ಬೆಂಗಳೂರಿನಲ್ಲಿ ವೋಲ್ವೋ ಐಷರ್ ಸ್ಕೈಲೈನ್ ಪ್ರೊ ಬಸ್ ಬಿಡುಗಡೆ

Written By:

ವೋಲ್ವೋ ಐಷರ್ ಕಾಮರ್ಷಿಯಲ್ ವೆಹಿಕಲ್ ಲಿಮಿಟೆಡ್ (ವಿಇಸಿವಿ) ಸಂಸ್ಥೆಯು ಬೆಂಗಳೂರಿನಲ್ಲಿ ನೂತನ ಐಷರ್ ಸ್ಕೈಲೈನ್ ಪ್ರೊ ಸಿರೀಸ್ ಬಸ್ಸುಗಳನ್ನು ಬಿಡುಗಡೆಗೊಳಿಸಿದೆ. ನಿಮ್ಮ ಮಾಹಿತಿಗಾಗಿ ವಿಇಸಿವಿನಲ್ಲಿ ವೋಲ್ವೋ ಸಂಸ್ಥೆ ಹಾಗೂ ಐಷರ್ ಮೋಟಾರ್ಸ್ ಸಮಬಲದ ತಲಾ 50ರಷ್ಟು ಜಂಟಿ ಪಾಲುದಾರಿಕೆಯನ್ನು ಹೊಂದಿದೆ.

ಸಂಸ್ಥೆಯ ಪ್ರಕಾರ ಹೊಸ ಬಸ್ಸುಗಳು ಬೆಳೆದು ಬರುತ್ತಿರುವ ಪ್ರೀಮಿಯಂ ಮಾರುಕಟ್ಟೆ ವಿಭಾಗದ ಬೇಡಿಕೆಗಳನ್ನು ಪೂರೈಸಲಿದ್ದು, ಪ್ರಯಾಣಿಕರಿಗೆ ಹೆಚ್ಚು ಸುರಕ್ಷಿತ ಹಾಗೂ ಆರಾಮದಾಯಕ ಪಯಣವನ್ನು ಖಾತ್ರಿಪಡಿಸಲಿದೆ.

Volvo Eicher

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ವೋಲ್ವೋ ಐಷರ್ ಕಾಮರ್ಷಿಯಲ್ ವೆಹಿಕಲ್ ಲಿಮಿಟೆಡ್ ಸಂಸ್ಥೆಯ ಸೇಲ್ಸ್ ಮಾರ್ಕೆಟಿಂಗ್ ಹಿರಿಯ ಉಪಾಧ್ಯಕ್ಷರಾಗಿರುವ ಶ್ಯಾಮ್ ಮಲ್ಲೆರ್, "ಹೊಸ ಪೀಳಿಗೆಯ ಐಷರ್ ಸ್ಕೈಲೈನ್ ಪ್ರೊ ಸಿರೀಸ್ ಬಸ್ಸುಗಳನ್ನು ನಮ್ಮ ಆಧುನಿಕ ವಿನ್ಯಾಸ ತತ್ವಶಾಸ್ತ್ರದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಇದು ಭಾರತದ ಸಾರಿಗೆ ಸಾಮರ್ಥ್ಯವನ್ನು ನಿರಂತರವಾಗಿ ಸುಧಾರಣೆಗೊಳಿಸಲು ನೆರವಾಗಲಿದೆ. ಹಾಗೆಯೇ ಉತ್ಪನ್ನ ಹೆಚ್ಚಳದೊಂದಿಗೆ ಸಾರಿಗೆ ವೆಚ್ಚ ಕಡಿತವಾಗಲಿದೆ" ಎಂದಿದ್ದಾರೆ.

ಒಟ್ಟು ಮೂರು ವೆರಿಯಂಟ್‌ಗಳಲ್ಲಿ ಸ್ಕೈಲೈನ್ ಪ್ರೊ ಸಿರೀಸ್ ಬಸ್ ಲಭ್ಯವಿರಲಿದೆ. ಇದು ಶಾಲಾ, ಸಿಬ್ಬಂದಿ ಹಾಗೂ ಪ್ರವಾಸಿ ಮಾದರಿಗಳನ್ನು ಹೊಂದಿರಲಿದೆ. ಅಲ್ಲದೆ 36ರಿಂದ 60 ಪ್ರಯಾಣಿಕರ ವರೆಗೂ ಆಸನ ವ್ಯವಸ್ಥೆಯನ್ನು ಪಡೆದುಕೊಂಡಿದೆ. ಇನ್ನು ವೋಲ್ವೋ ಐಷರ್‌ನಲ್ಲಿ ಇ-483 ಎಂಜಿನ್ ಬಳಕೆ ಮಾಡಲಾಗಿದ್ದು, ಹೆಚ್ಚಿನ ಇಂಧನ ಕ್ಷಮತೆ ನೀಡಲಿದೆ.

English summary
VE Commercial Vehicles Limited (VECV), the joint venture between the Volvo group and Eicher Motors Limited (Eicher) announced the launch of Eicher Skyline Pro Series of buses in Bengaluru.
Story first published: Thursday, November 13, 2014, 12:34 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark