ದ.ಕೊರಿಯಾದಲ್ಲಿ ಭೀಕರ ರಸ್ತೆ ಅಪಘಾತ; 100 ವಾಹನಗಳು ಢಿಕ್ಕಿ

By Nagaraja

ಭಾರಿ ಹಿಮಪಾತದ ಪರಿಣಾಮ ದಕ್ಷಿಣ ಕೊರಿಯಾದಲ್ಲಿ ಸಂಭವಿಸಿರುವ ವಾಹನ ಅಪಘಾತದಲ್ಲಿ 100 ವಾಹನಗಳು ಪರಸ್ಪರ ಢಿಕ್ಕಿಯಾಗಿರುವುದಾಗಿ ಬಲ್ಲ ಮೂಲಗಳು ತಿಳಿಸಿವೆ.

ದಕ್ಷಿಣ ಕೊರಿಯಾದ ಇಂಚಿಯಾನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದತ್ತ ಹಾದು ಹೋಗುವ ಸೇತುವೆಯೊಂದರಲ್ಲಿ ಈ ಭೀಕರ ಘಟನೆ ವರದಿಯಾಗಿದೆ.

car crash

ಮುಂಜಾವಿನಲ್ಲಿ ಭಾರಿ ಮಂಜಿನಿಂದ ಕೂಡಿದ ವಾತಾವರಣ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಅಪಘಾತ ಸಂಭವಿಸಿರುವುದಾಗಿ ಪ್ರಾಥಮಿಕ ವರದಿಗಳು ತಿಳಿಸಿವೆ. ಘಟನೆಯಲ್ಲಿ ಇಬ್ಬರು ಸಾವಿಗೀಡಾಗಿದ್ದು, 60 ಮಂದಿ ಗಾಯಗೊಂಡಿದ್ದಾರೆ.

ವರದಿಗಳ ಪ್ರಕಾರ ಬುಧವಾರ ಬೆಳಗ್ಗೆ ಭಾರಿ ಹಿಮಪಾತವಾಗಿತ್ತು. ಇದರಿಂದ ಚಾಲಕರಿಗೆ ಮುಂದುಗಡೆ ಚಲಿಸುವ ವಾಹನಗಳನ್ನು ಗುರುತಿಸಿಕೊಳ್ಳುವುದೇ ಕಷ್ಟಕರವಾಗಿತ್ತು ಎಂದಿದೆ.

ಅಷ್ಟೇ ಯಾಕೆ ಸಿಯೋಲ್ ವಿಮಾನ ನಿಲ್ದಾಣದಿಂದ 18 ಆಗಮನ ಹಾಗೂ ಏಳು ನಿರ್ಗಮನ ವಿಮಾನ ಹಾರಾಟವನ್ನು ರದ್ದುಗೊಳಿಸಲಾಗಿತ್ತು.

More from DriveSpark

Article Published On: Thursday, February 12, 2015, 14:11 [IST]
English summary
South Korea witnessed one of the most horrible car crashes recorded. On a foggy day, 100 cars ended up crashing which killed 2 people and left another 68 injured.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+