ಥೈಲ್ಯಾಂಡ್‌ನಲ್ಲಿ ಬಿಡುಗಡೆಗೊಳ್ಳಲಿರುವ ಈ ಯಾರಿಸ್ ಅಟಿವ್ ಕಾರು ಭಾರತಕ್ಕೆ ಬರುತ್ತಾ ?

Written By:

ಜಪಾನಿನ ತಯಾರಕ ಟೊಯೊಟಾ ಸಂಸ್ಥೆಯು ತನ್ನ ಹೊಸ ಯಾರಿಸ್ ಅಟಿವ್ ಸೆಡಾನ್ ಕಾರನ್ನು ಅನಾವರಣಗೊಳಿಸಿದ್ದು, ಆರಂಭದಲ್ಲಿ ಈ ಸೆಡಾನ್ ಕಾರು ಥೈಲ್ಯಾಂಡ್ ಮಾರುಕಟ್ಟೆಯಲ್ಲಿ ಮಾರಲ್ಪಡುತ್ತದೆ.

To Follow DriveSpark On Facebook, Click The Like Button
ಥೈಲ್ಯಾಂಡ್‌ನಲ್ಲಿ ಬಿಡುಗಡೆಗೊಳ್ಳಲಿರುವ ಈ ಯಾರಿಸ್ ಅಟಿವ್ ಕಾರು ಭಾರತಕ್ಕೆ ಬರುತ್ತಾ ?

ಯಾರಿಸ್ ಅಟಿವ್ ಸೆಡಾನ್ ಕಾರು, ಟೊಯೊಟಾ ಸಂಸ್ಥೆಯ ಮತ್ತೊಂದು ಯಶಸ್ವಿ ಕಾರು ವಿವ್ಸ್ ಮಾದರಿಯ ಬಹಳಷ್ಟು ಪ್ರೀಮಿಯಂ ಅಂಶಗಳನ್ನು ಪಡೆದುಕೊಂಡು ಬಿಡುಗಡೆಗೆ ಸಿದ್ದವಾಗಿದ್ದು, ಈ ಹೊಸ ಕಾರು ಹೊಸ ಜನರೇಷನ್ ಟೊಯೊಟಾ ಸೆಡಾನ್ ಕಾರುಗಳಂತೆ ವಿಭಿನ್ನ ರೀತಿಯ ವಿನ್ಯಾಸ ಹೊಂದಿದೆ.

ಥೈಲ್ಯಾಂಡ್‌ನಲ್ಲಿ ಬಿಡುಗಡೆಗೊಳ್ಳಲಿರುವ ಈ ಯಾರಿಸ್ ಅಟಿವ್ ಕಾರು ಭಾರತಕ್ಕೆ ಬರುತ್ತಾ ?

ಹೊಸ ರೀತಿಯ ಟೊಯೋಟಾ ಯಾರಿಸ್ ಅಟಿವ್ ಕಾರು ಅಗಲವಾದ ಗ್ರಿಲ್, ಪ್ರೊಜೆಕ್ಟರ್ ಹೆಡ್ ಲೈಟ್‌ಗಳು, ಹಗಲು ಹೊತ್ತು ಬೆಳಗುವ ಎಲ್‌ಇಡಿ ದೀಪಗಳು ಮತ್ತು ಮಂಜು ದೀಪಗಳು ಒಳಗೊಂಡಿದೆ.

ಥೈಲ್ಯಾಂಡ್‌ನಲ್ಲಿ ಬಿಡುಗಡೆಗೊಳ್ಳಲಿರುವ ಈ ಯಾರಿಸ್ ಅಟಿವ್ ಕಾರು ಭಾರತಕ್ಕೆ ಬರುತ್ತಾ ?

ಕಾರೊಲ್ಲ ಕಾರಿನ ರೀತಿಯ ಹೆಡ್‌ಲೈಟ್‌ಗಳು ಮತ್ತು ಗ್ರಿಲ್‌ಗಳನ್ನು ಈ ಕಾರಿನಲ್ಲಿ ನೋಡಬಹುದಾಗಿದ್ದು, ಹಿಂಭಾಗದಲ್ಲಿ ಎಲ್ಇಡಿ ಅಂಶ, ದೊಡ್ಡದಾದ ದೀಪಗಳು ಮತ್ತು ವಕ್ರ ರೀತಿಯ ಟೈಲ್ ಗೇಟ್ ಕಾಣಬಹುದಾಗಿದೆ.

