ಜೂ.18ರಂದು ಆಡಿ ಕ್ಯೂ3 ಫೇಸ್ ಲಿಫ್ಟ್ ಬಿಡುಗಡೆ

Written By:

ಪ್ರತಿಯೊಂದು ವಾಹನದ ಅಸ್ತಿತ್ವದಲ್ಲಿ ಆ ನಿರ್ದಿಷ್ಟ ಮಾದರಿಯನ್ನು ಕಾಲ ಕಾಲಕ್ಕೆ ತಕ್ಕಂತೆ ಮಾರ್ಪಾಡುಗೊಳಿಸುವುದು ಅತಿ ಅಗತ್ಯವಾಗಿದೆ. ಹಾಗೆ ನೋಡಿದಾಗ ಜಗತ್ತಿನ ಪ್ರತಿಯೊಂದು ವಾಹನ ಸಂಸ್ಥೆಗಳು ತನ್ನ ಜನಪ್ರಿಯ ಮಾದರಿಗಳನ್ನು ಆಧುನಿಕತೆಗೆ ತಕ್ಕಂತೆ ಮಾರ್ಪಾಡುಗೊಳಿಸುತ್ತಲೇ ಇರುತ್ತದೆ.

ಇಂತಹದೊಂದು ಪ್ರವೃತ್ತಿಯನ್ನು ಜರ್ಮನಿಯ ಐಷಾರಾಮಿ ಕಾರು ತಯಾರಿಕ ಸಂಸ್ಥೆಯಾಗಿರುವ ಆಡಿ ಕೂಡಾ ಮೈಗೂಡಿಸಿ ಬಂದಿದೆ. ಇದಕ್ಕೊಂದು ಹೊಚ್ಚ ಹೊಸ ಉದಾಹರಣೆ ತನ್ನ ಫ್ಲ್ಯಾಗ್ ಶಿಪ್ ಮಾದರಿ ಆಡಿ ಕ್ಯೂ3.

ಆಡಿ ಕ್ಯೂ3

ಹೊಸ ಸ್ವರೂಪವನ್ನು ಪಡೆದುಕೊಳ್ಳಲಿರುವ ಆಡಿ ಕ್ಯೂ3 ಇದೇ ಮುಂಬರುವ 2015 ಜೂನ್ 18ರಂದು ಬಿಡುಗಡೆಯಾಗಲಿದೆ. ನೂತನ ಪ್ರೀಮಿಯಂ ಎಸ್ ಯುವಿ ಮಾದರಿಯು ದೇಶದ ಮಾರುಕಟ್ಟೆಯಲ್ಲಿ ಉತ್ತಮ ಮಾರಾಟ ಕಾಯ್ದುಕೊಳ್ಳುವ ನಿರೀಕ್ಷೆಯಲ್ಲಿದೆ.

ಈಗಾಗಲೇ 2014 ನವೆಂಬರ್ ತಿಂಗಳಲ್ಲಿ ಬ್ರಿಟನ್ ತಲುಪಿರುವ ಆಡಿ ಕ್ಯೂ3 ಫೇಸ್ ಲಿಫ್ಟ್ ಈಗ ಭಾರತಕ್ಕೂ ಕಾಲಿಡುತ್ತಿದೆ. ಇದು ಭಾರತದ ಔರಾಂಗಬಾದ್ ಘಟಕದಲ್ಲಿ ನಿರ್ಮಾಣವಾಗಲಿದ್ದು, ಸ್ಪರ್ಧಾತ್ಮಕ ಬೆಲೆ ಕಾಪಾಡಲು ನೆರವಾಗಲಿದೆ.

ಆಡಿ ಕ್ಯೂ3

ಪ್ರಮುಖವಾಗಿಯೂ ಕಾರಿನ ಅಂದತೆ ಸುಧಾರಣೆಗೆ ಹೆಚ್ಚಿನ ಆದ್ಯತೆ ಕೊಡಲಾಗಿದೆ. ಇದರಂತೆ ಹೊರಮೈ ಜೊತೆಗೆ ಒಳಮೈಯಲ್ಲಿ ಬದಲಾವಣೆ ಕಂಡುಬರಲಿದೆ. ಮುಂಭಾಗದ ಗ್ರಿಲ್ ಪರಿಷ್ಕೃತಗೊಳಿಸಲಾಗಿದ್ದು, ಇಂಟೆಗ್ರೇಡಟ್ ಹೆಡ್ ಲೈಟ್ ಕ್ಲಸ್ಟರ್, ಎಲ್ ಇಡಿ ಲೈಟಿಂಗ್ ಸೇವೆ ಮುಂತಾದ ವೈಶಿಷ್ಟ್ಯಗಳು ಕಂಡುಬರಲಿದೆ. ಇನ್ನು ಟೈಲ್ ಲ್ಯಾಂಪ್ ಸಹ ಬದಲಾವಣೆಯಾಗಲಿದೆ.

ಅಂತೆಯೇ ಕಾರಿನೊಳಗೆ ಹೊಸತಾದ ಸ್ಟೀರಿಂಗ್ ವೀಲ್, ಪರಿಷ್ಕೃತ ಡ್ಯಾಶ್ ಬೋರ್ಡ್ ಹಾಗೂ ಹೊಸ ಬಣ್ಣಗಳ ಆಯ್ಕೆಯನ್ನು ನೀವು ಪಡೆಯಬಹುದಾಗಿದೆ. ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ. ಇದು ಪ್ರಮುಖವಾಗಿಯೂ ಬಿಎಂಡಬ್ಲ್ಯು ಎಕ್ಸ್1 ಹಾಗೂ ಮರ್ಸಿಡಿಸ್ ಬೆಂಝ್ ಜಿಎಲ್ ಎ ಮಾದರಿಗಳಿಗೆ ಪೈಪೋಟಿ ಒಡ್ಡಲಿದೆ.

Read more on ಆಡಿ audi
English summary
Audi has sketched and onslaught of vehicle launches in India during 2015. The German manufacturer recently launched India's very first performance estate wagon, RS 6 Avant.
Story first published: Saturday, June 6, 2015, 14:45 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark