2016 ರೇಂಜ್ ರೋವರ್ ಇವೋಕ್ ಬುಕ್ಕಿಂಗ್ ಪ್ರಾರಂಭ
ದೇಶದ ಅತಿ ದೊಡ್ಡ ವಾಹನ ಸಂಸ್ಥೆ ಟಾಟಾ ಮೋಟಾರ್ಸ್ ಅಧೀನತೆಯಲ್ಲಿರುವ 2016 ರೇಂಜ್ ರೋವರ್ ಇವೋಕ್ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ವಾಹನ ವಲಯದ ನಿಕಟ ಮೂಲಗಳ ಪ್ರಕಾರ ಈ ಬಹುನಿರೀಕ್ಷಿತ ಕಾರು ನವೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಇದರಂತೆ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
Also Read: ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ಐಷಾರಾಮಿ ಎಸ್‌ಯುವಿ ಎಂಟ್ರಿ ಮುಂದಕ್ಕೆ ಓದಿ
ರೇಂಜ್ ರೋವರ್ ಪರಿಷ್ಕೃತ ಇವೋಕ್ ಮಾದರಿಯು 2.2 ಲೀಟರ್ ಡೀಸೆಲ್ ಎಂಜನ್ ನಿಂದ ನಿಯಂತ್ರಿಸ್ಪಡಲಿದೆ. ಮುಂದಿನ ದಿನಗಳಲ್ಲಿ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಕೊಡಲಾಗುವುದು.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿರುವುದಕ್ಕೆ ತಕ್ಕುದಾದ ವೈಶಿಷ್ಟ್ಯಗಳನ್ನು 2016 ರೇಂಜ್ ರೋವರ್ ಇವೋಕ್ ಪ್ರೀಮಿಯಂ ಕ್ರೀಡಾ ಬಳಕೆಯ ವಾಹನವು ಗಿಟ್ಟಿಸಿಕೊಳ್ಳಲಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾ ಅಧ್ಯಕ್ಷ ರೋಹಿತ್ ಸುರಿ, ಜಾಗತಿಕ ಮಟ್ಟದಲ್ಲಿ ನೂತನ ಕಾರಿಗೆ ಅತ್ಯುತ್ತಮ ಪ್ರತಿಕ್ರಿಯೆ ದೊರಕಿದ್ದು, ಭಾರತದಲ್ಲೂ ಇದಕ್ಕೆ ಸಮಾನವಾದ ಬೆಂಬಲ ದೊರಕಲಿದೆ ಎಂದು ನಂಬಿಕೆ ವ್ಯಕ್ತಪಡಿಸಿದ್ದಾರೆ.

ಅಂದ ಹಾಗೆ ಇದು 2015ನೇ ಸಾಲಿನಲ್ಲಿ ಲ್ಯಾಂಡ್ ರೋವರ್ ಬಿಡುಗಡೆ ಮಾಡಲಿರುವ ಎರಡನೇ ಉತ್ಪನ್ನವಾಗಲಿದೆ. ಇದಕ್ಕೂ ಮೊದಲು ಕಳೆದ ತಿಂಗಳಷ್ಟೇ ಹೊಸ ಡಿಸ್ಕವರಿ ಸ್ಪೋರ್ಟ್ ಎಸ್‌ಯುವಿ ಕಾರನ್ನು ದೇಶಕ್ಕೆ ಪರಿಚಯಿಸಲಾಗಿತ್ತು.





Click it and Unblock the Notifications








