ಜಗತ್ತಿನ ಅತ್ಯಂತ ವೇಗದ ಡೀಸೆಲ್ ಸ್ಪೋರ್ಟ್ಸ್ ಕಾರು
ಬ್ರಿಟನ್‌ನ ಸ್ಪೋರ್ಟ್ಸ್ ಕಾರು ಬ್ರಾಂಡ್ ಆಗಿರುವ ಟ್ರೈಡೆಂಟ್, ಜಗತ್ತಿನ ಅತ್ಯಂತ ವೇಗದ ಹಾಗೂ ದಕ್ಷ ಡೀಸೆಲ್ ಸ್ಪೋರ್ಟ್ಸ್ ಕಾರನ್ನು ಅನಾವರಣಗೊಳಿಸಿದೆ. ಜಾಗತಿಕವಾಗಿ ಲಭ್ಯವಾಗಲಿರುವ ಈ ಕಾರಿನ ದರ 96000 ಪೌಂಡುಗಳಾಗಿವೆ.
ಒಟ್ಟು ಎರಡು ವಾಹನಗಳನ್ನು ಟ್ರೈಡೆಂಟ್ ಲಾಂಚ್ ಮಾಡಿವೆ. ಇದರಲ್ಲಿ ಮೊದಲನೆಯದ್ದು ಐಸೆನಿ ಮ್ಯಾಗ್ನಾ ಫಾಸ್ಟ್‌ಬ್ಯಾಕ್ ಹಾಗೂ ಎರಡನೇಯದ್ದು ಐಸೆನಿ ವೆಂಚ್ಯೂರರ್ ಎಸ್ಟೇಟ್ ಆಗಿದೆ. ಈ ಕಾರುಗಳು ಸಂಪೂರ್ಣ ಭರ್ತಿ ಮಾಡಿದ ಟ್ಯಾಂಕ್‌ನಲ್ಲಿ 3218 ಕೀ.ಮೀ. ರೇಂಜ್ ವರೆಗೂ ಚಲಿಸಲಿದೆ. ಇದು ಖನಿಜ ಅಥವಾ ಜೈವಿಕ ಡೀಸೆಲ್‌ನಲ್ಲಿ ಓಡಾಡುವ ಸಾಮರ್ಥ್ಯ ಹೊಂದಿದೆ.

ಅತ್ಯಂತ ಶಕ್ತಿಶಾಲಿ ಕಾರಾಗಿರುವ ಐಸೆನಿ, ಗಂಟೆಗೆ ಗರಿಷ್ಠ 306 ಕೀ.ಮೀ. ವೇಗದಲ್ಲಿ ಚಲಿಸಲಿದೆ. ಈ ಮೂಲಕ ಜಗತ್ತಿನ ಅತ್ಯಂತ ವೇಗದ ಡೀಸೆಲ್ ಕಾರೆನಿಸಿಕೊಳ್ಳಲಿದೆ. ಇದು ವಿ8 6.6 ಲೀಟರ್ ಟರ್ಬೊಡೀಸೆಲ್ ಎಂಜಿನ್ ಪಡೆದುಕೊಂಡಿದೆ. ಅಂದರೆ 395 ಅಶ್ವಶಕ್ತಿ (948 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಹಾಗೆಯೇ ಕೇವಲ 3.7 ಸೆಕೆಂಡುಗಳಲ್ಲಿ ಗಂಟೆಗೆ 0-96 ಕೀ.ಮೀ. ವೇಗವರ್ಧಿಸಲಿದೆ.
ಟ್ರೈಡೆಂಟ್ ಸ್ಥಾಪಕರೇ ಆಗಿರುವ ಫಿಲ್ ಬೇವನ್ ವಿನ್ಯಾಸ ಸ್ಪರ್ಶ ನೀಡಿದ್ದಾರೆ. ಅವರ ಪ್ರಕಾರ ವೇಗತೆ, ನಿರ್ವಹಣೆ ಜತೆಗೆ ಇಂಧನ ದಕ್ಷತೆ ಟ್ರೈಡೆಂಟ್ ವಿಶೇಷತೆಯಾಗಿರಲಿದೆ. ಹಾಗೆಯೇ ತನ್ನದೇ ಆದ ವಿಶಿಷ್ಟತೆ ಕಾಪಾಡಿಕೊಳ್ಳಲಿದೆ.


Click it and Unblock the Notifications








