ಆಂದ್ರಪ್ರದೇಶದಲ್ಲಿ ಮೊಟ್ಟ ಮೊದಲ 'ಟೊಯೊಟಾ ಡ್ರೈವಿಂಗ್ ಸ್ಕೂಲ್' ಪ್ರಾರಂಭ

Written By:

ಟೊಯೊಟಾ ಕಿರ್ಲೋಸ್ಕರ್ ಮೋಟಾರ್(ಟಿಕೆಎಂ)ಸಂಸ್ಥೆ ಆಂಧ್ರಪ್ರದೇಶದಲ್ಲಿ ತನ್ನ ಮೊದಲ "ಟೊಯೊಟಾ ಡ್ರೈವಿಂಗ್ ಸ್ಕೂಲ್" ವಿಭಾಗವನ್ನು ಉದ್ಘಾಟನೆ ಮಾಡಿದೆ.

'ಸುರಕ್ಷಿತ ಚಾಲಕನೊಂದಿಗೆ ಸುರಕ್ಷಿತ ಕಾರು' ಎಂಬ ಅಡಿಬರಹದೊಂದಿದೆ ಟೊಯೊಟಾ ಸಂಸ್ಥೆ ತನ್ನ ಡ್ರೈವಿಂಗ್ ಶಾಲೆಯನ್ನು ಆಂಧ್ರಪ್ರದೇಶದಲ್ಲಿ ತೆರೆದಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಈ ಸ್ಕೂಲ್ ಆಂದ್ರಪ್ರದೇಶದ ವಿಜಯವಾಡದಲ್ಲಿ ಮೊದಲ ಬಾರಿಗೆ ಆರಂಭಗೊಂಡಿದೆ ಮತ್ತು ದೇಶದ ಏಳನೇಯ ಶಾಖೆಯಾಗಿದೆ.

ಟೊಯೊಟಾ ಸಂಸ್ಥೆಯ ವಿತರಕರಲ್ಲಿ ಒಬ್ಬರಾದ ರಾಧಾ ಮಾಧವ್ ಟೊಯೋಟಾ ಅವರು ಈ ಸಂಸ್ಥೆಯ ಎಲ್ಲಾ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

ಟೊಯೊಟಾ ಡ್ರೈವಿಂಗ್ ಸ್ಕೂಲ್ ಸಂಸ್ಥೆಯ ಬಿಡುಗಡೆಯನ್ನು ಆಂದ್ರಪ್ರದೇಶದ ಮುಖ್ಯ ಅತಿಥಿಗಳಾದ ಸಾರಿಗೆ, ಕೈಮಗ್ಗ ಮತ್ತು ಜವಳಿ ಸಚಿವ ಕಿಂಜರಾಪು ಅಚನ್‌ನಾಯ್ಡು ಮತ್ತು ಉಪ ಸಾರಿಗೆ ಆಯುಕ್ತರಾದ ಶ್ರೀನಿವಾಸ್ ಅವರು ನೆರವೇರಿಸಿದ್ದಾರೆ.

ದೇಶದ ಸುರಕ್ಷತಾ ಸಂಸ್ಕೃತಿಯನ್ನು ಸುಧಾರಿಸಲು ಟೊಯೊಟಾ ಕಿರ್ಲೋಸ್ಕರ್ ಕಂಪನಿಯು ಭಾರತದ ಕೊಚ್ಚಿ, ಲಕ್ನೌ, ಹೈದರಾಬಾದ್, ಚೆನ್ನೈ, ಕೊಲ್ಕತ್ತಾ ಮತ್ತು ಫರಿದಾಬಾದ್ ನಗರಗಳಲ್ಲಿ ಆರಂಭಿಸಿದೆ.

ಈ ಶಾಲೆಯಲ್ಲಿ ತರಬೇತಿ ಪಡೆಯುವ ಪ್ರತಿಯೊಬ್ಬ ವಿದ್ಯಾರ್ಥಿ ಜವಾಬ್ದಾರಿಯುತ ಮತ್ತು ಸುರಕ್ಷಿತ ಚಾಲಕನಾಗುವ ಬಗ್ಗೆ ಪ್ರಾಮುಖ್ಯತೆ ನೀಡಲಾಗುತ್ತದೆ.

ಕಲಿಕೆಯ ಅಂಶಗಳು


ಸಂಚಾರ ನಿರ್ವಹಣೆ, ನಿಯಮಗಳು ಮತ್ತು ಶಿಸ್ತು
ಸುರಕ್ಷಿತ ಮತ್ತು ಬಲ ಚಾಲನೆಯ ಪರಿಕಲ್ಪನೆಗಳು
ಚಾಲಕನ ಸ್ವಭಾವ ಮತ್ತು ಜವಾಬ್ದಾರಿಗಳು
ರಸ್ತೆಯ ಪ್ರಾಯೋಗಿಕ ಚಾಲನೆಯ ಎಲ್ಲಾ ಅಂಶಗಳು
ವಿವಿಧ ರಸ್ತೆ ಮತ್ತು ಹವಾಮಾನ ಪರಿಸ್ಥಿತಿಗಳಲ್ಲಿ ಚಾಲನೆ
ನಿಮ್ಮ ಕಾರನ್ನು ತಿಳಿಯಿರಿ - ಮೂಲಭೂತ ನಿರ್ವಹಣೆ ಮತ್ತು ರಿಪೇರಿ
ತುರ್ತು ನಿರ್ವಹಣೆ
ವ್ಯವಸ್ಥಿತ ಮೌಲ್ಯಮಾಪನ ಮತ್ತು ಪ್ರತಿಕ್ರಿಯೆ

English summary
Read in Kannada about Toyota Kirloskar Motor launches its first driving school in Andhra Pradesh.
Story first published: Monday, July 10, 2017, 13:57 [IST]
Please Wait while comments are loading...

Latest Photos