ವೋಲ್ವೋ ಚೈಲ್ಡ್ ಸೇಫ್ಟಿ ಸೀಟು - ಬಳಕೆ ಸುಲಭ, ಉಪಯೋಗ ಹಲವು

Written By:

ಸಾಮಾನ್ಯವಾಗಿ ನಾಲ್ಕು ವರ್ಷದೊಳಗಿನ ಮಕ್ಕಳ ಸುರಕ್ಷಿತ ಪಯಣಕ್ಕಾಗಿ ಚೈಲ್ಡ್ ಸೇಫ್ಟಿ ಸೀಟುಗಳನ್ನು ಬಳಕೆ ಮಾಡಲಾಗುತ್ತದೆ. ಆದರೆ ಇಂತಹ ಸೀಟುಗಳನ್ನು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೊತ್ತೊಯ್ಯುವುದು ತುಂಬಾನೇ ಕಷ್ಟಕರವಾಗಿದೆ ಎಂಬುದು ಹೆತ್ತವರ ಅಳಲಾಗಿದೆ.

ಇವೆಲ್ಲದಕ್ಕೂ ಪರಿಹಾರವೆಂಬಂತೆ ನೂತನ ತಂತ್ರಾಂಶ ಕಂಡುಹುಡುಕುವುದರಲ್ಲಿ ಸದಾ ಒಂದು ಹೆಜ್ಜೆ ಮುಂದಿರುವ ಜಗತ್ತಿನ ಮುಂಚೂಣಿಯ ವೋಲ್ವೋ ವಾಹನ ತಯಾರಕ ಸಂಸ್ಥೆಯು ನೂತನ ಚೈಲ್ಡ್ ಸೇಫ್ಟಿ ಸೀಟು ಕಾನ್ಸೆಪ್ಟನ್ನು ಅಭಿವೃದ್ಧಿಪಡಿಸಿದೆ. ಸಂಸ್ಥೆಯ ಪ್ರಕಾರ ವೋಲ್ವೋ ಚೈಲ್ಡ್ ಸೇಫ್ಟಿ ಸೀಟು ಗಾಳಿ ತುಂಬಬಹುದಾಗಿದ್ದು, ನಿಮ್ಮ ಅಗತ್ಯಕ್ಕೆ ಅನುಸಾರವಾಗಿ ಬಳಕೆ ಮಾಡಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ.

To Follow DriveSpark On Facebook, Click The Like Button
ವೋಲ್ವೋ ಚೈಲ್ಡ್ ಸೇಫ್ಟಿ ಸೀಟು

ನೂತನ ವೋಲ್ವೋ ಚೈಲ್ಡ್ ಸೇಫ್ಟಿ ಕಾನ್ಸೆಪ್ಟ್ ಸೀಟು, ಕೇವಲ 40 ಸೆಕೆಂಡುಗಳಲ್ಲಿ ಗಾಳಿ ತುಂಬಬಹುದಾಗಿದೆ. ಹಾಗೆಯೇ ನಿಮ್ಮ ಅಗತ್ಯದ ಬಳಿಕ ಅಷ್ಟೇ ವೇಗದಲ್ಲಿ ಗಾಳಿ ಹೊರಬಿಡುವ ಮೂಲಕ ಸೀಟನ್ನು ಮಡಚಿಡಬಹುದಾಗಿದೆ.

ವೋಲ್ವೋ ಚೈಲ್ಡ್ ಸೇಫ್ಟಿ ಸೀಟು

ವೋಲ್ವೋ ಚೈಲ್ಡ್ ಸೇಫ್ಟಿ ಸೀಟು ಕಾನ್ಸೆಫ್ಟ್, ಹಿಂದುಗಡೆ ಮುಖ ಮಾಡಿದ ಸೀಟು ವ್ಯವಸ್ಥೆಯನ್ನು ಹೊಂದಿದೆ. ಇದರಲ್ಲಿ ಗರಿಷ್ಠ ತಂತ್ರಗಾರಿಕೆಯನ್ನು ಬಳಕೆ ಮಾಡಲಾಗಿದೆ.

ವೋಲ್ವೋ ಚೈಲ್ಡ್ ಸೇಫ್ಟಿ ಸೀಟು

ವೋಲ್ವೋ ಚೈಲ್ಡ್ ಸೇಫ್ಟಿ ಸೀಟು ನಿಮ್ಮ ಪಯಣವನ್ನು ಇನ್ನಷ್ಟು ಸುಖಕರವಾಗಿಸಲಿದೆ. ಯಾಕೆಂದರೆ ಇದರ ಹಗುರ ಭಾರದ ಸೀಟನ್ನು ಎಲ್ಲಿಗೆ ಬೇಕಾದರೂ ಸುಲಭವಾಗಿ ಹೊತ್ತೊಯ್ಯಬಹುದಾಗಿದೆ.

ವೋಲ್ವೋ ಚೈಲ್ಡ್ ಸೇಫ್ಟಿ ಸೀಟು

ಹಾಗೆಯೇ ಇದರ ಆಯಾಮವು 45 X 50 X 20 ಸೆಂಟಿಮೀಟರ್ ಆಗಿರುತ್ತದೆ. ಇದರ ಸೀಟು 5 ಕೆ.ಜಿ.ಗಿಂತಲೂ ಕಡಿಮೆ ಭಾರ ಹೊಂದಿದೆ.

ವೋಲ್ವೋ ಚೈಲ್ಡ್ ಸೇಫ್ಟಿ ಸೀಟು

ಇದೀಗ ವೋಲ್ವೋ ಚೈಲ್ಡ್ ಸೇಫ್ಟಿ ಸೀಟಿನ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ. ಹೆಚ್ಚಿನ ಮಾಹಿತಿಗಾಗಿ ವೀಡಿಯೋ ವೀಕ್ಷಿಸಿ...

ವೋಲ್ವೋ ಚೈಲ್ಡ್ ಸೇಫ್ಟಿ ಸೀಟು- ವೀಡಿಯೋ ವೀಕ್ಷಿಸಿ

Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark