ಝೂಮ್ ಜೊತೆ ಅಂಬಾಸಿಡರ್ ಸ್ಮರಿಸಿ 24 ತಾಸಿನ ಪಯಣ ಆನಂದಿಸಿ

By Nagaraja

ಬೆಂಗಳೂರು ತಲಹದಿಯ ಸೆಲ್ಫ್ ಡ್ರೈವಿಂಗ್ ಕಾರು ಬಾಡಿಗೆ ಸಂಸ್ಥೆಯಾಗಿರುವ ಝೂಮ್ ಕಾರ್ ಇಂಡಿಯಾ, ವಿನೂತನ ಶೈಲಿಯ ಅಭಿಯಾನವೊಂದನ್ನು ಹಮ್ಮಿಕೊಂಡಿದ್ದು, ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ನಿಮ್ಮ ಅಂಬಾಸಿಡರ್ ನೆನಪುಗಳನ್ನು ಟ್ವೀಟ್ ಮಾಡುವ (ಸ್ಮರಿಸುವ) ಮೂಲಕ 24 ತಾಸುಗಳಷ್ಟು ಸಮಯ ಅಂಬಾಸಿಡರ್ ಜರ್ನಿ ಅನುಭವ ಪಡೆಯುವ ಅವಕಾಶವಿರುತ್ತದೆ.

ಇದು ಅಂತಿಂಥ ಅಂಬಾಸಿಡರ್ ಕಾರು ಅಲ್ಲ. ಝೂಮ್‌ನಿಂದ ಪ್ರತ್ಯೇಕವಾಗಿ ವಿನ್ಯಾಸಕ್ಕೆ ಒಳಗಾಗಿರುವ ಸೆಕ್ಸಿ ಆಂಡ್ ಹಾಟ್ ಅಂಬಾಸಿಡರ್ ಕಾರಾಗಿರಲಿದೆ. ಹಾಗಿದ್ದರೆ ಇನ್ಯಾಕೆ ತಡ ಝೂಮ್ ಕಾರ್ ಇಂಡಿಯಾ ಟ್ವೀಟರ್ ಪೇಜ್‌ಗೆ ಭೇಟಿ ಕೊಟ್ಟು ನಿಮ್ಮ ಅಂಬಾಸಿಡರ್ ನೆನಪುಗಳನ್ನು ಈಗಲೇ ಟ್ವೀಟ್ ಮಾಡಿರಿ...

ಝೂಮ್ ಪಿಂಪ್ ಅಂಬಾಸಿಡರ್

ದೇಶದ ರಸ್ತೆಗಳ ರಾಜ ಎಂಬ ಪಟ್ಟಕ್ಕೆ ಪಾತ್ರವಾಗಿರುವ ಅಂಬಾಸಿಡರ್, ದಶಕಗಳಷ್ಟು ಕಾಲ ದೇಶದ ರಸ್ತೆಯಲ್ಲಿ ತನ್ನ ಸಾನಿಧ್ಯ ವ್ಯಕ್ತಪಡಿಸಿತ್ತು. ಇದೀಗ ಝೂಮ್ ಕಾರ್ ಇಂಡಿಯಾ ವಿಶಿಷ್ಟ ಅಭಿಯಾನ ಕೈಗೊಂಡಿದೆ.

ಫೋಟೊ ಕೃಪೆ: ಝೂಮ್ ಕಾರ್ ಡಾಟ್ ಇನ್
ನೀವೇನು ಮಾಡಬೇಕು?

ನೀವೇನು ಮಾಡಬೇಕು?

ಟ್ವೀಟರ್‌ನಲ್ಲಿ ನಿಮ್ಮ ಅಂಬಾಸಿಡರ್ ಅನುಭಗಳನ್ನು ಹಂಚಿಕೊಂಡರಾಯಿತು. ಆದರೆ ನಿಮ್ಮ ಸಂದೇಶದ ಕೊನೆಯಲ್ಲಿ @zoomcarindia ಉಲ್ಲೇಖಿಸಲು ಮರೆಯದಿರಿ. ಜತೆಗೆ ಹಳೆಯ ಅಂಬಾಸಿಡರ್ ಚಿತ್ರಗಳನ್ನು ಕೂಡಾಹ ಹಂಚಿಕೊಳ್ಳಬಹುದಾಗಿದೆ. ಇದಕ್ಕೂ ಮೊದಲು ಝೂಮ್ ಕಾರ್ ಇಂಡಿಯಾ ಟ್ವೀಟರ್ ಪೇಜ್ ಅನುಯಾಯಿ ಆಗುವುದು ಅನಿವಾರ್ಯ.

ಫೋಟೊ ಕೃಪೆ: ಝೂಮ್ ಕಾರ್ ಡಾಟ್ ಇನ್

ಝೂಮ್ ಪಿಂಪ್ ಅಂಬಾಸಿಡರ್

ಅಂದ ಹಾಗೆ ಮೂರು ಅತ್ಯುತ್ತಮ ನೆನಪುಗಳನ್ನು ಹಂಚಿದವರನ್ನು ವಿಜೇತರಾಗಿ ಘೋಷಿಸಲಾಗುವುದು. ನೀವು ಅದೃಷ್ಟಶಾಲಿಯಾಗಿದ್ದಲ್ಲಿ ಅತ್ಯಾಧುನಿಕ ಟಚ್ ಪಡೆದ ಅಂಬಾಸಿಡರ್ 24 ತಾಸುಗಳಷ್ಟು ಕಾಲ ಜಾಲಿ ರೈಡ್ ಕೈಗೊಳ್ಳಬಹುದಾಗಿದೆ. ಈ ಮೂಲಕ ನಿಮ್ಮ ಹಳೆಯ ಅಂಬಾಸಿಡರ್ ನೆನಪುಗಳನ್ನು ಮತ್ತೆ ಸ್ಮರಿಸಬಹುದಾಗಿದೆ.

ಫೋಟೊ ಕೃಪೆ: ಝೂಮ್ ಫೇಸ್‌ಬುಕ್ ಪೇಜ್
ವಿಶಿಷ್ಟತೆಗಳೇನು?

ವಿಶಿಷ್ಟತೆಗಳೇನು?

ಅಷ್ಟಕ್ಕೂ ಝೂಮ್ ಅಂಬಾಸಿಡರ್ ಕಾರಿನ ವಿಶಿಷ್ಟತೆಗಳೇನು? ಎಂಬ ಸಂಶಯ ನಿಮ್ಮಲ್ಲಿ ಮೂಡಲಿದೆ. ಇದರಲ್ಲಿ ಸಂಪೂರ್ಣ ಹಸಿರು ಬಣ್ಣ, ಚಿರತೆ ಶೈಲಿಯ ಸೀಟು ಹೋದಿಕೆ, ಬಾಸ್ ಸಿಸ್ಟಂ ಜತೆಗೆ ಇನ್ನಿತರ ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿದೆ.

ಫೋಟೊ ಕೃಪೆ: ಝೂಮ್ ಫೇಸ್‌ಬುಕ್ ಪೇಜ್

ಷರತ್ತುಗಳು

ಷರತ್ತುಗಳು

1. 2014, ಮೇ 10 ಶನಿವಾರ ಮಧ್ಯರಾತ್ರಿ 11.59 ಗಂಟೆಯ ವರೆಗೆ ಮಾತ್ರ ಈ ಟ್ವೀಟ್ ಸ್ಪರ್ಧೆ ನಡೆಯಲಿದೆ.

2. ಝೂಮ್ ತೀರ್ಪುಗಾರರ ಸಂಘ ವಿಜೇತರನ್ನು ಆಯ್ಕೆ ಮಾಡಲಿದೆ.

3. ಟ್ವೀಟ್ ಮಾಡುವುದಕ್ಕಿಂತಲೂ ಮೊದಲು ಝೂಮ್ ಕಾರ್ ಇಂಡಿಯಾ ಟ್ವಿಟರ್ ಪೇಜ್ (@zoomcarindia) ಫಾಲೋ ಮಾಡುವುದು ಅನಿವಾರ್ಯ.

4. ಪಿಕಪ್ ಹಾಗೂ ಡ್ರಾಪ್ ಸೇವೆ ಬೆಂಗಳೂರಿನಿಂದ ಮಾತ್ರ ಲಭ್ಯ.

More from DriveSpark

Article Published On: Friday, May 9, 2014, 17:27 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+