ಮರು ಇಂಧನ ತುಂಬಿಸದೆ 14 ರಾಷ್ಟ್ರಗಳನ್ನು ದಾಟಿ ಬಂದ ಆಡಿ ದಾಖಲೆ

Written By:

ಮರು ಇಂಧನ ತುಂಬಿಸದೆ ಒಂದು ಕಾರು ಎಷ್ಟು ದೂರ ಸಾಗಬಹುದು? ಬಹುಶ: ಇಂಧನ ಕ್ಷಮತೆಗೆ ಪರಿಪೂರ್ಣ ಪರೀಕ್ಷೆ ಇದಾಗಿರಬಹುದು. ಹೌದು, ಈ ಎಲ್ಲ ಸವಾಲುಗಳನ್ನು ಮೆಟ್ಟಿ ಬಂದಿರುವ ಆಡಿಯ ಎ6 ಟಿಡಿಐ ಕಾರು ನೂತನ ಗಿನ್ನೆಸ್ ದಾಖಲೆ ಬರೆದಿದೆ.

ಸಿಂಗಲ್ ಡೀಸೆಲ್ ಟ್ಯಾಂಕ್ ನಲ್ಲಿ 14 ರಾಷ್ಟ್ರಗಳನ್ನು ಆಡಿ ಎ6 ಟಿಡಿಐ ಕಾರು ದಾಟಿ ಬಂದಿದೆ. ಅಂದರೆ ಒಟ್ಟು 1158.9 ಮೈಲು ದೂರವನ್ನು (1865 ಕೀ.ಮೀ.) ದಾಟಿ ಬಂದಿದೆ. ಈ ಮೂಲಕ ಪ್ರತಿ ಗ್ಯಾಲನ್ ಗೆ ಸರಾಸರಿ 75.9 ಮೈಲು ಮೈಲೇಜ್ (ಪ್ರತಿ ಲೀಟರ್ ಗೆ 32.3 ಕೀ.ಮೀ.) ಕಾಪಾಡಿಕೊಂಡಿದೆ.

ಆಡಿ ಎ6 ಟಿಡಿಐ ಅಲ್ಟ್ರಾ

ಆಡಿಯ ಬೃಹತ್ 73 ಲೀಟರ್ ಇಂಧನ ಟ್ಯಾಂಕ್ ನ ನೆರವಿನಿಂದ ಇಂತಹದೊಂದು ದಾಖಲೆ ನಿರ್ಮಿಸಲಾಗಿದೆ. ಇದಕ್ಕೆ ರಾಯಲ್ ಆಟೋಮೊಬೈಲ್ ಕ್ಲಬ್ (ಆರ್‌ಎಸಿ) ಕೈಜೋಡಿಸಿಕೊಂಡಿತ್ತು. ಅಲ್ಲದೆ ಸರಾಸರಿ ಗಂಟೆಗೆ 78 ಕೀ.ಮೀ. ವೇಗದಲ್ಲಿ ಸಂಚರಿಸಿತ್ತು.

ನೂತನ ಎ6 ಟಿಡಿಐ ಅಲ್ಟ್ರಾ ಕಾರನ್ನು ಆಂಡ್ರ್ಯೂ ಫ್ರಾಂಕೆಲ್ ಮತ್ತು ರೇಸಿಂಗ್ ಚಾಲಕ ರೆಬೆಕಾ ಜಾಕ್ಸನ್ ಚಾಲನೆ ಮಾಡಿದ್ದರು. ಹಾಲೆಂಡ್‌ನಿಂದ ಆರಂಭವಾದ ಈ 28 ತಾಸುಗಳ ಪಯಣವು ಬೆಲ್ಜಿಯಂ, ಲಕ್ಸೆಮ್ ಬರ್ಗ್, ಫ್ರಾನ್ಸ್, ಸ್ವಿಜರ್ಲೆಂಡ್, ಲಿಚ್ಟೆನ್ಸ್ಟಿನ್, ಆಸ್ಟ್ರೀಯಾ, ಜರ್ಮನಿ, ಇಟಲಿ, ಸ್ಲೋವೆನಿಯಾ, ಕ್ರೋವೇಶಿಯಾ, ಬೋಸ್ನಿಯಾ ಮತ್ತು ಸೆರ್ಬಿಯಾ ರಾಷ್ಟ್ರಗಳನ್ನು ತಲುಪಿತ್ತು.

ಆಡಿ ಎ6 ಟಿಡಿಐ ಅಲ್ಟ್ರಾ

ಆಡಿ ಆರ್6 ಟಿಡಿಐ ಪಯಣ ನಿರೀಕ್ಷೆ ಮಾಡಿದಷ್ಟು ಸುಲಭವಾಗಿರಲಿಲ್ಲ. ವಾಹನ ದಟ್ಟಣೆಯಿಂದ ಹಿಡಿದು ಇಕ್ಕಟ್ಟಾದ ರಸ್ತೆ ಪರಿಸ್ಥಿತಿ ಮುಂತಾದ ಸವಾಲುಗಳು ಎದುರಾಗಿದ್ದವು. ಒಟ್ಟಿನಲ್ಲಿ ಆಧುನಿಕ ಜಗತ್ತಿನ ಅತ್ಯುತ್ತಮ ಇಂಧನ ಕ್ಷಮತೆಯ ಎಕ್ಸಿಕ್ಯೂಟಿವ್ ಕಾರು ಎಂಬುದನ್ನು ಸಾಬೀತುಪಡಿಸಿದೆ.

ಆಡಿ ಎ6 ಟಿಡಿಐ ಅಲ್ಟ್ರಾ ಕಾರು 2.0 ಲೀಟರ್ ಎಂಜಿನಿಂದ ನಿಯಂತ್ರಿಸಲ್ಪಡುತ್ತಿದ್ದು, 187 ಅಶ್ವಶಕ್ತಿ ಉತ್ಪಾದಿಸುತ್ತದೆ. ಇದರಲ್ಲಿ ಎಸ್ ಟ್ರಾನಿಕ್ 7 ಸ್ಪೀಡ್ ಕ್ಲಚ್ ಗೇರ್ ಬಾಕ್ಸ್ ಸಹ ಬಳಕೆ ಮಾಡಲಾಗಿದೆ.

Read more on ಆಡಿ audi
English summary
The Audi A6 TDI ultra is now officially a Guinness World Record holder, having covered 14 countries on a single tank of diesel.
Story first published: Tuesday, June 16, 2015, 14:08 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark