ಮಹೀಂದ್ರ ಕಾರು ಖರೀದಿಸಲು ಇದೇ ಸಕಾಲ!
ನೀವು ಹೊಚ್ಚ ಹೊಸ ಮಹೀಂದ್ರ ಕಾರು ಖರೀದಿ ಮಾಡುವ ಯೋಜನೆಯಲ್ಲಿದ್ದೀರಾ? ನಿಮ್ಮ ಲೆಕ್ಕ ಹಾಕಿರುವ ಬಜೆಟ್ ಕಡಿಮೆಯಾಯಿತೇ? ಚಿಂತೆ ಬೇಡ, ಈ ವರ್ಷಾಂತ್ಯದ ವೇಳೆಯಲ್ಲಿ ದೇಶದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಗಳಲ್ಲಿ ಒಂದಾಗಿರುವ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ಭಾರಿ ಡಿಸ್ಕೌಟ್‌ಗಳನ್ನು ನೀಡುತ್ತಿದೆ.
ಹೌದು, ಮಹೀಂದ್ರ ಡಿಸೆಂಬರ್ ಆಫರುಗಳನ್ನು ಈಗಾಗಲೇ ಘೋಷಣೆ ಮಾಡಲಾಗಿದ್ದು, 28ರ ವರೆಗೆ ಚಾಲ್ತಿಯಲ್ಲಿದೆ. ಈ ಅವಧಿಯಲ್ಲಿ ಮಹೀಂದ್ರ ಕಾರುಗಳನ್ನು ಖರೀದಿಸುವ ಗ್ರಾಹಕರು ಇದರ ಗರಿಷ್ಠ ಪ್ರಯೋಜನ ಪಡೆಯಬಹುದಾಗಿದೆ.

ಎಕ್ಸ್‌ಚೇಂಜ್ ಬೋನಸ್, ಕಾರ್ಪೋರೇಟ್ ಬೋನಸ್ ಮುಂತಾದ ರಿಯಾಯಿತಿಗಳು ಇದರಲ್ಲಿ ಅನ್ವಯವಾಗಲಿದ್ದು, ನಗರದಿಂದ ನಗರಕ್ಕೆ ವಿಭಿನ್ನವಾಗಿರಲಿದೆ.
ಮಹೀಂದ್ರ ಕ್ವಾಂಟೊ, ಎಕ್ಸ್‌ಯುವಿ500, ಕ್ಸೈಲೋ, ರೆಕ್ಸ್ಟಾನ್, ವೆರಿಟೊ ಸೆಡಾನ್ ಮತ್ತು ವೆರಿಟೊ ವೈಬ್ ಹ್ಯಾಚ್‌ಬ್ಯಾಕ್ ಮಾದರಿಗಳಿಗೆ ಆಫರ್ ಲಭ್ಯವಾಗಲಿದೆ.
ಈ ಪೈಕಿ ಎಕ್ಸ್‌ಯುವಿ500 ಖರೀದಿ ವೇಳೆ ರು. 65,000 ವರೆಗೆ ಡಿಸ್ಕೌಂಟ್ ನೀಡಲಾಗುತ್ತಿದ್ದು, ಜನಪ್ರಿಯ ಕ್ಸೈಲೋ ಖರೀದಿ ವೇಳೆ ರು. 83,000 ವರೆಗೆ ರಿಯಾಯಿತಿ ನಿಮ್ಮದಾಗಿಸಬಹುದಾಗಿದೆ.

ಅದೇ ರೀತಿ ಕ್ವಾಂಟೊ ಖರೀದಿಯಲ್ಲಿ ರು. 75,000, ಬೊಲೆರೊದಲ್ಲಿ ರು. 60,000 ರು. ಹಾಗೂ ದುಬಾರಿ ರೆಕ್ಸ್ಟಾನ್ ಖರೀದಿಯಲ್ಲಿ ರು. 1.5 ಲಕ್ಷ ರು.ಗಳ ವರೆಗಿನ ಪ್ರಯೋಜನ ಪಡೆಯಬಹುದಾಗಿದೆ. ಇನ್ನುಳಿದಂತೆ ವೆರಿಟೊ ಹಾಗೂ ವೆರಿಟೊ ವೈಬ್ ಖರೀದಿಯಲ್ಲಿ ರು. 60,000 ವರೆಗೆ ಉಳಿತಾಯ ಮಾಡಬಹುದಾಗಿದೆ.
ಆದರೆ ಈ ಆಫರ್ ಮೇಳದಿಂದ ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಹೊಸ ಪೀಳಿಗೆಯ ಮಹೀಂದ್ರ ಸ್ಕಾರ್ಪಿಯೊ ಮಾದರಿಯನ್ನು ಹೊರತುಪಡಿಸಲಾಗಿದೆ.


Click it and Unblock the Notifications








