ಭಾರತದ ಕಂಪು ವಿಶ್ವಕ್ಕೆ ಪರಿಚಯ: ಹಿಮಾಲಯವನ್ನು ನೆನಪಿಸುವ ಕಾರು ಬಿಡುಗಡೆ: 12 ಮಾತ್ರ ಮಾರಾಟಕ್ಕೆ!
ಭಾರತಕ್ಕಾಗಿ ವಿಶೇಷವಾಗಿ ರಚಿಸಲಾದ ಲಿಮಿಟೆಡ್ ಎಡಿಷನ್ ರೇಂಜ್ ರೋವರ್ SV ಮಸಾರಾ ಎಡಿಷನ್ ಭಾರತದಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಈ ಅಸಾಮಾನ್ಯ ಕಾರು ವಿಶ್ವಾದ್ಯಂತ ಕೇವಲ 12 ಕಾರುಗಳಿಗೆ ಸೀಮಿತವಾಗಿದೆ, ಇದು ನಿಜವಾದ ಸಂಗ್ರಾಹಕರ ಕಾರಾಗಿದ್ದು, ರೇಂಜ್ ರೋವರ್ SV ಮಸಾರ ಆವೃತ್ತಿಯ ಬೆಲೆಯು 4.99 ಕೋಟಿ (ಎಕ್ಸ್ ಶೋ ರೂಂ) ಇದೆ. ಮಸಾರಾ ಎಂಬ ಹೆಸರು ಸಂಸ್ಕೃತದ ಮೂಲವನ್ನು ಹೊಂದಿದೆ, ಇದು ಭಾರತೀಯ ಸಂಸ್ಕೃತಿಯೊಂದಿಗಿನ ಸಂಪರ್ಕವನ್ನು ಪ್ರತಿಬಿಂಬಿಸುತ್ತದೆ ಎಂದು ಕಂಪನಿ ತಿಳಿಸಿದೆ.
ರೇಂಜ್ ರೋವರ್‌ನ SV ಕಾರನ್ನು ಹಿಮಾಲಯದಲ್ಲಿ ಕಂಡುಬರುವ ವಿಶಿಷ್ಟ ನೀಲಮಣಿಗಳು ಮತ್ತು ನೀಲಿ ಪರ್ವತ ಪ್ರದೇಶದ ಸ್ಫೂರ್ತಿಯೊಂದಿಗೆ ನೀಲಿ ಬಾಹ್ಯ ಬಣ್ಣ ಸೇರಿದಂತೆ ವಿನ್ಯಾಸ ಅಂಶಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ ಡಿಸೈನ್ ಮಾಡಿದ್ಧಾರೆ. ಭವ್ಯವಾದ ನೀಲಿ ಹೊರಭಾಗವು ಸಿಲ್ವರ್ ಕ್ರೋಮ್‌ನ ಕಸ್ಟಮ್ ಫಿನಿಶ್ ಪ್ಯಾಕ್ ಮತ್ತು ಕೊರಿಂಥಿಯನ್ ಕಂಚಿನ ಬಣ್ಣದಲ್ಲಿ ಡಿಸೈನ್ ಮಾಡಿದ್ದಾರೆ.

ರೇಂಜ್ ರೋವರ್ SV ಮಸಾರಾ ಆವೃತ್ತಿಯ ಒಳಭಾಗವು SV ಬೆಸ್ಪೋಕ್ ಐಷಾರಾಮಿತನವನ್ನು ಹೊಂದಿದೆ. ಇದು ಐಷಾರಾಮಿ ಲಿಬರ್ಟಿ ಬ್ಲೂ ಲೆದರ್ ಅನ್ನು ಹಗುರವಾದ ಪರ್ಲಿನೊ ಲೆದರ್‌ನೊಂದಿಗೆ ಸಂಯೋಜಿಸಿ ಬೆಸ್ಪೋಕ್ ಸ್ಪ್ಲಿಟ್ ಅನ್ನು ಹೊಂದಿದೆ. ಇದು ಶೈನಿಂಗ್ ನೋಬಲ್ ಕ್ರೋಮ್ ಎಕ್ಸೆಂಟ್‌ಗಳು ಮತ್ತು ಬಿಳಿ ಸೆರಾಮಿಕ್‌ನಿಂದ ಒಟ್ಟಿಗೆ ಸಂಯೋಜಿಸಲಾಗಿದೆ.
ಒಳಾಂಗಣದಾದ್ಯಂತ ವ್ಯಾಪಕವಾದ ತಿಳಿ ಕ್ರೀಮ್ ಆಶ್ ಬರ್ ವೆನಿಯರ್ ವಿನ್ಯಾಸವನ್ನು ಹೊಂದಿದೆ. ಮಸಾರಾ ಆವೃತ್ತಿಯ ಕಸ್ಟಮ್ ವಿವರಗಳಲ್ಲಿ ಬೆಸ್ಪೋಕ್ ಪೇಂಟ್, ಅಕ್ಸೆಂಟ್‌ಗಳು, ವೀಲ್‌ಗಳು, ಕಸ್ಟಮೈಸ್ ಗೊಳಿಸಿದ ಸ್ಕ್ಯಾಟರ್ ಕುಶನ್‌ಗಳೊಂದಿಗೆ ವಿಶೇಷ ಸ್ಟಿಚಿಂಗ್ ಸೀಟುಗಳು ಮತ್ತು 'ಮಸಾರಾ ಆವೃತ್ತಿ' ಹಾಗೂ '1 ರಿಂದ 12' ಪದನಾಮದೊಂದಿಗೆ SV ಬೆಸ್ಪೋಕ್ ಬ್ರಾಂಡ್ ಟ್ರೆಡ್ ಪ್ಲೇಟ್‌ಗಳನ್ನು ನೀಡಲಾಗಿದೆ.

ಹೆಚ್ಚುವರಿಯಾಗಿ, SUV ಉದ್ದವಾದ ವೀಲ್‌ಬೇಸ್ ರೇಂಜ್ ರೋವರ್ SV ಮಸಾರಾ ಆವೃತ್ತಿಯ ಹಿಂಭಾಗದಲ್ಲಿ ಅತ್ಯುತ್ತಮ ಸೌಕರ್ಯವನ್ನು ಒದಗಿಸುವ ಸಂಪೂರ್ಣವಾಗಿ ಒರಗಿಕೊಳ್ಳಬಹುದಾದ ಆಸನಗಳೊಂದಿಗೆ ಬರುತ್ತದೆ. ಪವರ್ಡ್ ಕ್ಲಬ್ ಟೇಬಲ್, ನಿಯೋಜಿಸಬಹುದಾದ ಕಪ್‌ಹೋಲ್ಡರ್‌ಗಳು ಮತ್ತು SV ಕೆತ್ತಿದ ಗಾಜಿನ ಸಾಮಾನುಗಳಿಂದ ಪೂರ್ಣಗೊಂಡ ರೆಫ್ರಿಜರೇಟೆಡ್ ಕಂಪಾರ್ಟ್ಮೆಂಟ್ ನೀಡಲಾಗಿದೆ.
JLR ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರಾಜನ್ ಅಂಬಾ ಮಾತನಾಡಿ, "ರೇಂಜ್ ರೋವರ್ ಭಾರತದಲ್ಲಿನ ವಿವೇಚನಾಶೀಲ ಗ್ರಾಹಕರಿಂದ ಅಸಾಧಾರಣ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ಇದಕ್ಕೆ ಅನುಗುಣವಾಗಿ, ಭಾರತದ ಶ್ರೀಮಂತ ಸಂಸ್ಕೃತಿಗೆ ಚಿಂತನಶೀಲ ಗೌರವವಾದ ರೇಂಜ್ ರೋವರ್ SV ಮಸಾರಾ ಆವೃತ್ತಿಯನ್ನು ಪರಿಚಯಿಸಲು ನಾವು ಉತ್ಸುಕರಾಗಿದ್ದೇವೆ.

ಹಿಮಾಲಯದ ಭವ್ಯ ಸೌಂದರ್ಯ ಮತ್ತು ಆ ಪ್ರದೇಶದ ಅಮೂಲ್ಯವಾದ ಅಪರೂಪದ ನೀಲಮಣಿಗಳಿಂದ ಪ್ರೇರಿತರಾದ ಈ ಅಲ್ಟ್ರಾ-ಐಷಾರಾಮಿ ಆವೃತ್ತಿಯು ಕೇವಲ 12 ಕಾರುಗಳಿಗೆ ಸೀಮಿತವಾಗಿದೆ. ಇದು ಭಾರತೀಯ ಅಭಿಜ್ಞರ ವಿಶೇಷತೆ, ಬೆಸ್ಪೋಕ್ ಕರಕುಶಲತೆ ಮತ್ತು ಸಾಟಿಯಿಲ್ಲದ ಐಷಾರಾಮಿಗಳ ಪರಿಷ್ಕೃತ ಅಭಿರುಚಿಯ ಬಗ್ಗೆ ನಮ್ಮ ಆಳವಾದ ತಿಳುವಳಿಕೆಯನ್ನು ಪ್ರದರ್ಶಿಸುತ್ತದೆ.
ಈ ಬಿಡುಗಡೆಯೊಂದಿಗೆ, 'ಅತ್ಯಂತ ಅಪೇಕ್ಷಣೀಯ ಮತ್ತು ವಿಶೇಷ' ವಾಹನಗಳನ್ನು ನೀಡುವ ನಮ್ಮ ಬದ್ಧತೆಯನ್ನು ನಾವು ಮತ್ತಷ್ಟು ಹೆಚ್ಚಿಸುತ್ತೇವೆ. ರೇಂಜ್ ರೋವರ್ SV ಮಸಾರಾ ಆವೃತ್ತಿಯು 4.4 l V8 ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದ್ದು, ಇದು 452 kW ಪವರ್ ಮತ್ತು 750 Nm ಟಾರ್ಕ್ ಹೊರಹಾಕುತ್ತದೆ ಎಂದು ಕಂಪನಿ ತಿಳಿಸಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








