ದೇಶದ ಜನಪ್ರಿಯ ಕಾರುಗಳ ಮನಸೊರೆಗೊಳ್ಳುವ ಬಣ್ಣಗಳು!
ಕೆಲವು ನಿರ್ದಿಷ್ಟ ಕಾರುಗಳ ಜನಪ್ರಿಯತೆಯಲ್ಲಿ ಅವುಗಳ ಬಣ್ಣಗಳು ಅಷ್ಟೇ ಪ್ರಾಮುಖ್ಯತೆಯನ್ನು ವಹಿಸುತ್ತದೆ. ಉದಾಹರಣೆಗೆ ಬಿಳಿ ಬಣ್ಣದ ಮಾರುತಿ ಸ್ವಿಫ್ಟ್ ಕಾರು ಬೇಗನೇ ಆಕರ್ಷಣೆಗೊಳಗಾಗುತ್ತದೆ. ಅದೇ ರೀತಿ ಬಣ್ಣಗಳು ಅಂತಹ ನಿರ್ದಿಷ್ಟ ವಾಹನಗಳ ಖರೀದಿಗಳ ಮೇಲೂ ಪ್ರಭಾವವನ್ನು ಬೀರುತ್ತದೆ.
ನಿಮೆಗೆಲ್ಲರಿಗೂ ತಿಳಿದಿರುವಂತೆಯ ಗ್ರಾಹಕರು ತಮ್ಮ ನೆಚ್ಚಿನ ಬಣ್ಣದ ಕಾರಿಗಾಗಿ ಆಗಮನಕ್ಕಾಗಿ ಬುಕ್ಕಿಂಗ್ ಬಳಿಕ ಎಷ್ಟು ಸಮಯ ಬೇಕಾದರೂ ಕಾದು ಕುಳಿತುಕೊಳ್ಳಲು ತಯಾರಾಗಿರುತ್ತಾರೆ. ಇನ್ನು ಸ್ವಲ್ಪ ಆಳಕ್ಕೆ ತೆರಳಿ ಅಧ್ಯಯನ ಮಾಡಿದರೆ ವಾಹನ ತಯಾರಿಕ ಸಂಸ್ಥೆಗಳು ಕೆಲವು ನಿರ್ದಿಷ್ಟ ಬಣ್ಣಗಳ ಹಕ್ಕುಸ್ವಾಮ್ಯವನ್ನು ಪಡೆದಿರುವುದು ವಿಶೇಷ. ಈಗ ದೇಶದಲ್ಲಿ ಮಾರಾಟದಲ್ಲಿರುವ ಕೆಲವು ಜನಪ್ರಿಯ ಮಾದರಿಗಳು ಹಾಗೂ ಅವುಗಳ ಬಣ್ಣಗಳ ಬಗ್ಗೆ ಮಾಹಿತಿಯನ್ನು ನೀಡುವ ಪ್ರಯತ್ನ ಮಾಡಲಿದ್ದೇವೆ.

ಮಾರುತಿ ಸ್ವಿಫ್ಟ್ - ಬಿಳಿ ಅಥವಾ ನೀಲಿ
ಮಾರುತಿ ಸ್ವಿಫ್ಟ್ ದೇಶದ ರಸ್ತೆಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವ ಒಂದು ಮನಮೋಹಕ ಕಾರಾಗಿದೆ. ಅಷ್ಟೇ ಅಲ್ಲದೆ ಬಹುತೇಕ ಗ್ರಾಹಕರು ಮಾರುತಿ ಸ್ವಿಫ್ಟ್ ಬಿಳಿ ಅಥವಾ ನೀಲಿ ಬಣ್ಣದ ಕಾರನ್ನು ಆಯ್ಕೆ ಮಾಡುತ್ತಾರೆ.

ಫೋಕ್ಸ್ ವ್ಯಾಗನ್ ಪೊಲೊ - ಕೆಂಪು
ಸಾಮಾನ್ಯವಾಗಿ ಕೆಂಪು ಬಣ್ಣವು ಎಲ್ಲ ಕಾರುಗಳಿಗೂ ಸೂಕ್ತವೆನಿಸುತ್ತದೆ. ಆದರೆ ತನ್ನದೇ ಆದ ವಿಶಿಷ್ಟ ಶೈಲಿಯೊಂದಿಗೆ ಗುರುತಿಸುವ ಫೋಕ್ಸ್ ವ್ಯಾಗನ್ ಪೊಲೊ ನೋಡುವುದೇ ಚೆಂದ.

