ನಿಸ್ಸಾನ್ ಶಕ್ತಿಶಾಲಿ ಜಿಟಿಆರ್ ಟ್ರ್ಯಾಕ್ ಎಡಿಷನ್ ಅನಾವರಣ

By Nagaraja

ಜರ್ಮನಿಯ ಫ್ರಾಂಕ್‌ಫರ್ಟ್ ಅಂತರಾಷ್ಟ್ರೀಯ ಮೋಟಾರು ಶೋದಲ್ಲಿ ಜಪಾನ್ ಮೂಲದ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯಾಗಿರುವ ನಿಸ್ಸಾನ್, ಶಕ್ತಿಶಾಲಿ ಜಿಟಿಆರ್ ಟ್ರ್ಯಾಕ್ ಎಡಿಷನ್ ಅನಾವರಣಗೊಳಿಸಿದೆ.

ಈ ಪವರ್ ಫುಲ್ ಕಾರನ್ನು ನಿಸ್ಸಾನ್‌ನ ಮೋಟಾರುಸ್ಪೋರ್ಟ್ ಹಾಗೂ ನಿರ್ವಹಣಾ ವಿಭಾಗವಾಗಿರುವ 'ನಿಸ್ಮೊ' (Nissan Motorsport International Limited) ವಿನ್ಯಾಸಗೊಳಿಸಿದೆ. ಪ್ರಸ್ತುತ ನಿಸ್ಮೊ ವಿಭಾಗವು 1984ನೇ ಇಸವಿಯಲ್ಲಿ ಅಸ್ಥಿತ್ವಕ್ಕೆ ಬಂದಿತ್ತು.

ನಿಸ್ಸಾನ್ ಶಕ್ತಿಶಾಲಿ ಜಿಟಿಆರ್ ಟ್ರ್ಯಾಕ್ ಎಡಿಷನ್ ಅನಾವರಣ

ಸಾಮಾನ್ಯ ಜಿಟಿಆರ್ ಕ್ರೀಡಾ ಕಾರಿಗೆ ಹೋಲಿಸಿದಾಗ ಜಿಟಿಆರ್ ರೇಸ್ ಟ್ರ್ಯಾಕ್ ಆವೃತ್ತಿಯು ಹೆಚ್ಚು ಪರಿಣಾಮಕಾರಿ ಎನಿಸಿಕೊಳ್ಳಲಿದ್ದು, ಹೊರಭಾಗದಲ್ಲಿ ಕಾರ್ಬನ್ ಫೈಬರ್ ಬಳಕೆ ಮಾಡಲಾಗಿದೆ.

ನಿಸ್ಸಾನ್ ಶಕ್ತಿಶಾಲಿ ಜಿಟಿಆರ್ ಟ್ರ್ಯಾಕ್ ಎಡಿಷನ್ ಅನಾವರಣ

ಕಾರಿನೊಳಗೆ ಕೆಂಪು ಹಾಗೂ ಕಪ್ಪು ಮಿಶ್ರಿತ ಬಣ್ಣವನ್ನು ಕಾಣಬಹುದಾಗಿದೆ. ಇಲ್ಲೂ ಕಾರ್ಬನ್ ಫೈಬರ್ ಬಳಕೆಗೆ ಹೆಚ್ಚಿನ ಆದ್ಯತೆ ಕೊಡಲಾಗಿದೆ. ಅಂತೆಯೇ ಸೀಟು, ಸ್ಟೀರಿಂಗ್ ವೀಲ್ ಹಾಗೂ ಗೇರ್ ಸೆಲೆಕ್ಟರ್ ಗೆ ಲೆಥರ್ ಸ್ಪರ್ಶವನ್ನು ನೀಡಲಾಗಿದೆ.

ನಿಸ್ಸಾನ್ ಶಕ್ತಿಶಾಲಿ ಜಿಟಿಆರ್ ಟ್ರ್ಯಾಕ್ ಎಡಿಷನ್ ಅನಾವರಣ

ಪ್ರಸ್ತುತ ನಿಸ್ಸಾನ್ ಜಿಟಿಆರ್ ಟ್ರ್ಯಾಕ್ ಎಡಿಷನ್ 3.8 ಲೀಟರ್ ಟ್ವಿನ್ ಟರ್ಬೊ ವಿ6 ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 545 ಅಶ್ವಶಕ್ತಿ (627 ಎನ್‌ಎಂ ತಿರುಗುಬಲ) ಉತ್ಪಾದಿಸಲಿದೆ. ಅಲ್ಲದೆ ಆರು ಸ್ಪೀಡ್ ಡ್ಯುಯಲ್ ಕ್ಲಚ್ ಗೇರ್ ಬಾಕ್ಸ್ ಸಹ ಇರಲಿದೆ.

ನಿಸ್ಸಾನ್ ಶಕ್ತಿಶಾಲಿ ಜಿಟಿಆರ್ ಟ್ರ್ಯಾಕ್ ಎಡಿಷನ್ ಅನಾವರಣ

ನಿಸ್ಸಾನ್ ಬ್ರಾಂಡ್ ಅಂಬಾಸಿಡರ್ ಆಗಿರುವ ಭೂಮಿಯ ಅತಿ ವೇಗದ ಓಟಗಾರ ಉಸೈನ್ ಬೋಲ್ಟ್ ಕೂಡಾ 2016 ನಿಸ್ಸಾನ್ ಜಿಟಿಆರ್ ಚಿತ್ರಗಳನ್ನು ವಾಹನ ಪ್ರೇಮಿಗಳ ಜೊತೆ ಹಂಚಿಕೊಂಡಿರುವುದು ವಿಶೇಷ.


Article Published On: Friday, September 18, 2015, 12:32 [IST]
English summary
2016 Nissan GT-R Track Edition at IAA2015
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+