ಇನ್ನೋವಾ ಕ್ರೈಸ್ಟಾದಲ್ಲೂ ವಿನ್ಯಾಸ ರಂಗೇರಿಸಿದ ಡಿಸಿ ಡಿಸೈನ್

ಭಾರತೀಯ ತಳಹದಿಯ ಪ್ರತಿಷ್ಠಿತ ವಿನ್ಯಾಸ ಮಾರ್ಪಾಡು ಸಂಸ್ಥೆ ಡಿಸಿ ಡಿಸೈನ್, ಅತಿ ನೂತನ ಇನ್ನೋವಾ ಕ್ರೈಸ್ಟಾದಲ್ಲೂ ವಿನ್ಯಾಸ ಕಹಳೆ ಮೊಳಗಿಸಿದೆ. ಜಪಾನ್ ಮೂಲದ ಟೊಯೊಟಾ ಸಂಸ್ಥೆಯು ಭಾರತಕ್ಕೆ ಪರಿಚಯಿಸಿರುವ ಇನ್ನೋವಾ ಕ್ರೈಸ್ಟಾ ಅತಿ ಹೆಚ್ಚು ಬೇಡಿಕೆಯನ್ನು ಕಾಪಾಡಿಕೊಂಡಿದೆ. ಈಗ ಡಿಸಿ ಡಿಸೈನ್ ವಿನ್ಯಾಸ ರಂಗೇರಿಸುವುದರೊಂದಿಗೆ ಮತ್ತಷ್ಟು ಜನಪ್ರಿಯತೆಗೆ ಪಾತ್ರವಾಗಿದೆ.

ಡಿಸಿ ಡಿಸೈನ್ ಇನ್ನೋವಾ ಕ್ರೈಸ್ಟಾ ಮಾರ್ಪಾಡುಗೊಳಿಸಿದ ಚಿತ್ರಗಳನ್ನು ತನ್ನ ಅಧಿಕೃತ ಪುಟಗಳಲ್ಲಿ ಹಂಚಿಕೊಂಡಿದೆ. ಈ ವಿಶೇಷ ಪ್ಯಾಕೇಜ್ 4.95 ಲಕ್ಷ ರುಪಾಯಿಗಳಿಂದ ಆರಂಭವಾಗಲಿದೆ. ತನ್ಮೂಲಕ ಇನ್ನೋವಾ ಕ್ರೈಸ್ಟಾ ಮತ್ತಷ್ಟು ಪ್ರೀಮಿಯಂ ಎನಿಸಿಕೊಳ್ಳಲಿದೆ.

ಇನ್ನೋವಾ ಕ್ರೈಸ್ಟಾದಲ್ಲೂ ವಿನ್ಯಾಸ ರಂಗೇರಿಸಿದ ಡಿಸಿ ಡಿಸೈನ್

ಪ್ರಸ್ತುತ ಇನ್ನೋವಾ ಕ್ರೈಸ್ಟಾ ಒಳಮೈ ಚಿತ್ರಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಅಂದರೆ ಕಾರಿನ ಒಳಮೈ ವಿನ್ಯಾಸಕ್ಕೆ ಸಂಸ್ಥೆಯು ಹೆಚ್ಚಿನ ಪ್ರಾಮುಖ್ಯತೆ ನೀಡಿರುವುದು ಕಂಡುಬಂದಿದೆ.

ಇನ್ನೋವಾ ಕ್ರೈಸ್ಟಾದಲ್ಲೂ ವಿನ್ಯಾಸ ರಂಗೇರಿಸಿದ ಡಿಸಿ ಡಿಸೈನ್

ಶಾರೂಕ್ ಖಾನ್ ಅವರಂತಹ ತಾರೆಯರ ವೈಯಕ್ತಿಕ ಬಯಕೆಗಳಿಗೆ ವ್ಯಾನಿಟಿ ಬಸ್ಸನ್ನೇ ವಿನ್ಯಾಸಗೊಳಿಸಿರುವ ಡಿಸಿ ಡಿಸೈನ್ ಸಂಸ್ಥೆಗೆ ಇನ್ನೋವಾ ಕಾರನ್ನು ಮಾರ್ಪಾಡುಗೊಳಿಸುವುದು ದೊಡ್ಡ ವಿಷಯವಾಗಿರಲಿಲ್ಲ.

ಇನ್ನೋವಾ ಕ್ರೈಸ್ಟಾದಲ್ಲೂ ವಿನ್ಯಾಸ ರಂಗೇರಿಸಿದ ಡಿಸಿ ಡಿಸೈನ್

ಇನ್ನೋವಾ ಕ್ರೈಸ್ಟಾದಲ್ಲಿ ಎರಡನೇ ಸಾಲಿನಲ್ಲಿ ರೂಫ್ ಮೌಂಟೆಡ್ ಎಸಿ ವೆಂಟ್ಸ್ ಗಳ ಸೌಲಭ್ಯವನ್ನು ಕೊಡಲಾಗಿದೆ. ವಿಶಿಷ್ಟ ಲೆಥರ್ ಹೋದಿಕೆಗಳು, ಕಾಂಟ್ರಾಸ್ಟ್ ಸ್ಟಿಚ್ಚಿಂಗ್, ಎಲ್ ಇಡಿ ಸ್ಕೀನ್, ಕ್ರೋಮ್ ಹಾಗೂ ವುಡನ್ ಸ್ಪರ್ಶವನ್ನು ನೀವಿಲ್ಲಿ ಕಾಣಬಹುದಾಗಿದೆ.

ಇನ್ನೋವಾ ಕ್ರೈಸ್ಟಾದಲ್ಲೂ ವಿನ್ಯಾಸ ರಂಗೇರಿಸಿದ ಡಿಸಿ ಡಿಸೈನ್

ಡೋರ್ ಗಳನ್ನು ಸಹ ವಿಶೇಷವಾಗಿ ಮಾರ್ಪಾಡುಗೊಳಿಸಲಾಗಿದೆ. ಇನ್ನು ಮಂದುಗಡೆ 2 ಡಿನ್ ಸಿಸ್ಟಂ ಸಹ ಇರಲಿದೆ.

ಇನ್ನೋವಾ ಕ್ರೈಸ್ಟಾದಲ್ಲೂ ವಿನ್ಯಾಸ ರಂಗೇರಿಸಿದ ಡಿಸಿ ಡಿಸೈನ್

ಹೈ ಎಂಡ್ ಕಾರುಗಳಿಗೆ ಸಮಾನವಾಗಿ ಇನ್ನೋವಾದಲ್ಲೂ ಗರಿಷ್ಠ ವೈಶಿಷ್ಟ್ಯಗಳಿಗೆ ಆದ್ಯತೆ ಕೊಡಲಾಗಿದೆ. ಇಲ್ಲಿ ಮನರಂಜನೆಯಿಂದ ಹಿಡಿದು, ಆರಾಮ ಹಾಗೂ ಅನುಕೂಲತೆಯನ್ನು ಖಾತ್ರಿಪಡಿಸಲಾಗಿದೆ.

ಇನ್ನೋವಾ ಕ್ರೈಸ್ಟಾದಲ್ಲೂ ವಿನ್ಯಾಸ ರಂಗೇರಿಸಿದ ಡಿಸಿ ಡಿಸೈನ್

ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆಗಳು ಕಂಡುಬರುವುದಿಲ್ಲ. ಇದು 2.4 ಹಾಗೂ 2.8 ಲೀಟರ್ ಡೀಸೆಲ್ ಎಂಜಿನ್ ಗಳಿಂದ ನಿಯಂತ್ರಿಸಲ್ಪಡಲಿದೆ.

ಹಾಗೆಯೇ ಆರು ಸ್ಪೀಡ್ ಆಟೋಮ್ಯಾಟಿಕ್ ಹಾಗೂ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಗಳು ಇರುತ್ತದೆ.

ಇನ್ನೋವಾ ಕ್ರೈಸ್ಟಾದಲ್ಲೂ ವಿನ್ಯಾಸ ರಂಗೇರಿಸಿದ ಡಿಸಿ ಡಿಸೈನ್

ಈ ನಡುವೆ ಇದೀಗಷ್ಟೇ ಸಂಸ್ಥೆಯು 2.7 ಲೀಟರ್ ಡ್ಯುಯಲ್ ವಿವಿಟಿ-ಐ ಪೆಟ್ರೋಲ್ ಆವೃತ್ತಿಯನ್ನು ಬಿಡುಗಡೆಗೊಳಿಸಿತ್ತು. ಇದು ಸಹ ಆರು ಸ್ಪೀಡ್ ಆಟೋಮ್ಯಾಟಿಕ್ ಹಾಗೂ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆದುಕೊಂಡಿದೆ.

ಇನ್ನೋವಾ ಕ್ರೈಸ್ಟಾದಲ್ಲೂ ವಿನ್ಯಾಸ ರಂಗೇರಿಸಿದ ಡಿಸಿ ಡಿಸೈನ್

ಹೊಸ ಇನ್ನೋವಾದಲ್ಲಿ ಗರಿಷ್ಠ ವೈಶಿಷ್ಟ್ಯಗಳನ್ನು ಕೊಡಲಾಗಿದೆ. ಪ್ರಸ್ತುತ ಡಿಸಿ ಡಿಸೈನ್ ಸ್ಪರ್ಶದೊಂದಿಗೆ ಮತ್ತಷ್ಟು ಪ್ರೀಮಿಯಂ ಎನಿಸಿಕೊಂಡಿದೆ.

ಇನ್ನೋವಾ ಕ್ರೈಸ್ಟಾದಲ್ಲೂ ವಿನ್ಯಾಸ ರಂಗೇರಿಸಿದ ಡಿಸಿ ಡಿಸೈನ್

ಈ ಸಂಬಂಧ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ಹಂಚಿಕೊಳ್ಳಿರಿ.

More from DriveSpark

Article Published On: Saturday, August 13, 2016, 12:02 [IST]
English summary
Here Is What Dilip Chhabria Can Do To A Toyota Innova Crysta — Images
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+