ರೆನೊ ಡಸ್ಟರ್ - ಕಂದು
ರೆನೊ ಡಸ್ಟರ್ ಕ್ರೀಡಾ ಬಳಕೆಯ ವಾಹನದ ಯಶಸ್ಸಿನಲ್ಲಿ ಕಂದು ಬಣ್ಣದ ಪಾತ್ರ ನಿರ್ಣಾಯಕವೆನಿಸಿತ್ತು ಅಂದರೆ ತಪ್ಪಾಗಲಾರದು. ಯಾಕೆಂದರೆ ದೇಶದ ಗ್ರಾಹಕರ ಪಾಲಿಗಿದು ಹೊಸತನದ ಅನುಭವವಾಗಿತ್ತು.

ಫೋರ್ಡ್ ಇಕೊಸ್ಪೋರ್ಟ್ - ಕಿತ್ತಳೆ
ಕಿತ್ತಳೆ ಬಣ್ಣದ ಫೋರ್ಡ್ ಇಕೊಸ್ಪೋರ್ಟ್ ನಿಜಕ್ಕೂ ಭಾರತೀಯ ವಾಹನೋದ್ಯಮಕ್ಕೆ ಅತ್ಯುತ್ತಮ ಕೊಡುಗೆಯಾಗಿದೆ. ತಂತ್ರಜ್ಞಾನ, ಗುಣಮಟ್ಟ ಹಾಗೂ ನಿರ್ವಹಣೆ ಜೊತೆಗೆ ಬಣ್ಣ ಕೂಡಾ ಸೇರಿದಾಗ ಇಕೊಸ್ಪೋರ್ಟ್ ಯಶಸ್ಸನ್ನು ಯಾರಿಂದಲೂ ತಡೆಯಲು ಸಾಧ್ಯವಾಗಿಲ್ಲ.

ಆಡಿ ಕಾರುಗಳು - ಬಿಳಿ ಅಥವಾ ಕೆಂಪು
ಇನ್ನು ಸ್ವಲ್ಪ ಐಷಾರಾಮಿ ಕಾರುಗಳ ಬಗ್ಗೆ ಮೆಲುಕು ಹಾಕೋಣವೇ. ಕೆಂಪು ಹಾಗೂ ಬಿಳಿ ಬಣ್ಣಗಳು ಆಡಿ ಕಾರುಗಳಿಗೆ ಕೋಮಲತೆಯನ್ನು ನೀಡುತ್ತದೆ.

ಬಿಎಂಡಬ್ಲ್ಯು ಕಾರುಗಳು - ಕಡು ನೀಲಿ ಬಣ್ಣ
ಅದೇ ರೀತಿ ಕ್ರಿಕೆಟ್‌ನ ಮಾಜಿ ದಿಗ್ಗಜ ಸಚಿನ್ ತೆಂಡೂಲ್ಕರ್ ಮುಖ್ಯ ಪ್ರಚಾರ ರಾಯಭಾರಿಯಾಗಿರುವ ಬಿಎಂಡಬ್ಲ್ಯು ಕಾರುಗಳಿಗೆ ಕಡು ನೀಲಿ ಬಣ್ಣ ಹೆಚ್ಚು ಸೂಕ್ತವೆನಿಸುತ್ತದೆ.

ಹ್ಯುಂಡೈ ಎಲೈಟ್ ಐ20 - ಬೆಳ್ಳಿ
ಸಕತ್ ಪ್ರೀಮಿಯಂ ವಿನ್ಯಾಸವನ್ನು ಮೈಗೂಡಿಸಿ ಬಂದಿರುವ ಹ್ಯುಂಡೈ ಎಲೈಟ್ ಐ20 ಹ್ಯಾಚ್ ಬ್ಯಾಕ್ ಕಾರಿಗೆ ಬೆಳ್ಳಿ ಬಣ್ಣವು ಅತ್ಯುತ್ತಮ ಗುಣಲಕ್ಷಣವನ್ನು ನೀಡುತ್ತದೆ.

ಟಾಟಾ ನ್ಯಾನೋ - ಹಳದಿ
ದೇಶದ ಅತಿ ಅಗ್ಗದ ನ್ಯಾನೋ ಕಾರುಗಳ ರಂಗಿನ ಬಗ್ಗೆ ಹಲವಾರು ಆರೋಪಗಳು ಕೇಳಿ ಬಂದಿವೆ. ಆದರೆ ಹಳದಿ ಮೈ ಬಣ್ಣದ ಈ ಚೊಕ್ಕದಾದ ಕಾರು ಜನಮನ್ನಣೆ ಗೆಲ್ಲವಲ್ಲಿ ಯಶ ಕಂಡಿದೆ.

ಹ್ಯುಂಡೈ ವೆರ್ನಾ - ಬಿಳಿ
ಮಾರುತಿ ಸುಜುಕಿ ಹಾಗೂ ಹೋಂಡಾ ಸಿಟಿಗಳಂತಹ ನಾವೀನ್ಯತೆಯ ಕಾರುಗಳಿಗೆ ಹೋಲಿಸಿದಾಗ ಸದ್ಯ ಹ್ಯುಂಡೈ ವೆರ್ನಾ ಮಾರಾಟ ಸ್ವಲ್ಪ ಕಡಿಮೆಯಾಗಿರಬಹುದು. ಆದರೆ ಬಿಳಿ ವರ್ಣವು ವೆರ್ನಾ ಕಾರಿಗೆ ಐಷಾರಾಮಿ ಲುಕ್ ನೀಡುತ್ತದೆ.

ಹೋಂಡಾ ಅಮೇಜ್ - ಮರೂನ್
ಮರೂನ್ ಅಥವಾ ಕೆಂಗಂದು ಬಣ್ಣವು ಹೋಂಡಾ ಅಮೇಜ್ ವೈವಿಧ್ಯವನ್ನು ಇನ್ನಷ್ಟು ಇಮ್ಮಡಿಗೊಳಿಸಿತ್ತು. ಇದು ಮಾರಾಟದ ಮೇಲೂ ಪ್ರತಿಫಲಿಸಿತ್ತು.

ಟೊಯೊಟಾ ಇನ್ನೋವಾ - ಶ್ರೀಗಂಧದ ಬಣ್ಣ
ಶ್ರೀಗಂಧದ ಪರಿಮಳ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಆದರೆ ಬೆಲೆಯೂ ಅಷ್ಟೇ ದುಬಾರಿಯಾಗುತ್ತದೆ. ಇಲ್ಲಿ ಚಂದನ ಲೇಪಿತವಾದಂತಹ ಇನ್ನೋವಾ ಕಾರಿಗೆ ಪ್ರೀಮಿಯಂ ನೋಟ ನೀಡಲು ಯಶಸ್ವಿಯಾಗಿತ್ತು.

ಒಟ್ಟಿನಲ್ಲಿ ಕಾರುಗಳ ಬಣ್ಣಗಳು ನಿಮ್ ವೈಯಕ್ತಿಕ ಬಿಟ್ಟಿದ್ದು. ಕೆಲವರು ಜ್ಯೋತಿಷಿಗಳ ಸಲಹೆಯಂತೆ ವಾಹನಗಳ ಬಣ್ಣಗಳನ್ನು ಆಯ್ಕೆ ಮಾಡುವುದಾದರೆ ಇನ್ನು ಕೆಲವರು ತಮ್ಮ ಪ್ರೇಯಸಿಯೋ ಅಥವಾ ಪ್ರೀತಿ ಪಾತ್ರರ ಬಯಕೆಗಳಿಗನುಸಾರವಾಗಿ ವಾಹನಗಳ ಬಣ್ಣಗಳನ್ನು ಆಯ್ಕೆ ಮಾಡುತ್ತಾರೆ. ಈಗ ಮೇಲೆ ತಿಳಿಸಿದ ಮಾಡೆಲ್ ಗಳ ಪೈಕಿ ನಿಮಗಿಷ್ಟವಾದ ಕಾರು ಯಾವುದು? ಈ ಬಗ್ಗೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಮುಕ್ತವಾಗಿ ಚರ್ಚಿಸಿರಿ.


Click it and Unblock the Notifications








