ಟೊಯೊಟಾ ಬಿಡುಗಡೆಗೊಳಿಸಿರುವ ಈ ಸ್ಮಾರ್ಟ್‌ಫೋನ್‌ ಅಪ್ಲಿಕೇಶನ್ ಬಗ್ಗೆ ತಿಳಿದುಕೊಳ್ಳಿ

Written By:

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಸಂಸ್ಥೆಯು 'ಟೊಯೊಟಾ ಕನೆಕ್ಟ್ ಇಂಡಿಯಾ' ಎಂಬ ಹೆಸರಿನ ಸ್ಮಾರ್ಟ್‌ಫೋನ್‌ ಅಪ್ಲಿಕೇಶನ್ ಒಂದನ್ನು ಬಿಡುಗಡೆಗೊಳಿಸಿದೆ.

ಟೊಯೊಟಾ ಬಿಡುಗಡೆಗೊಳಿಸಿರುವ ಈ ಸ್ಮಾರ್ಟ್‌ಫೋನ್‌ ಅಪ್ಲಿಕೇಶನ್ ಬಗ್ಗೆ ತಿಳಿದುಕೊಳ್ಳಿ

ಗ್ರಾಹಕರ ಚಲನಶೀಲತೆ ಮತ್ತು ಮಾಲೀಕತ್ವದ ಅಗತ್ಯತೆಗಳನ್ನು ಪೂರೈಸುವ ಹೊಚ್ಚ ಹೊಸ ಟೊಯೊಟಾ ಕನೆಕ್ಟ್ ಇಂಡಿಯಾ ಅಪ್ಲಿಕೇಶನ್ ಒಂದನ್ನು ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಸಂಸ್ಥೆಯು ಅನಾವರಣಗೊಳಿಸಿದೆ.

ಟೊಯೊಟಾ ಬಿಡುಗಡೆಗೊಳಿಸಿರುವ ಈ ಸ್ಮಾರ್ಟ್‌ಫೋನ್‌ ಅಪ್ಲಿಕೇಶನ್ ಬಗ್ಗೆ ತಿಳಿದುಕೊಳ್ಳಿ

ವಾಹನದ ಮಾಲೀಕತ್ವಕ್ಕೆ ಸಂಬಂಧಿಸಿದ ಸೇವೆ, ತುರ್ತು ಸೇವೆ ಮತ್ತು ನೆರವಿನ ಸಂಚರಣೆ ಸೇವೆಗಳನ್ನು ಈ ಟೊಯೊಟಾ ಕನೆಕ್ಟ್ ಇಂಡಿಯಾ ಸ್ಮಾರ್ಟ್‌ಫೋನ್‌ ಅಪ್ಲಿಕೇಶನ್ ತಿಳಿಸಿಕೊಡಲಿದೆ.

ಟೊಯೊಟಾ ಬಿಡುಗಡೆಗೊಳಿಸಿರುವ ಈ ಸ್ಮಾರ್ಟ್‌ಫೋನ್‌ ಅಪ್ಲಿಕೇಶನ್ ಬಗ್ಗೆ ತಿಳಿದುಕೊಳ್ಳಿ

24x7 ಆಪರೇಟರ್ ಸೇವೆಗಳನ್ನು ಒದಗಿಸುವ ಈ ಅಪ್ಲಿಕೇಶನ್ ಆಂಡ್ರಾಯ್ಡ್ ಮತ್ತು ಐಒಎಸ್ ಕಾರ್ಯಾಚರಣಾ ವ್ಯವಸ್ಥೆಗಳಲ್ಲಿ ಲಭ್ಯವಿದೆ.

ಟೊಯೊಟಾ ಬಿಡುಗಡೆಗೊಳಿಸಿರುವ ಈ ಸ್ಮಾರ್ಟ್‌ಫೋನ್‌ ಅಪ್ಲಿಕೇಶನ್ ಬಗ್ಗೆ ತಿಳಿದುಕೊಳ್ಳಿ

ಇದಲ್ಲದೆ, ಟೊಯೊಟಾ ಕನೆಕ್ಟ್ ಇಂಡಿಯಾ ಅಪ್ಲಿಕೇಶನ್ ಒಂದು ಜಿಪಿಎಸ್ ಆಧಾರಿತ ವ್ಯವಸ್ಥೆ ಹೊಂದಿದ್ದು, ಇದರಿಂದಾಗಿ ಆನ್ಲೈನ್ ಮೂಲಕ ಸೇವಾ ನೇಮಕಾತಿ, ಇ-ಪಾವತಿಗಳು ಮತ್ತು ರಸ್ತೆ ಸಹಾಯದಂತಹ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ.

