಕ್ಸ್‌ವ್ಯಾಗನ್ ಬಜೆಟ್ ಕಾರು ಬ್ರಾಂಡ್ ಮೂಲಕ ಇನ್ನಷ್ಟು ಗ್ರಾಹಕರನ್ನು ಸೆಳೆಯುವ ಇರಾದೆಯಲ್ಲಿದೆ.

ಭಾರತದಲ್ಲಿ ಹ್ಯಾಚ್‌ಬ್ಯಾಕ್ ಹಾಗೂ ಸೆಡಾನ್ ವಿಭಾಗಗಳಲ್ಲಿ ಪ್ರೀಮಿಯಂ ವಾಹನಗಳನ್ನು ಫೋಕ್ಸ್‌ವ್ಯಾಗನ್ ಪರಿಚಯಿಸಿದೆ. ಇದೀಗ ಹೆಚ್ಚು ಐದು ಲಕ್ಷ ರು.ಗಳೊಳಗೆ ಹೆಚ್ಚು ವಿಶ್ವಾಸಾರ್ಹ ಮಾದರಿಗಳನ್ನು ಪರಿಚಯಿಸುವ ಯೋಜನೆ ಹೊಂದಿದೆ.
ಫೋಕ್ಸ್‌ವ್ಯಾಗನ್ ಈ ಯೋಜನೆಗೆ ಚೀನಾ ಸಹಭಾಗಿತ್ವ ಹೊಂದಿರುವ ಸಂಸ್ಥೆ ನೆರವಾಗಲಿದೆ. ಇದರಂತೆ ಮುಂಬರುವ ವರ್ಷಗಳಲ್ಲಿ ದೇಶದ ಗ್ರಾಹಕರು ಸಹ ಫೋಕ್ಸ್‌ವ್ಯಾಗನ್ ಬಜೆಟ್ ಕಾರನ್ನು ನಿರೀಕ್ಷಿಸಬಹುದಾಗಿದೆ.
ಈ ನಡುವೆ ಮುಂದಿನ ಎರಡು ವರ್ಷಗಳಲ್ಲಿ ಆರು ನೂತನ ಮಾದರಿಗಳನ್ನು ಪರಿಚಯಿಸುವ ಯೋಜನೆಯನ್ನು ಫೋಕ್ಸ್‌ವ್ಯಾಗನ್ ಹೊಂದಿದೆ. ಇದರಲ್ಲಿ ಪೊಲೊ ಹಾಗೂ ವೆಂಟೊ ಫೇಸ್‌ಲಿಫ್ಟ್, ನೂತನ ಕಾಂಪಾಕ್ಟ್ ಸೆಡಾನ್ ಮತ್ತು ಜೆಟ್ಟಾ, ಬೀಟ್ಲ್, ಪಸ್ಸಾಟ್ ಹಾಗೂ ಟೈಗನ್‌ಗಳಂತಹ ಬಜೆಟ್ ಬ್ರಾಂಡ್‌ಗಳು ಸೇರಿವೆ.


Click it and Unblock the Notifications








