2016 ಟೊಯೊಟಾ ಇನ್ನೋವಾ ಆಕರ್ಷಕ ಒಳಮೈ ನೋಡಿದ್ರಾ ?
2016 ಟೊಯೊಟಾ ಇನ್ನೋವಾ ಮುಂದಿನ ವರ್ಷ ಭಾರತ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಗಳು ಹೆಚ್ಚಾಗಿದೆ. ಹಾಗಿರುವಾಗ ಎಕ್ಸ್ ಕ್ಲೂಸಿವ್ ಹೊರಮೈ ಚಿತ್ರಗಳನ್ನು ನಾವು ಪ್ರಕಟಿಸಿದ್ದೆವು. ಈಗ ಆಕರ್ಷಕ ಒಳಮೈ ಚಿತ್ರಗಳು ಬಹಿರಂಗವಾಗಿದೆ.
Also Read: ಹೊಸ ಇನ್ನೋವಾ; ಎಕ್ಸ್‌ಕ್ಲೂಸಿವ್ ವಿವರಗಳು ಲೀಕ್ ಮುಂದಕ್ಕೆ ಓದಿ
ಇದೇ ತಿಂಗಳಲ್ಲಿ 2016 ಇನ್ನೋವಾ ಇಂಡೋನೇಷ್ಯಾ ಮಾರುಕಟ್ಟೆಯನ್ನು ತಲುಪಲಿದೆ. ಹೆಚ್ಚಿನ ಬದಲಾವಣೆಗಳಿಲ್ಲದೆ ಬಹುತೇಕ ಇಂಡೋನೇಷ್ಯಾ ಮಾದರಿಯೇ ಭಾರತಕ್ಕೂ ಪ್ರವೇಶವಾಗಲಿದೆ. ಕ್ರೋಮ್ ಫ್ರಂಟ್ ಗ್ರಿಲ್, ಎಲ್‌ಇಡಿ ಪ್ರೊಜೆಕ್ಟರ್ ಲ್ಯಾಂಪ್, ಹಿಂದುಗಡೆ ಸ್ಪಾಯ್ಲರ್ ಮತ್ತು ಇಂಟೇಗ್ರೇಟಡ್ ಎಲ್‌ಇಡಿ ಬ್ರೇಕ್ ಲೈಟ್ಸ್ ಸೌಲಭ್ಯಗಳು ದೊರಕಲಿದೆ.

ಹಳೆಯ ಮಾದರಿಗೆ ಹೋಲಿಸಿದಾಗ ಹೊಸ ಟೊಯೊಟಾ ಇನ್ನೋವಾ ಹೆಚ್ಚು ಪ್ರೀಮಿಯಂ ಸೌಲಭ್ಯಗಳನ್ನು ಪಡೆದುಕೊಳ್ಳಲಿದೆ.

ಕಾರಿನೊಳಗೆ ಎಲ್ಲ ಹೊಸತನದ ಟಚ್ ಸ್ಕ್ರೀನ್ ಮಾಹಿತಿ ಮನರಂಜನಾ ವ್ಯವಸ್ಥೆ, ಕಲರ್ ಸ್ಕ್ರೀನ್ ಡಿಸ್ ಪ್ಲೇ (ಎಂಐಡಿ), ಗ್ಲೋವ್ ಬಾಕ್ಸ್ ಮುಂತಾದ ವೈಶಿಷ್ಟ್ಯಗಳನ್ನು ಕಾಣಬಹುದಾಗಿದೆ.

ನೂತನ ಇನ್ನೋವಾದಲ್ಲಿ 2 ಲೀಟರ್ ಪೆಟ್ರೋಲ್ ಹಾಗೂ 2.4 ಲೀಟರ್ ಡೀಸೆಲ್ ಎಂಜಿನ್ ಗಳು ಇರಲಿದೆ. ಇವೆರಡು ಆರು ಸ್ಪೀಡ್ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪಡೆಯಲಿದೆ.

2016 ಟೊಯೊಟಾ ಇನ್ನೋವಾ ಜಿ, ವಿ ಮತ್ತು ಕ್ಯೂ ಗಳೆಂಬ ಮೂರು ವೆರಿಯಂಟ್ ಗಳಲ್ಲಿ ಲಭ್ಯವಾಗಲಿದೆ.

ಅಂದಾಜು 12 ಲಕ್ಷ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗಲಿರುವ ಹೊಸ ಇನ್ನೋವಾ 2016 ದೆಹಲಿ ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಪ್ರದರ್ಶನ ಕಂಡ ಬಳಿಕ ಮಾರುಕಟ್ಟೆ ಪ್ರವೇಶಿಸಲಿದೆ.

2016 ಟೊಯೊಟಾ ಇನ್ನೋವಾ, 2800 ಎಂಎಂ ಚಕ್ರಾಂತರ ಹೊಂದಿರಲಿದ್ದು, 4745 ಎಂಎಂ ಉದ್ದ, 1820 ಎಂಎಂ ಅಗಲ ಮತ್ತು 1800 ಎಂಎಂ ಎತ್ತರವನ್ನು ಪಡೆಯಲಿದೆ.

ಮುಂಭಾಗದಲ್ಲಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಜೊತೆ ಡೇಟೈಮ್ ರನ್ನಿಂಗ್ ಹೆಡ್ ಲೈಟ್ ಪ್ರಮುಖ ಆಕರ್ಷಣೆಯಾಗಲಿದೆ. ಇದಲ್ಲದೆ ಬೃಹತ್ತಾದ ಫ್ರಂಟ್ ಗ್ರಿಲ್ ಕಾರಿಗೆ ದಿಟ್ಟ ನೋಟ ಪ್ರದಾನ ಮಾಡಲಿದೆ.

ಇನ್ನುಳಿದಂತೆ ಎಲ್‌ಇಡಿ ಹೆಡ್ ಲೈಟ್ ಹಾಗೂ ಲೈಲ್ ಲ್ಯಾಂಪ್, ಕೀಲೆಸ್ ಎಂಟ್ರಿ, ಪುಶ್ ಬಟನ್ ಸ್ಟ್ಯಾರ್ಟ್, ಸ್ಟ್ಯಾಂಡರ್ಡ್ ಚಾಲಕ ಮತ್ತು ಪ್ರಯಾಣಿಕ ಬದಿಯ ಏರ್ ಬ್ಯಾಗ್, ಟಾಪ್ ಎಂಡ್ ನಲ್ಲಿ ಏಳು ಏರ್ ಬ್ಯಾಗ್ ಗಳ ಸೌಲಭ್ಯ, ಸ್ಟೆಬಿಲಿಟಿ ಕಂಟ್ರೋಲ್ ಹಾಗೂ ಹಿಲ್ ಸ್ಟ್ಯಾರ್ಟ್ ಅಸಿಸ್ಟ್ ಸ್ಟ್ಯಾಂಡರ್ಡ್ ವೈಶಿಷ್ಟ್ಯಗಳಾಗಿ ಲಭ್ಯವಾಗಲಿದೆ.

ಭಾರತದಲ್ಲಿ ತನ್ನ ನಿಕಟ ಪ್ರತಿಸ್ಪರ್ಧಿಗಳಾದ ಮಾರುತಿ ಸುಜುಕಿ ಎರ್ಟಿಗಾ ಹಾಗೂ ರೆನೊ ಲೊಡ್ಜಿ ಮಾದರಿಗಳನ್ನು ಮೀರಿ ನಿಂತಿರುವ ಇನ್ನೋವಾ ಮಗದೊಮ್ಮೆ ಮೋಡಿ ಮಾಡುವ ನಿರೀಕ್ಷೆಯಲ್ಲಿದೆ.

2016 ಟೊಯೊಟಾ ಇನ್ನೋವಾ ಅನಾವರಣ; ಮುಂದಿನ ವರ್ಷ ಭಾರತಕ್ಕೆ


Click it and Unblock the Notifications