ಥೈಲ್ಯಾಂಡ್‌ನಲ್ಲಿ ಬಿಡುಗಡೆಗೊಳ್ಳಲಿರುವ ಈ ಯಾರಿಸ್ ಅಟಿವ್ ಕಾರು ಭಾರತಕ್ಕೆ ಬರುತ್ತಾ ?

ಕಾರಿನ ಒಳಭಾಗದಲ್ಲಿ 7 ಇಂಚು ಟಚ್‌ಸ್ಕ್ರೀನ್ ಪರದೆ ವ್ಯವಸ್ಥೆ, ಜೊತೆಗೆ 4.2 ಇಂಚಿನ ಎಮ್ಐಡಿ, ಚರ್ಮದ ಹೊದಿಕೆ ಇರುವಂತಹ ಸ್ಟೀರಿಂಗ್ ಚಕ್ರ, ಗೇರ್ ನಾಬ್ ಮತ್ತು ಆರು ಸ್ಪೀಕರ್ ಹೊಂದಿರುವ ಸಂಗೀತ ವ್ಯವಸ್ಥೆ ಅಳವಡಿಸಲಾಗಿದೆ.

ಥೈಲ್ಯಾಂಡ್‌ನಲ್ಲಿ ಬಿಡುಗಡೆಗೊಳ್ಳಲಿರುವ ಈ ಯಾರಿಸ್ ಅಟಿವ್ ಕಾರು ಭಾರತಕ್ಕೆ ಬರುತ್ತಾ ?

ಯಾರಿಸ್ ಅಟಿವ್ ಕಾರು, 1.2-ಲೀಟರ್ ಪೆಟ್ರೋಲ್ ಎಂಜಿನ್ ಉತ್ಪಾದಿತ 108 ಏನ್‌ಎಂ ತಿರುಗುಬಲದಲ್ಲಿ 86 ಟಾರ್ಕ್ ಶಕ್ತಿ ಉತ್ಪಾದಿಸುತ್ತದೆ. ಈ ಎಂಜಿನ್ ಸಿವಿಟಿ ಗೇರ್ ಬಾಕ್ಸ್ ಪಡೆದುಕೊಂಡಿದೆ. ಸುರಕ್ಷತಾ ಲಕ್ಷಣಗಳನ್ನು ನೋಡುವುದಾದರೆ, ಈ ಕಾರಿನ ಮುಂಭಾಗದಲ್ಲಿ ಎರಡು ಗಾಳಿ ಚೀಲ, ಎಬಿಎಸ್, ಎಳೆತ ನಿಯಂತ್ರಣ, ಸ್ಥಿರತೆ ನಿಯಂತ್ರಣ ಮತ್ತು ಹಿಲ್ ಸ್ಟಾರ್ಟ್ ಸಹಾಯ ಹೊಂದಿರಲಿದೆ.

ಥೈಲ್ಯಾಂಡ್‌ನಲ್ಲಿ ಬಿಡುಗಡೆಗೊಳ್ಳಲಿರುವ ಈ ಯಾರಿಸ್ ಅಟಿವ್ ಕಾರು ಭಾರತಕ್ಕೆ ಬರುತ್ತಾ ?

ಟೊಯೊಟಾ ಸಂಸ್ಥೆಯ ಬಹುನಿರೀಕ್ಷಿತ ಯಾರಿಸ್ ಅಟಿವ್ ಕಾರು ದುಬಾರಿ ಬೆಲೆಯ ವಿವ್ಸ್ ಕಾರಿನ ಕೆಳ ಶ್ರೇಣಿಯಲ್ಲಿ ಅನಾವರಣಗೊಳ್ಳಲಿದೆ ಎನ್ನಲಾಗಿದೆ. ಭಾರತದಲ್ಲಿ ಬಿಡುಗಡೆಗೊಂಡರೆ ಹೋಂಡಾ ಸಿಟಿ, ಮಾರುತಿ ಸುಜುಕಿ ಸಿಯಾಜ್ ಮತ್ತು ನಿಸ್ಸಾನ್ ಸನ್ನಿ ಕಾರುಗಳೊಂದಿಗೆ ಸ್ಪರ್ಧೆ ನೆಡೆಸಲಿದೆ.

English summary
Japanese automaker Toyota has revealed the new Yaris Ativ sedan. Initially, the sedan will be sold in the Thailand market.
Please Wait while comments are loading...

Latest Photos