ಟೊಯೊಟಾ ಬಿಡುಗಡೆಗೊಳಿಸಿರುವ ಈ ಸ್ಮಾರ್ಟ್‌ಫೋನ್‌ ಅಪ್ಲಿಕೇಶನ್ ಬಗ್ಗೆ ತಿಳಿದುಕೊಳ್ಳಿ

ಟೊಯೊಟಾ ಕನೆಕ್ಟ್ ಇಂಡಿಯಾ ಅಪ್ಲಿಕೇಶನ್, ಕ್ಲೌಡ್ ಆಧಾರಿತ ಸಂಪರ್ಕ ಸೇವಾ ವೇದಿಕೆ ಒಳಗೊಂಡಿದ್ದು, ಇದಕ್ಕಾಗಿಯೇ ಮೀಸಲಾದ ಕಾಲ್ ಸೆಂಟರ್ ಸಿಬ್ಬಂದಿ ಬಳಕೆದಾರರಿಗೆ ಸಹಾಯ ಮಾಡಲಿದ್ದಾರೆ.

ಟೊಯೊಟಾ ಬಿಡುಗಡೆಗೊಳಿಸಿರುವ ಈ ಸ್ಮಾರ್ಟ್‌ಫೋನ್‌ ಅಪ್ಲಿಕೇಶನ್ ಬಗ್ಗೆ ತಿಳಿದುಕೊಳ್ಳಿ

ಈ ಅಪ್ಲಿಕೇಶನ್‌ನಲ್ಲಿ ಮ್ಯಾಪ್, ವೇಗ ಮಿತಿ ಪ್ರದರ್ಶನ, ಲೇನ್ ಮಾರ್ಗದರ್ಶನ ಮತ್ತು ಲೈವ್ ಟ್ರಾಫಿಕ್ ಅಪ್ಡೇಟ್ ಸೇವೆಯನ್ನು ಒದಗಿಸಲಿದೆ.

ಟೊಯೊಟಾ ಬಿಡುಗಡೆಗೊಳಿಸಿರುವ ಈ ಸ್ಮಾರ್ಟ್‌ಫೋನ್‌ ಅಪ್ಲಿಕೇಶನ್ ಬಗ್ಗೆ ತಿಳಿದುಕೊಳ್ಳಿ

ಪ್ರತಿಯೊಬ್ಬ ಟೊಯೊಟಾ ಗ್ರಾಹಕರಿಗೂ ಟೊಯೊಟಾ ಕನೆಕ್ಟ್ ಇಂಡಿಯಾ ಅಪ್ಲಿಕೇಶನ್ ಲಭ್ಯವಿದ್ದು, ಗ್ರಾಹಕರು ತಮ್ಮ ವಾಹನದ ವಿವರಗಳನ್ನು ನಮೂದಿಸುವ ಮೂಲಕ ಅಪ್ಲಿಕೇಶನ್ ಪ್ರವೇಶ ಪಡೆದುಕೊಳ್ಳಬಹುದಾಗಿದೆ.

ಟೊಯೊಟಾ ಬಿಡುಗಡೆಗೊಳಿಸಿರುವ ಈ ಸ್ಮಾರ್ಟ್‌ಫೋನ್‌ ಅಪ್ಲಿಕೇಶನ್ ಬಗ್ಗೆ ತಿಳಿದುಕೊಳ್ಳಿ

ಕಾರು ತಯಾರಕರು ಸ್ಮಾರ್ಟ್‌ಫೋನ್‌ ಅಪ್ಲಿಕೇಶನ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಗ್ರಾಹಕರ ಅವಶ್ಯಕತೆಗಳನ್ನು ತಂತ್ರಜ್ಞಾನದ ಮೂಲಕ ತಿಳಿದುಕೊಳ್ಳಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ ಎನ್ನಬಹುದು.

English summary
Read in kannada about Toyota Kirloskar Motor has launched the Toyota Connect India, a smartphone application.
Story first published: Wednesday, July 12, 2017, 12:51 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark