2016 ಟೊಯೊಟಾ ಇನ್ನೋವಾ ಅನಾವರಣ; ಮುಂದಿನ ವರ್ಷ ಭಾರತಕ್ಕೆ

By Nagaraja

ಇಂಡೋನೇಷ್ಯಾದಲ್ಲಿ 2016 ಟೊಯೊಟಾ ಇನ್ನೋವಾ ಬಹು ಬಳಕೆಯ ವಾಹನ (ಎಂಪಿವಿ) ಭರ್ಜರಿ ಅನಾವರಣಗೊಂಡಿದ್ದು, ಮುಂದಿನ ವರ್ಷ ಭಾರತಕ್ಕೆ ಪ್ರವೇಶಿಸುವ ಸಾಧ್ಯತೆಗಳಿವೆ.

Also Read: ಟೊಯೊಟಾ ಇನ್ನೋವಾ ಸೀಮಿತ ಆವೃತ್ತಿ ಬಿಡುಗಡೆ

ಇನ್ನೋವಾ ಮಾದರಿಗೆ ದೇಶದಲ್ಲಿ ಅತಿ ಹೆಚ್ಚಿನ ಬೇಡಿಕೆಯಿದ್ದು, ಇದನ್ನೇ ಮನಗಂಡಿರುವ ಜಪಾನ್ ಮೂಲದ ಈ ದೈತ್ಯ ಸಂಸ್ಥೆಯು ತನ್ನ ಉಪಯುಕ್ತ ವಾಹನಕ್ಕೆ ಹೊಸ ಸ್ಪರ್ಶವನ್ನು ತುಂಬಲಿದೆ.

2016 ಟೊಯೊಟಾ ಇನ್ನೋವಾ ಅನಾವರಣ; ಮುಂದಿನ ವರ್ಷ ಭಾರತಕ್ಕೆ

2016 ಟೊಯೊಟಾ ಇನ್ನೋವಾ, 2800 ಎಂಎಂ ಚಕ್ರಾಂತರ ಹೊಂದಿರಲಿದ್ದು, 4745 ಎಂಎಂ ಉದ್ದ, 1820 ಎಂಎಂ ಅಗಲ ಮತ್ತು 1800 ಎಂಎಂ ಎತ್ತರವನ್ನು ಪಡೆಯಲಿದೆ.

2016 ಟೊಯೊಟಾ ಇನ್ನೋವಾ ಅನಾವರಣ; ಮುಂದಿನ ವರ್ಷ ಭಾರತಕ್ಕೆ

ಮುಂಭಾಗದಲ್ಲಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಜೊತೆ ಡೇಟೈಮ್ ರನ್ನಿಂಗ್ ಹೆಡ್ ಲೈಟ್ ಪ್ರಮುಖ ಆಕರ್ಷಣೆಯಾಗಲಿದೆ. ಇದಲ್ಲದೆ ಬೃಹತ್ತಾದ ಫ್ರಂಟ್ ಗ್ರಿಲ್ ಕಾರಿಗೆ ದಿಟ್ಟ ನೋಟ ಪ್ರದಾನ ಮಾಡಲಿದೆ.

2016 ಟೊಯೊಟಾ ಇನ್ನೋವಾ ಅನಾವರಣ; ಮುಂದಿನ ವರ್ಷ ಭಾರತಕ್ಕೆ

ಇಂಡೋನೇಷ್ಯಾದಲ್ಲಿ ಕಿಂಜಾಗ್ ಎಂಬ ಹೆಸರಿನಲ್ಲಿ ಅರಿಯಲ್ಪಡುವ ಇನ್ನೋವಾದ ಹಿಂದುಗಡೆಯೂ ಒಟ್ಟಾರೆ ವಿನ್ಯಾಸದತ್ತ ಗಮನ ವಹಿಸಲಾಗಿದ್ದು, ಸಮತಲದ ಟೈಲ್ ಲೈಟ್ ಕಂಡುಬರಲಿದೆ.

2016 ಟೊಯೊಟಾ ಇನ್ನೋವಾ ಅನಾವರಣ; ಮುಂದಿನ ವರ್ಷ ಭಾರತಕ್ಕೆ

ಇನ್ನು ಕಾರಿನೊಳಗೆ ಏಳು ಇಂಚುಗಳ ಮಾಹಿತಿ ಮನರಂಜನಾ ಸಿಸ್ಟಂ, ಬ್ಲೂಟೂತ್, ಆಕ್ಸ್, ಎಸ್ ಡಿ ಕಾರ್ಡ್ ಸಪೋರ್ಟ್, ವಾಯ್ಸ್ ಕಮಾಂಡ್ ಗುರುತಿಸುವಿಕೆ ಮುಂತಾದ ಸೌಲಭ್ಯಗಳಿರಲಿದೆ.

2016 ಟೊಯೊಟಾ ಇನ್ನೋವಾ ಅನಾವರಣ; ಮುಂದಿನ ವರ್ಷ ಭಾರತಕ್ಕೆ

2016 ಇನ್ನೋವಾ 2.4 ಲೀಟರ್ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 370 ಎನ್‌ಎಂ ತಿರುಗುಬಲದಲ್ಲಿ 147 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಲ್ಲದೆ ಫೈವ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಜೊತೆ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಆಯ್ಕೆಯೂ ಇರುತ್ತದೆ.

2016 ಟೊಯೊಟಾ ಇನ್ನೋವಾ ಅನಾವರಣ; ಮುಂದಿನ ವರ್ಷ ಭಾರತಕ್ಕೆ

ಭಾರತದಲ್ಲಿ ತನ್ನ ನಿಕಟ ಪ್ರತಿಸ್ಪರ್ಧಿಗಳಾದ ಮಾರುತಿ ಸುಜುಕಿ ಎರ್ಟಿಗಾ ಹಾಗೂ ರೆನೊ ಲೊಡ್ಜಿ ಮಾದರಿಗಳನ್ನು ಮೀರಿ ನಿಂತಿರುವ ಇನ್ನೋವಾ ಮಗದೊಮ್ಮೆ ಮೋಡಿ ಮಾಡುವ ನಿರೀಕ್ಷೆಯಲ್ಲಿದೆ.

ಇವನ್ನೂ ಓದಿ

ಡಿಸಿ ಡಿಸೈನ್ ಇನ್ನೋವಾ ಇನ್ನೋವೇಷನ್ ಮುಂದಕ್ಕೆ ಓದಿ

More from DriveSpark

Article Published On: Wednesday, November 4, 2015, 11:28 [IST]
English summary
2016 Toyota Innova India launch expected next year
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+