ಆಪಲ್ ವಿದ್ಯುತ್ ಕಾರು 2020ರಲ್ಲಿ ರಸ್ತೆಗೆ ?
ಕೆಲವು ದಿನಗಳ ಹಿಂದೆಯಷ್ಟೇ ನಾವು ಮಾಹಿತಿ ಕೊಟ್ಟಿರುವಂತೆಯೇ ಆಪಲ್‌ನ ರಹಸ್ಯ ತಂಡವು ರಹಸ್ಯ ತಾಣದಲ್ಲಿ ನೂತನ ವಿದ್ಯುತ್ ಚಾಲಿತ ವಾಹನದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ.
ಈಗ ಇದರ ಮುಂದುವರಿದ ಭಾಗವೆಂಬಂತೆ ಆಪಲ್‌ನ ನೂತನ ಕಾರು ಕೆಲವೇ ವರ್ಷಗಳಲ್ಲಿ ರಸ್ತೆ ಪ್ರವೇಶಿಸಲಿದೆ. ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ ಆಪಲ್ ಕಾರು 2020ರ ವೇಳೆಯಾಗುವಾಗ ಬಿಡುಗಡೆಯಾಗಲಿದೆ.

ವಿ.ಸೂ: ಸಾಂದರ್ಭಿಕ ಚಿತ್ರ ಬಳಕೆ
ಐ ಫೋನ್, ಐ ಪ್ಯಾಡ್, ಐ ಪೊಡ್‌ಗಳಂತಹ ಎಲೆಕ್ಟ್ರಾನಿಕ್ ಉತ್ಪನ್ನಗಳಲ್ಲಿ ಮೆರು ಸ್ಥಾನ ಪಡೆದುಕೊಂಡಿರುವ ಆಪಲ್, ವಿದ್ಯುತ್ ಚಾಲಿತ ಕಾರಿನ ಅಭಿವೃದ್ಧಿಯಲ್ಲೂ ಆಕ್ರಮಣಕಾರಿ ನಿಲುವನ್ನು ಅನುಸರಿಸುತ್ತಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ನಿಮಗೆಲ್ಲರಿಗೂ ತಿಳಿದಿರುವಂತೆಯೇ ಗೂಗಲ್‌ನ ಸ್ವಯಂಚಾಲಿತ ಕಾರು ಬಹುತೇಕ ರೂಪವನ್ನು ಪಡೆದುಕೊಂಡಿದ್ದು, ನಿಕಟ ಭವಿಷ್ಯದಲ್ಲೇ ರಸ್ತೆ ತಲುಪಲಿದೆ.
ಈಗ ಆಪಲ್ ಕಾರು ಐಫೋನ್ ತರಹನೇ ಅತ್ಯಂತ ಹೆಚ್ಚು ಬೇಡಿಕೆ ಗಿಟ್ಟಿಸಿಕೊಳ್ಳಲಿದೆಯೇ ಎಂಬುದಕ್ಕೆ ಭವಿಷ್ಯವೇ ಉತ್ತರಿಸಲಿದೆ. ಪ್ರಮುಖವಾಗಿಯೂ ಅಮೆರಿಕದ ವಿದ್ಯುತ್ ಕಾರು ದೈತ್ಯ ಟೆಸ್ಲಾ ಮೋಟಾರ್ಸ್ ವಿರುದ್ಧವಾಗಿ ಆಪಲ್ ತನ್ನ ಎಲೆಕ್ಟ್ರಿಕ್ ಕಾರು ಯೋಜನೆಯನ್ನು ತೊಡಗಿಸಿಕೊಂಡಿದೆ.


Click it and Unblock the Notifications








